Advertisement

ಸರಣಿಯಲ್ಲಿ 2 ಡೇ-ನೈಟ್‌ ಟೆಸ್ಟ್‌: ಆಸೀಸ್‌ ಯೋಜನೆ

10:02 AM Dec 07, 2019 | Sriram |

ಮೆಲ್ಬರ್ನ್: ಭಾರತ ತನ್ನ ಕ್ರಿಕೆಟ್‌ ಇತಿಹಾಸದ ಮೊದಲ ಡೇ-ನೈಟ್‌ ಟೆಸ್ಟ್‌ ಪಂದ್ಯವನ್ನು ಯಶಸ್ವಿಯಾಗಿ ಆಡಿ ಮುಗಿಸಿದೆ. ಮುಂದೆ ಭಾರತ ಪ್ರವಾಸ ಕೈಗೊಳ್ಳಲಿರುವ ತಂಡಗಳು ಕನಿಷ್ಠ ಒಂದು ಹಗಲು-ರಾತ್ರಿ ಪಂದ್ಯದಲ್ಲಾ ದರೂ ಪಾಲ್ಗೊಳ್ಳಬೇಕೆಂಬ ಬಿಸಿಸಿಐ ಯೋಜನೆ ನಿಧಾನವಾಗಿ ಕಾರ್ಯರೂಪಕ್ಕೆ ಬರುವ ಸೂಚನೆಯೊಂದು ಲಭಿಸಿದೆ.

Advertisement

ಇದೇ ವೇಳೆ “ಕ್ರಿಕೆಟ್‌ ಆಸ್ಟ್ರೇಲಿಯ’ (ಸಿಎ) ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. 2020-21ರ ಸರಣಿಗಾಗಿ ಭಾರತ ತಂಡದ ಆಗಮನದ ವೇಳೆ 2 ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯಗಳನ್ನು ಆಯೋಜಿಸುವ ಯೋಜನೆಯೊಂದನ್ನು ಹಾಕಿಕೊಂಡಿದೆ. ಬಿಸಿಸಿಐ ಜತೆ ಚರ್ಚಿಸಿ ಮುಂದಿನ ಹೆಜ್ಜೆ ಇಡಲು ಸಿಎ ನಿರ್ಧರಿಸಿದೆ. ಆದರೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಈಗಾಗಲೇ ಪ್ರತಿಕ್ರಿಯಿಸಿದ್ದು, ಸರಣಿಯಲ್ಲಿ 2 ಡೇ-ನೈಟ್‌ ಟೆಸ್ಟ್‌ ಪಂದ್ಯ ಜಾಸ್ತಿ ಯಾಯಿತು ಎಂದಿದ್ದಾರೆ.

ಆಸೀಸ್‌ ಕ್ರಿಕೆಟ್‌ ನಿಯೋಗ
ಮುಂದಿನ ಜನವರಿಯಲ್ಲಿ ಆಸ್ಟ್ರೇಲಿಯ ತಂಡ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಗಾಗಿ ಭಾರತಕ್ಕೆ ಆಗಮಿಸಲಿದೆ. ಈ ಸಂದರ್ಭದಲ್ಲಿ ಕ್ರಿಕೆಟ್‌ ಆಸ್ಟ್ರೇಲಿಯದ ಅಧ್ಯಕ್ಷ ಅರ್ಲ್ ಎಡ್ಡಿಂಗ್ಸ್‌ ಅವರನ್ನೊಳಗೊಂಡ ಕ್ರಿಕೆಟ್‌ ನಿಯೋಗ ಕೂಡ ಭಾರತಕ್ಕೆ ಭೇಟಿ ನೀಡಲಿದೆ. 2020-21ರ ಸರಣಿ ವೇಳೆ ನಡೆಸಲಾಗುವ ಹೆಚ್ಚಿನ ಸಂಖ್ಯೆಯ ಡೇ-ನೈಟ್‌ ಟೆಸ್ಟ್‌ ಪಂದ್ಯಗಳ ಕುರಿತು ಅದು ಬಿಸಿಸಿಐ ಜತೆ ಮಾತುಕತೆ ನಡೆಸಲಿದೆ.

ಮುಂದಿನ ವರ್ಷಾಂತ್ಯ ಭಾರತ ತಂಡ ಬ್ರಿಸ್ಬೇನ್‌ನಲ್ಲಿ ಮೊದಲ ಟೆಸ್ಟ್‌ ಆಡಲಿದ್ದು, ಇದು ಬಹುತೇಕ ಡೇ-ನೈಟ್‌ ಆಗಿರಲಿದೆ. ಇದೇ ಸರಣಿಯ ಇನ್ನೊಂದು ಪಂದ್ಯವನ್ನೂ ಪಿಂಕ್‌ ಬಾಲ್‌ನಲ್ಲಿ ಆಡಿಸುವುದು ಆಸ್ಟ್ರೇಲಿಯದ ಯೋಜನೆ. ಆಗ ಟೆಸ್ಟ್‌ ಸರಣಿಯೊಂದರಲ್ಲಿ ಮೊದಲ ಸಲ 2 ಡೇ-ನೈಟ್‌ ಪಂದ್ಯಗಳನ್ನು ಆಯೋಜಿಸಿದ ಹೆಗ್ಗಳಿಕೆ ಆಸ್ಟ್ರೇಲಿಯದ್ದಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next