ಅಮರಾವತಿ/ಹೈದರಾಬಾದ್: ವಾರಗಳ ಹಿಂದೆ ಅಮೆರಿಕಕ್ಕೆ ಹೋಗಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ತೆಲಂಗಾಣದ ವನಪರ್ತಿಯ ಒಬ್ಬ ಮತ್ತು ಆಂಧ್ರಪ್ರದೇಶದ ಶ್ರೀಕಾಕುಲಂನ ಇನ್ನೊಬ್ಬ ವಿದ್ಯಾರ್ಥಿ ಯುಎಸ್‌ನಲ್ಲಿರುವ ತಮ್ಮ ಕನೆಕ್ಟಿಕಟ್ ವಸತಿಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಕುಟುಂಬದ ಸದಸ್ಯರು ಸೋಮವಾರ ತಿಳಿಸಿದ್ದಾರೆ.
ವಿದ್ಯಾರ್ಥಿಗಳನ್ನು ತೆಲಂಗಾಣದ ವನಪರ್ತಿಯ ಜಿ ದಿನೇಶ್ (22) ಮತ್ತು ಆಂಧ್ರಪ್ರದೇಶದ ಶ್ರೀಕಾಕುಲಂ ನಿವಾಸಿ ನಿಕೇಶ್ (21) ಎಂದು ಗುರುತಿಸಲಾಗಿದೆ.
ಹತ್ತಿರದ ಕೋಣೆಯಲ್ಲಿ ವಾಸಿಸುವ ದಿನೇಶ್ ಸ್ನೇಹಿತರು ಶನಿವಾರ ರಾತ್ರಿ ನಮಗೆ ಕರೆ ಮಾಡಿ ಅವರ ಸಾವಿನ ಬಗ್ಗೆ ಮತ್ತು ಅವರ ರೂಮ್‌ಮೇಟ್‌ನ ಬಗ್ಗೆ ತಿಳಿಸಿದರು. ಅವರು ಹೇಗೆ ಮೃತಪಟ್ಟಿದ್ದಾರೆ ಎಂಬ ಬಗ್ಗೆ ನಮಗೆ ಯಾವುದೇ ಸುಳಿವು ಸಿಕ್ಕಿಲ್ಲ,” ಎಂದು ದಿನೇಶ್ ಕುಟುಂಬಸ್ಥರು ತಿಳಿಸಿದ್ದಾರೆ.
ಕುಟುಂಬದ ಸದಸ್ಯರ ಪ್ರಕಾರ, ದಿನೇಶ್ 2023, ಡಿಸೆಂಬರ್ 28 ರಂದು ಉನ್ನತ ವ್ಯಾಸಂಗಕ್ಕಾಗಿ ಯುಎಸ್‌ನ ಕನೆಕ್ಟಿಕಟ್‌ನ ಹಾರ್ಟ್‌ಫೋರ್ಡ್‌ಗೆ ಹೋಗಿದ್ದು, ನಿಕೇಶ್ ಕೆಲವು ದಿನಗಳ ನಂತರ ತಲುಪಿದ್ದ. ಇಬ್ಬರೂ ಸಾಮಾನ್ಯ ಸ್ನೇಹಿತರ ಪರಸ್ಪರ ಸ್ನೇಹಿತರಾಗಿದ್ದರು ಮತ್ತು ಯುಎಸ್ ಗೆ ಹೋದ ನಂತರ ರೂಮ್‌ಮೇಟ್‌ಗಳಾಗಿದ್ದರು.
ಮೃತದೇಹಗಳನ್ನು ಮರಳಿ ತರಲು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರ ಸಹಾಯವನ್ನು ಕೋರಲಾಗಿದೆ. ವಿದೇಶಾಂಗ ಇಲಾಖೆಯನ್ನೂ ಸಂಪರ್ಕಿಸಲಾಗಿದೆ.