Advertisement

ಕಟ್ಟಡ ಕುಸಿದು ಇಬ್ಬರು ಸಾವು, ಹಲವರಿಗೆ ಗಾಯ

09:31 AM Sep 04, 2019 | Team Udayavani |

ನವದೆಹಲಿ: ನಿರ್ಮಾಣ ಹಂತದಲ್ಲಿದ್ದ  ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿ, ಹಲವರು ಗಾಯಗೊಂಡ ದುರ್ಘಟನೆ ದೆಹಲಿಯ ಸಿಲಾಂಪುರದಲ್ಲಿ ನಡೆದಿದೆ.

Advertisement

ಕಟ್ಟಡದ ಅವಶೇಷಗಳಡಿಯಲ್ಲಿ ಹಲವರು ಸಿಲುಕಿರುವ ಶಂಕೆಯಿದ್ದು ಈಗಾಗಲೇ ಆರು ಮಂದಿಯನ್ನು ರಕ್ಷಿಸಲಾಗಿದೆ.

ಮೃತಪಟ್ಟವರಲ್ಲಿ ಒಬ್ಬರನ್ನು ಹೀನಾ(22) ಎಂದು ಗುರುತಿಸಲಾಗಿದ್ದು , ಮತ್ತೊಬ್ಬರ ಕುರಿತು ಮಾಹಿತಿ ತಿಳಿದುಬಂದಿಲ್ಲ

ಪ್ರತ್ಯಕ್ಷದರ್ಶಿಗಳ ಪ್ರಕಾರ , ಕಟ್ಟಡ ಕುಸಿಯುವಾಗ ಕೆಳ ಅಂತಸ್ತಿನಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿತ್ತು, ಅಲ್ಲಿ ಹಲವು ಮಂದಿ ಸಿಲುಕಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next