Advertisement

Cricket: ರಣಜಿ ಪಂದ್ಯ ಆಡಲು ಮೈದಾನಕ್ಕೆ ಆಗಮಿಸಿದ ಒಂದೇ ರಾಜ್ಯದ ಎರಡು ತಂಡಗಳು! ಕಾರಣವೇನು?

04:57 PM Jan 06, 2024 | Team Udayavani |

ಪಾಟ್ನಾ: ಒಂದೇ ರಾಜ್ಯದ ಎರಡು ತಂಡಗಳು ರಣಜಿ ಟ್ರೋಫಿಯ ಪಂದ್ಯವನ್ನು ಆಡಲು ಮೈದಾನಕ್ಕೆ ಆಗಮಿಸಿರುವ ಘಟನೆ  ಪಾಟ್ನಾದ ಮೊಯಿನ್-ಉಲ್-ಹಕ್ ಸ್ಟೇಡಿಯಂನಲ್ಲಿ ಶನಿವಾರ ನಡೆದಿದ್ದು, ಇದರಿಂದ ಪಂದ್ಯ ಆರಂಭಕ್ಕೂ ಮುನ್ನ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.

Advertisement

ಹಲವು ವರ್ಷಗಳ ಬಳಿಕ ಬಿಹಾರ ರಣಜಿ ಟ್ರೋಫಿ ನಡೆಸುವ ಜವಬ್ದಾರಿಯನ್ನು ವಹಿಸಿಕೊಂಡಿದೆ. ಶನಿವಾರ ತನ್ನ ಮೊದಲ ಪಂದ್ಯವನ್ನು ಮುಂಬಯಿ ವಿರುದ್ಧ ಆಡಲು ಬಿಹಾರ ತಂಡ ಸಿದ್ದವಾಗಿತ್ತು. ಆದರೆ ಪಂದ್ಯವನ್ನು ಆಡಲು ಬಿಹಾರದ ಎರಡು ತಂಡಗಳು ಪಾಟ್ನಾದ ಮೊಯಿನ್-ಉಲ್-ಹಕ್ ಸ್ಟೇಡಿಯಂಗೆ ಬಂದಿರುವುದು ಗೊಂದಲಕ್ಕೆ ಕಾರಣವಾಗಿದೆ.

ಕಳೆದ ಕೆಲ ವರ್ಷಗಳಿಂದ ಬಿಹಾರ ಕ್ರಿಕೆಟ್ ಸಂಸ್ಥೆಯಲ್ಲಿ (ಬಿಸಿಎ) ಆಂತರಿಕ ಭಿನ್ನಾಭಿಪ್ರಾಯಗಳಿವೆ. ಈ ಭಿನ್ನಾಭಿಪ್ರಾಯ ರಾಜ್ಯದ ರಣಜಿ ತಂಡದ ಘೋಷಣೆಯಲ್ಲಿ ಎದ್ದು ಕಂಡಿದೆ.

ಬಿಸಿಎ ಅಧ್ಯಕ್ಷ ರಾಕೇಶ್ ತಿವಾರಿ ಒಂದು ತಂಡವನ್ನು ಘೋಷಿಸಿದರೆ, ಈಗಾಗಲೇ ಉಚ್ಛಾಟಿತಗೊಂಡಿರುವ ಕಾರ್ಯದರ್ಶಿ ಅಮಿತ್ ಕುಮಾರ್ ಮತ್ತೊಂದು ತಂಡವನ್ನು ಘೋಷಿಸಿದ್ದಾರೆ. ಈ ಕಾರಣದಿಂದ  ಎರಡೂ ತಂಡಗಳು ಶನಿವಾರ ಮೈದಾನದ ಹೊರಗೆ ಬಂದಿದೆ. ಆದರೆ ಪೊಲೀಸರು ಕಟ್ಟುನಿಟ್ಟಾಗಿ ಕಾರ್ಯದರ್ಶಿ ಆಯ್ಕೆ ಮಾಡಿರುವ ತಂಡವನ್ನು  ಬಸ್‌ನಲ್ಲಿ ಕೂರಿಸಿ, ತೆರಳುವಂತೆ ಹೇಳಿದ್ದಾರೆ. ಬಿಸಿಎ ಅಧ್ಯಕ್ಷ ರಾಕೇಶ್ ತಿವಾರಿ ಅವರ ಪಟ್ಟಿಯಲ್ಲಿರುವ ಆಟಗಾರರು ಪಂದ್ಯದಲ್ಲಿ ಭಾಗವಹಿಸಿದ್ದಾರೆ.

