ಬೆಂಗಳೂರು: ನಗರದ ಮಾರತಹಳ್ಳಿ ಹಾಗೂ ಮಹದೇವಪುರ ಪೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಪ್ರತಿಷ್ಠಿತ ಚಿನ್ನಾಭರಣ ಸಂಸ್ಥೆ ಜೋಯಾಲುಕ್ಕಾಸ್‌ನ ನೂತನ ಮಳಿಗೆಗಳು ಕಾರ್ಯಾರಂಭವಾಗಿವೆ. ಜೋಯಾಲುಕ್ಕಾಸ್‌ನ ನೂತನ ಮಳಿಗೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಚಿನ್ನ, ವಜ್ರ, ಅಮೂಲ್ಯ ಹರಳುಗಳು, ಪ್ಲಾಟಿನಂ ಮತ್ತು ಮುತ್ತಿನ ವಿವಿಧ ವಿನ್ಯಾಸಗಳ ಅಭರಣಗಳ ಸಂಗ್ರಹವಿದ್ದು, ಸಾಂಪ್ರದಾಯಿಕ, ಸಮಕಾಲೀನ ಮತ್ತು ಅಂತಾರಾಷ್ಟ್ರೀಯ ವಿನ್ಯಾಸಗಳು ಗ್ರಾಹಕರಿಗೆ ದೊರೆಯಲಿವೆ.
ಮಾರತಹಳ್ಳಿಯ ಮಳಿಗೆಯನ್ನು ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಮತ್ತು ಫಿನಿಕ್ಸ್ ಮಾರ್ಕೆಟ್ ಸಿಟಿ ಮಳಿಗೆಯನ್ನು ಐಜಿಪಿ ಡಿ.ರೂಪಾ ಅವರು ಶನಿವಾರ ಉದ್ಘಾಟಿಸುವ ಮೂಲಕ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ಪ್ರಾದೇಶಿಕ ಮಾರ್ಕೆಟಿಂಗ್ ಉಸ್ತುವಾರಿ ಎಸ್.ಸುದೇಶ್, ದೇಶದಾದ್ಯಂತ ಈಗಾಗಲೇ 72 ಮಳಿಗೆಗಳನ್ನು ಜೋಯಾಲುಕ್ಕಾಸ್ ಹೊಂದಿದ್ದು, ಶನಿವಾರ ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆಗಳನ್ನು ಆರಂಭಿಸಿದೆ. ಗ್ರಾಹಕರ ಅನುಕೂಲತೆಗೆ ಅನುಗುಣವಾಗಿ ಮಾರ್ಚ್ ವೇಳೆಗೆ ನಗರದ ಯಲಹಂಕ, ಕಮ್ಮನಹಳ್ಳಿ ಸೇರಿ ಮೂರು ಕಡೆಗಳಲ್ಲಿ ಮಳಿಗೆಗಳನ್ನು ಆರಂಭಿಸುವ ಮೂಲಕ ಉತ್ತಮ ಸೇವೆ ನೀಡಲು ಮುಂದಾಗಿದ್ದೇವೆ ಎಂದರು.
ಮಳಿಗೆಗೆ ಭೇಟಿ ನೀಡಿ ಚಿನ್ನ ಖರೀದಿಯಲ್ಲಿ ತೊಡಗಿದ್ದ ಗ್ರಾಹಕಿ ವೀಣಾ ಅವರು, ಜೋಯಾಲುಕ್ಕಾಸ್‌ನಲ್ಲಿ ಚಿನ್ನಾಭರಣಗಳ ವಿನ್ಯಾಸ ಅತ್ಯಾಕರ್ಷಕವಾಗಿರುತ್ತವೆ. ಈ ಹಿಂದೆ ಸಂಚಾರ ದಟ್ಟಣೆಯ ನಡುವೆಯೇ ಎಂ.ಜಿ.ರಸ್ತೆ, ಮಲ್ಲೇಶ್ವರ ಅಥವಾ ಜಯನಗರದ ಮಳಿಗೆಗಳಿಗೆ ಹೋಗಬೇಕಿತ್ತು. ಆದರೀಗ ಇದೀಗ ನಮ್ಮ ಭಾಗ ದಲ್ಲಿಯೇ ಎರಡು ಮಳಿಗೆಗಳು ಆರಂಭವಾಗಿರುವುದು ಅನುಕೂಲವಾಗಿದೆ ಎಂದರು.
ನೂತನ ಮಳಿಗೆಗಳ ಉದ್ಘಾಟನೆ ವೇಳೆ ಕಾರ್ಯಕಾರಿ ನಿರ್ದೇಶಕ ಪಿ.ಡಿ.ಜೋಸ್, ಉಪಪ್ರಧಾನ ವ್ಯವಸ್ಥಾಪಕ (ರಿಟೇಲ್) ಪಿ.ಡಿ.ಫ್ರಾನ್ಸಿಸ್, ಪಿ.ಆರ್.ಜಾರ್ಜ್ ಸೇರಿದಂತೆ ಪ್ರಮುಖರು ಹಾಜರಿದ್ದರು.