Advertisement

ಹೈಟೆನ್ಶನ್‌ ವಯರ್‌ ಬಿದ್ದು ಬೈಕ್‌ ಸವಾರರಿಬ್ಬರ ದಾರುಣ ಸಾವು

12:26 PM Nov 29, 2017 | udayavani editorial |

ಸಂಭಾಲ್‌, ಉತ್ತರ ಪ್ರದೇಶ : ಇಲ್ಲಿನ ಮಂದಾಲಿ ಗ್ರಾಮದಲ್ಲಿ ಹೈಟನ್‌ಶನ್‌ ವಯರ್‌ ಮೈಮೇಲೆ ಬಿದ್ದ ಇಬ್ಬರು ವಿದ್ಯುದಾಘಾತದಿಂದ ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.

Advertisement

ಮೃತರನ್ನು ರೇವಾತ್‌ ರಾಮ್‌ 32 ಮತ್ತು ರಾಮ್‌ ಕಿಶೋರ್‌ 32 ಎಂದು ಗುರುತಿಸಲಾಗಿದೆ. ಇವರು ಮೋಟಾರ್‌ ಸೈಕಲ್‌ನಲ್ಲಿ ಹುಸೇನಿ ರೋಡ್‌ ಮೂಲಕ ಬರುತ್ತಿದ್ದಾಗ ಅವರ ಮೇಲೆ ಹೈಟೆನ್‌ಶನ್‌ ವಯರ್‌ ಬಿತ್ತು. ಪರಿಣಾಮವಾಗಿ ಅವರು ಸ್ಥಳದಲ್ಲೆ ಸಾವಪ್ಪಿದರು ಎಂದು ನಖಾಸಾ ಪೊಲೀಸ್‌ ಠಾಣೆ ಎಸ್‌ಎಚ್‌ಓ ದುಗೇìಶ್‌ ಕುಮಾರ್‌ ತಿಳಿಸಿದರು.

ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೇಸು ದಾಖಲಾಗಿ ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next