ಇದಾದ ಕೆಲ ಸಮಯದ ಬಳಿಕ ಅಪರಿಚಿತ ವ್ಯಕ್ತಿಗಳು ಬಿಸಿಎಯ ಒಎಸ್ ಡಿ ಮನೋಜ್ ಕುಮಾರ್ ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಅವರ ತಲೆಗೆ ಗಾಯವಾಗಿದೆ.  ಈ ಸಂಬಂಧ ಆರೋಪಿಗಳ ಹುಡಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ಅಧ್ಯಕ್ಷರ ತಂಡದ ಪಟ್ಟಿ – ಕ್ಯಾಪ್ಟನ್: ಅಶುತೋಷ್ ಅಮನ್, ಹಿಮಾಂಶು ಸಿಂಗ್, ರವಿಶಂಕರ್, ರಿಷಭ್ ರಾಜ್, ನವಾಜ್ ಖಾನ್, ವಿಪುಲ್ ಕೃಷ್ಣ, ಆಕಾಶ್ ರಾಜ್, ಬಲ್ಜೀತ್ ಸಿಂಗ್ ಬಿಹಾರಿ, ಸರ್ಮಾನ್ ನಿಗ್ರೋಧ್, ವೀರ್ ಪ್ರತಾಪ್ ಸಿಂಗ್, ಸಕಿಬುಲ್ ಗನಿ (ಉಪನಾಯಕ), ವಿಪಿನ್ ಸೌರಭ್ (ವಿಕೆಟ್ ಕೀಪರ್), ಬಾಬುಲ್ ಕುಮಾರ್, ಸಚಿನ್ ಕುಮಾರ್ ಸಿಂಗ್, ವೈಭವ್ ಸೂರ್ಯವಂಶಿ.

ಕಾರ್ಯದರ್ಶಿಗಳ ತಂಡದ ಪಟ್ಟಿ – ಕ್ಯಾಪ್ಟನ್: ಇಂದ್ರಜಿತ್ ಕುಮಾರ್, ಶಶಿ ಆನಂದ್, ಲಖನ್ ರಾಜಾ, ಯಶಸ್ವಿ ರಿಷಬ್, ಪ್ರತೀಕ್ ಕುಮಾರ್, ವಿಕ್ರಾಂತ್ ಸಿಂಗ್, ಹಿಮಾಂಶು ಹರಿ, ಶಶಿ ಶೇಖರ್, ವೇದಾಂತ್ ಯಾದವ್, ಅಭಿನವ್ ಕುಮಾರ್, ಕಮಲೇಶ್ ಕುಮಾರ್ ಸಿಂಗ್, ವಿಶ್ವಜೀತ್ ಗೋಪಾಲ, ಪ್ರಶಾಂತ್ ಶ್ರೀವಾಸ್ತವ, ದೀಪಕ್ ರಾಜಾ, ಅಪೋರ್ ಆನಂದ್ (ಉಪನಾಯಕ), ವಿಕಾಶ್ ರಂಜನ್ (ವಿಕೆಟ್ ಕೀಪರ್), ಶಶಿಮ್ ರಾಥೋಡ್, ಸಮರ್ ಕುದರಿ, ಕುಮಾರ್ ಮೃದುಲ್, ಕುಮಾರ್ ರಜನೀಶ್.

Advertisement

Udayavani is now on Telegram. Click here to join our channel and stay updated with the latest news.

Next