Advertisement

Lok Sabha: ಜೈಲಿಂದ ಗೆದ್ದ ಇಬ್ಬರು ಸಂಸದರ ಪ್ರಮಾಣ ವಚನ ಹೇಗೆ?

10:58 AM Jun 06, 2024 | Team Udayavani |

ನವದೆಹಲಿ: ಉಗ್ರ ಚಟುವಟಿಕೆಗಳ ಆಧಾರದ ಮೇಲೆ ಜೈಲಿನಲ್ಲಿರುವ ಇಬ್ಬರು ಆರೋಪಿಗಳು ಸಾರ್ವತ್ರಿಕ ಚುನಾವಣೆಯಲ್ಲಿ
ಗೆಲುವು ಸಾಧಿಸಿದ್ದಾರೆ. ಜೈಲಿನಲ್ಲಿರುವ ಇವರು 18ನೇ ಲೋಕಸಭಾ ಕಲಾಪಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲವಾದರೂ,
ಸಂವಿಧಾನ ಪ್ರಕಾರ ಪ್ರಮಾಣವಚನ ಸ್ವೀಕರಿಸಲು ಅವಕಾಶವಿದೆ!

Advertisement

ಇದನ್ನೂ ಓದಿ:Stock Market: 75,000 ಗಡಿ ದಾಟಿದ ಬಾಂಬೆ ಷೇರುಪೇಟೆ ಸೂಚ್ಯಂಕ, ಲಾಭ ಗಳಿಸಿದ ಷೇರು ಯಾವುದು?

ಜೈಲಿನಲ್ಲಿರುವ ಸಿಖ್‌ ಧರ್ಮಬೋಧಕ ಅಮೃತ್‌ಪಾಲ್‌ ಸಿಂಗ್‌ ಪಂಜಾಬ್‌ನ ಖದೂರ್‌ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರೆ,
ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಿಂದ ಎಂಜಿನಿಯರ್‌ ರಶೀದ್‌ ಎಂದೂ ಕರೆಯಲಾಗುವ ಶೇಖ್‌ ಅಬ್ದುಲ್ಲಾ ರಶೀದ್‌
ಆಯ್ಕೆಯಾಗಿದ್ದಾರೆ. ಇವರಿಬ್ಬರ ಮೇಲೂ ಉಗ್ರ ಚಟುವಟಿಕೆಗಳ ಆರೋಪಗಳಿವೆ.

ಎಂಜಿನಿಯರ್‌ ರಶೀದ್‌ 2019ರಿಂದ ತಿಹಾರ್‌ ಜೈಲಿನಲ್ಲಿದ್ದರೆ, ಅಮೃತ್‌ಪಾಲ್‌ ಸಿಂಗ್‌ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿದ್ದಾನೆ.
ಇವರಿಬ್ಬರು ಜೈಲು ಅಧಿಕಾರಿಗಳ ವಿಶೇಷ ಅನುಮತಿ ಪಡೆದುಕೊಂಡು, ಸಂಸತ್ತಿಗೆ ಆಗಮಿಸಿ ಪ್ರತಿಜ್ಞಾವಿಧಿ ಸ್ವೀಕರಿಸ
ಬೇಕಾಗುತ್ತದೆ. ಬಳಿಕ, ಸ್ಪೀಕರ್‌ಗೆ ಪತ್ರ ಬರೆದು ಲೋಕಸಭೆ ಕಾರ್ಯ ಕಲಾಪಗಳಲ್ಲಿ ಪಾಲ್ಗೊಳ್ಳದಿರುವ ಕಾರಣ ನೀಡಿ, ಅವರಿಂದ
ಅನುಮತಿ ಪಡೆದು ಗೈರು ಹಾಜರಾಗ ಬೇಕಾಗುತ್ತದೆ. ಸ್ಪೀಕರ್‌ ಅನುಮತಿ ಇಲ್ಲದೇ ಗೈರಾದರೆ ಅಂಥವರು ಅನರ್ಹಗೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next