Advertisement
ಅಡಿಕೆ ಕೃಷಿಗೆ ಬಾಧಿಸುವ ವಿವಿಧ ರೋಗಗಳನ್ನು ನಿಯಂತ್ರಿಸಲು ಅಗತ್ಯವಾದ ಸಹಾಯಧನ ಸಹಿತ ಯೋಜನೆಯಾಗಿದೆ. ಹಣಕಾಸು ಸಂಬಂಧವಾದ ವಿವರಗಳ ಖಾತೆಯ 2016-2017ನೇ ವರ್ಷದ ಅಂಕಿ- ಅಂಶದಂತೆ ಕಾಸರಗೋಡು ಜಿಲ್ಲೆಯಲ್ಲಿ 19,478 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಕೃಷಿ, ಮೃಗಸಂರಕ್ಷಣೆ, ಮೀನುಗಾರಿಕೆ ಸಂಬಂಧವಾಗಿ ವಿಧಾನಸಭಾ ಉಪ ಸಮಿತಿ 2017-18ರ ವಿತ್ತ ಪರಿಸ್ಥಿತಿಯನ್ನು ಪರಿಶೋಧಿಸಿದ ಬಳಿಕ ಅಡಿಕೆ ಕೃಷಿಕರಿಗೆ ‘ಅರೆಕಾನಟ್ ಪ್ಯಾಕೇಜ್’ ಎಂಬ ಹೆಸರಿನಲ್ಲಿ 10 ಕೋಟಿ ರೂ.ಯ ವಿಶೇಷ ಪ್ಯಾಕೇಜ್‌ನ್ನು 2019-2010ನೇ ವರ್ಷದ ಮುಂಗಡಪತ್ರದಲ್ಲಿ ಸೇರ್ಪಡೆಗೊಳಿಸಲು ನಿರ್ದೇಶಿಸಿತ್ತು. ಈ ಶಿಫಾರಸು ಮತ್ತು ಅಡಿಕೆ ಕೃಷಿಕರ ನಿರಂತರ ಬೇಡಿಕೆಯನ್ನು ಪರಿಗಣಿಸಿ ರಾಜ್ಯ ಯೋಜನಾ ಮಂಡಳಿಗೆ ಕೃಷಿ ಇಲಾಖೆ ಸಲ್ಲಿಸಿದ 2019-20ನೇ ಕರಡು ವಾರ್ಷಿಕ ಯೋಜನೆಯಲ್ಲಿ ಸೇರ್ಪಡೆ ಗೊಳಿಸಿ ‘ಅರೆಕಾನಟ್ ಪ್ಯಾಕೇಜ್’ ಗೆ ನಿರ್ದೇಶಿಸಲಾಗಿದೆ ಎಂದು ಸಚಿವ ವಿ.ಎಸ್. ಸುನಿಲ್ ಕುಮಾರ್ ಹೇಳಿದರು. Advertisement
ಅಡಿಕೆ ಕೃಷಿಕರಿಗೆ 2 ಕೋ.ರೂ. ವಿಶೇಷ ಪ್ಯಾಕೇಜ್ ಶೀಘ್ರ
02:05 AM Dec 01, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.