Advertisement

ಶ್ರೀನಗರ:ಎಟಿಎಂ ಗಾರ್ಡ್‌ನ ರೈಫ‌ಲ್‌ ಕಸಿದ ಇಬ್ಬರು ಶಂಕಿತರು ಅರೆಸ್ಟ್‌

06:53 AM Mar 12, 2019 | Team Udayavani |

ಶ್ರೀನಗರ : ಎಟಿಎಂ ಗಾರ್ಡ್‌ ಕೈಯಿಂದ ಬಂದೂಕನ್ನು ಕಸಿದುಕೊಂಡು ಪರಾರಿಯಾಗಿದ್ದ ಇಬ್ಬರು ಶಂಕಿತರನ್ನು ಪೊಲೀಸರು ಜಮ್ಮು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ  ಬಂಧಿಸಿದ್ದಾರೆ.

Advertisement

ದಕ್ಷಿಣ ಕಾಶ್ಮೀರದ ಕುಂದುಲಾನ್‌ ಪ್ರದೇಶದಲ್ಲಿ ಎಟಿಎಂ ಗಾರ್ಡ್‌ ಕೈಯಿಂದ 12 ಬೋರ್‌ ರೈಫ‌ಲನ್ನು ಶಂಕಿತರು ಕಳೆದ ಬುಧವಾರ ಕಸಿದುಕೊಂಡು ಪರಾರಿಯಾಗಿದ್ದರು.

ತನಿಖೆ ನಡೆಸಿದ ಪೊಲೀಸರು ಈ ಅಪರಾಧದಲ್ಲಿ ಶಾಮೀಲಾಗಿದ್ದ ಇಬ್ಬರು ಶಂಕಿತರನ್ನು ಬಂಧಿಸಿ ಅವರು ಕಸಿದುಕೊಂಡಿದ್ದ ರೈಫ‌ಲನ್ನು ವಶಪಡಿಸಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next