Advertisement
ಮೃತ ಸಹೋದರರನ್ನು ವಿಕಾಸ್ ಗೊಂಡ್ (25) ಮತ್ತು ವಿಕ್ಕಿ ಗೊಂಡ್ (22) ಎನ್ನಲಾಗಿದ್ದು ತಾಯಿ, ಇಬ್ಬರು ಸಹೋದರಿಯರು ಹಾಗೂ ಇನ್ನೋರ್ವ ಸಹೋದರ ಸೇರಿದಂತೆ ನಾಲ್ವರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಛತ್ತೀಸ್‌ಗಢ ಸಕ್ತಿ ಜಿಲ್ಲೆಯ ತಂಡುಲ್ದಿಹ್ ಗ್ರಾಮದ ಮನೆಯೊಂದರಲ್ಲಿ, ಫಿರಿತ್ ಬಾಯಿ ಎಂಬ ಮಹಿಳೆ ತನ್ನ ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಉಜ್ಜಯಿನಿಯ ಬಾಬಾ ಒಬ್ಬರ ಫೋಟೋ ಇರಿಸಿಕೊಂಡು ನಿರಂತರ ಪೂಜೆಗಳನ್ನು ನಡೆಸುತಿದ್ದರು ಎನ್ನಲಾಗಿದೆ ಮೊದ ಮೊದಲು ನೆರೆಹೊರೆಯವರಿಗೆ ಇವರ ಅರಿವೇ ಇರಲಿಲ್ಲ ಆದರೆ ಐದು ಆರು ದಿನಗಳು ಕಳೆದಂತೆ ಮನೆಮಂದಿ ಹೊರಗೆ ಕಾಣದೇ ಇದ್ದಾಗ ಅನುಮಾನಗೊಂಡಿದ್ದಾರೆ ಅಲ್ಲದೆ ಕೆಲವೊಮ್ಮೆ ಮನೆಯ ಒಳಗಿನಿಂದ ಜೈ ಬಾಬಾ ಎಂಬ ಘೋಷಣೆಗಳು ಕೇಳುತಿತ್ತು ಇದರಿಂದ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನೆರೆಹೊರೆಯವರ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಬಡಿದಿದ್ದಾರೆ ಆದರೆ ಮನೆಮಂದಿ ಬಾಗಿಲು ತೆರೆಯಲಿಲ್ಲ ಇದರಿಂದ ಅನುಮಾನಗೊಂಡ ಪೊಲೀಸರು ಬಾಗಿಲು ಮುರಿದು ಒಳ ಹೋಗಿದ್ದಾರೆ ಆಗ ಇಬ್ಬರು ಸಹೋದರರು ಅರೆ ಪ್ರಜ್ಞಾವಸ್ಥೆಯಲ್ಲಿ ಇದ್ದರು ಜೊತೆಗೆ ಇತರ ನಾಲ್ವರು ಗಂಭೀರ ಸ್ಥಿತಿಯಲ್ಲಿದ್ದರು ಅಲ್ಲದೆ ಮನೆಯ ಒಳಗೆ ಬಾಬಾ ಒಬ್ಬರ ಫೋಟೋ ಅಲ್ಲಲ್ಲಿ ಕಂಡು ಬಂದಿತ್ತು ಯಾವುದೋ ಪೂಜೆ ನಡೆಸುತ್ತಿದ್ದರು ಎನ್ನಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಅಲ್ಲದೆ ಆರು ಮಂದಿಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು ಅದರಲ್ಲಿ ಇಬ್ಬರು ಸಹೋದರರು ಮೃತಪಟ್ಟಿದ್ದು, ನಾಲ್ವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Related Articles
Advertisement
ಘಟನೆ ಸಂಬಂಧ ಮಾಹಿತಿ ನೀಡಿದ ವೈದ್ಯರು ಮನೆಮಂದಿ ಯಾವುದೋ ಮೂಢನಂಬಿಕೆಗೆ ಒಳಗಾಗಿ ಅನ್ನ, ನೀರು ಬಿಟ್ಟು ಧ್ಯಾನಕ್ಕೆ ಒಳಗಾಗಿದ್ದಾರೆ ಸುಮಾರು ಏಳು ದಿನಗಳು ಹೊಟ್ಟೆಗೆ ಒಂದು ತೊಟ್ಟು ನೀರೂ ಸೇವಿಸದೇ ಧ್ಯಾನದಲ್ಲಿ ಮುಳುಗಿದ್ದಾರೆ ಹಾಗಾಗಿ ಅನಾರೋಗ್ಯಕ್ಕೆ ಒಳಗಾಗಿ ಇಬ್ಬರು ಮೃತಪಟ್ಟರೆ ನಾಲ್ವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದು ವರದಿ ಬಂದ ಬಳಿಕ ಹೆಚ್ಚಿನ ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: MUDA Case: ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಲಿ: ಸಂಸದ ಯದುವೀರ್