ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2 ಮಲೇರಿಯಾ ರೋಗ ಪ್ರಕರ ಣಗಳು ದಾಖಲಾಗಿವೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಒಂದೂ ಪ್ರಕರಣವಿಲ್ಲ ದಂತೆ ಮಲೇರಿಯಾ ಮುಕ್ತ ಜಿಲ್ಲೆ ಮಾಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯೋಗೇಶ್ ಗೌಡ ತಿಳಿಸಿದರು.
ಶೂನ್ಯ ಮಲೇರಿಯಾ ಘೋಷವಾಕ್ಯ: ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮವನ್ನು ಆಚರಿಸುತ್ತಿದ್ದೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಮಲೇರಿಯಾ 2, ಡೆಂಘೀ 3, ಚಿಕೂನ್‌ಗುನ್ಯಾ 8, ಪ್ರಸಕ್ತ ಸಾಲಿನಲ್ಲಿ 1 ಪ್ರಕರಣ ಕಂಡು ಬಂದಿದೆ ಎಂದು ಹೇಳಿದರು.
ಮುಂಜಾಗೃತಾ ಕ್ರಮ: ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಮಲೇರಿಯಾ ಮುಕ್ತವಾಗಿಸುವ ನಿಟ್ಟಿನಲ್ಲಿ ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೃಢಪಟ್ಟ ಮಲೇರಿಯಾ ಪ್ರಕರಣಗಳಿಗೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ತೀವ್ರ ಚಿಕಿತ್ಸೆ ದೊರೆಯುತ್ತಿದ್ದು, ನಮ್ಮ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರಲ್ಲಿಯೇ ಹೆಚ್ಚಾಗಿ ಮಲೇರಿಯಾ ರೋಗ ಪ್ರಕರಣಗಳು ವರದಿಯಾಗಿವೆ. ವಲಸೆ ಕಾರ್ಮಿಕರಿಂದ ಕಡ್ಡಾಯವಾಗಿ ರಕ್ತ ಲೇಪನ ಸಂಗ್ರಹ ಮಾಡಿ, ಚಿಕಿತ್ಸೆ ನೀಡಲಾ ಗುತ್ತಿದೆ. ಜ್ವರದ ಪ್ರಾರಂಭಿಕ ಹಂತದಲ್ಲೇ ಸರ್ಕಾರಿ ಪ್ರಯೋಗ ಶಾಲೆಯಲ್ಲಿ ರಕ್ತ ಲೇಪನದ ಮೂಲಕ ಉಚಿತವಾಗಿ ಪತ್ತೆ ಹಚ್ಚಿ ಮಲೇರಿಯಾ ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.
ರೋಗ ತಡೆ ವಿಧಾನ: ನೀರು ಶೇಖರಣೆ, ಕೆರೆ, ಕುಂಟೆ, ಹೊಂಡ, ತೋಟದ ಬಾವಿಗಳು, ಗದ್ದೆ, ಜೌಗು ಪ್ರದೇಶಳಲ್ಲಿ ಸೊಳ್ಳೆ ಮರಿಗಳನ್ನು ತಿನ್ನುವ ಗ್ಯಾಂಬುಸಿಯು ಮತ್ತು ಗಪಿಯೆಂಬ ಲಾರ್ವಾಹಾರಿ ಮೀನುಗಳನ್ನು ಬಿಟ್ಟು ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸುವ ಮೂಲಕ ಸೊಳ್ಳೆಗಳಿಂದ ಹರಡುವ ಖಾಯಿಲೆಗಳಾದ ಮಲೇರಿಯಾ, ಮೆದುಳು ಜ್ವರ, ಡೆಂಘೀ ಜ್ವರ, ಚಿಕೂನ್‌ಗುನ್ಯಾ ಮತ್ತು ಆನೆಕಾಲು ರೋಗಗಳನ್ನು ತಡೆಗಟ್ಟಬಹುದು ಎಂದು ಹೇಳಿದರು.
Advertisement
ತಾಲೂಕಿನ ಚಪ್ಪರದಕಲ್ಲು ಸರ್ಕಲ್ನಲ್ಲಿ ರುವ ಜಿಲ್ಲಾ ಸಂಕೀರ್ಣದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
Related Articles
Advertisement
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಧರ್ಮೇಂದ್ರ ಮಾತನಾಡಿ, ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯ ಕ್ರಮದಲ್ಲಿ ಮುಖ್ಯವಾಗಿ ಐದು ರೋಗಗಳಾದ ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯಾ, ಮೆದುಳು ಜ್ವರ ಮತ್ತು ಆನೆಕಾಲು ರೋಗ ಗಳನ್ನು ನಿಯಂತ್ರಣ ಮಾಡಲಾಗುತ್ತಿದ್ದು, ಈ ರೋಗಗಳು ಪರೋಪಜೀವಿ ಅಥವಾ ವೈರಸ್‌ನಿಂದ ಹಾಗೂ ರೋಗವಾಹಕ(ಸೊಳ್ಳೆಗಳಿಂದ ಹರಡುವಿಕೆ)ಗಳಿಂದ ಉಂಟಾಗುತ್ತವೆ ಎಂದು ತಿಳಿಸಿದರು.
ರಕ್ತ ಪರೀಕ್ಷೆ ಅಗತ್ಯ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಲೇರಿಯಾ, ಡೆಂಘೀ ಹಾಗೂ ಚಿಕೂನ್‌ಗುನ್ಯಾ ರೋಗಗಳು ಮಾತ್ರ ವರದಿಯಾಗಿದ್ದು, ಆನೆಕಾಲು ರೋಗ ದ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾ ಗಿಲ್ಲ. ಯಾವುದೇ ಜ್ವರವಿರಲಿ ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಆರೋಗ್ಯ ಇಲಾಖೆಯ ಸಿಬ್ಬಂದಿಯು ನಿಮ್ಮ ಮನೆಯ ಹತ್ತಿರ ಬಂದಾಗ, ಜ್ವರ ಪೀಡಿತರು ರಕ್ತ ಲೇಪನ ನೀಡಿ ಸಹಕರಿಸಿಬೇಕು. ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಿ, ಚರಂಡಿ ಮತ್ತು ನಾಲೆಗಳಿಗೆ ಕಸಕಡ್ಡಿಗಳನ್ನು ಎಸೆಯದೆ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀನಿವಾಸ್, ಜಿಲ್ಲಾ ಕ್ಷಯರೋಗ ನಿಯಂತ್ರ ಣಾಧಿಕಾರಿ ಡಾ.ಶಕೀಲಾ, ಜಿಲ್ಲಾ ಆರ್‌ಸಿಎಚ್ಅಧಿಕಾರಿ ಮಹೇಶ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಸಂಜಯ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರೇವಣ್ಣ, ತಾ.ಆರೋ ಗ್ಯಾಧಿಕಾರಿಗಳು, ನಿರೀಕ್ಷಕರು ಇತರರಿದ್ದರು.