Advertisement
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಶಿಬಿರದ ಆರು ವರ್ಷದ ನಕುಲ (ಗಂಗೆ ಮಗ), 7 ವರ್ಷದ ಕಬಿನಿ( ಸರಳಳ ಮಗಳು) ತೆರಳುತ್ತಿರುವ ಮರಿ ಆನೆಗಳು.ಉತ್ತರ ಪ್ರದೇಶಕ್ಕೆ ತೆರಳುತ್ತಿರುವ ನಕುಲ ಬಳ್ಳೆ ಕ್ಯಾಂಪಿನಲ್ಲಿ 2012 ಜ.28 ರಂದು ಗಂಗೆಗೆ, ಅದೇ ಕ್ಯಾಂಪಿನಲ್ಲಿದ್ದ ಸರಳ ಆನೆಗೆ 2011 ನ.26 ರಂದು ಹುಟ್ಟಿದ ಕಬಿನಿ ಮರಿಯಾನೆಗಳು. ಇವುಗಳನ್ನು ಐದು ವರ್ಷಗಳ ಹಿಂದೆಯೇ ಬಳ್ಳೆ ಶಿಬಿರದಿಂದ ತಾಯೊಂದರೊಂದಿಗೆ ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರ ಗೊಳಿಸಲಾಗಿತ್ತು.
Related Articles
Advertisement
ಉತ್ತರಪ್ರದೇಶದ ದುದುವಾ ಉದ್ಯಾನದಿಂದ ಈಗಾಗಲೇ ಇಬ್ಬರು ಮಾವುತರು ಇಲ್ಲಿಗೆ ಆಗಮಿಸಿದ್ದು, ತಿಂಗಳಿನಿಂದ ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿಂದ ನಕುಲಮತ್ತು ಕಬಿನಿಯ ಮಾವುತರು ಅಲ್ಲಿಗೆ ತೆರಳಿ ತಿಂಗಳ ಕಾಲ ತರಬೇತಿ ನೀಡಿ ವಾಪಾಸ್ ಆಗಲಿದ್ದಾರೆ. ಶಿಬಿರದ ಆನೆಗಳಿಗೆ ಪಶುವೆದ್ಯ ಡಾ.ಮುಜೀಬ್ ರೆಹಮಾನ್ ಆರೋಗ್ಯ ನೋಡಿಕೊಂಡರೆ, ಡಿಆರ್‌ಎಫ್ಒ ಜಗದೀಶನಾಯ್ಕ ಹಾಗೂ ಶಿಬಿರದ ಮೇಲ್ವಿಚಾರಕಿ ಶಾರದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ.
ಬೇರಾದಂಥ ಬೇಸರ: ಹುಟ್ಟಿದಾಗಿನಿಂದ ನಕುಲ ಮತ್ತು ಕಬಿನಿ ಮರಿಯಾನೆಯನ್ನು ಪ್ರೀತಿಯಿಂದ ಸಾಕಿದ್ದೇವೆ. ನಮ್ಮ ಮಕ್ಕಳು ಸಹ ಇವುಗಳೊಂದಿಗೆ ಆಟವಾಡುತ್ತಿದ್ದರು. ಈ ಶಿಬಿರದ ಇತರೆ ಆನೆಗಳೊಂದಿಗೆ ತುಂಟಾಟವಾಡುತ್ತಿದ್ದವು. ಇದೀಗ ನಮ್ಮನ್ನು ಬಿಟ್ಟು ಹೋಗುತ್ತಿರುವುದು ತುಂಬಾ ಬೇಸರವಾಗುತ್ತಿದೆ. ಆದರೂ ಇಲಾಖೆ ಆದೇಶ ಪಾಲಿಸಲೇಬೇಕು ಎನ್ನುತ್ತಾರೆ ನಕುಲನ ಮಾವುತ ಜೆ.ಕೆ.ರಾಮ ಹಾಗೂ ಕಬಿನಿ ಮಾವುತ ರಾಜು.
ರಾಜ್ಯದಲ್ಲಿ ಅತ್ಯುತ್ತಮ ತರಬೇತಿ: ನಮ್ಮ ರಾಜ್ಯದ ಸಾಕಾನೆಗಳಿಗೆ ಶಿಬಿರಗಳಲ್ಲಿ ನೀಡುವ ತರಬೇತಿಯಿಂದಾಗಿ ಎಂತ ಸಮಯದಲ್ಲೂ ಕಾಡಾನೆಗಳನ್ನು ನಿಯಂತ್ರಿಸುವ ಹಾಗೂ ಅರಣ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ದೇಶದ ಇತರೆ ರಾಜ್ಯಗಳಲ್ಲಿ ಈ ವ್ಯವಸ್ಥೆ ಅಷ್ಟಾಗಿ ಇಲ್ಲದ್ದರಿಂದ ನಮ್ಮ ತರಬೇತಿ ಆನೆಗಳಿಗೆ ಬೇಡಿಕೆ ಇದೆ.
ಇವುಗಳ ಮೂಲಕ ಕಾಡಾನೆಗಳು ಸೇರಿದಂತೆ ಇತರೆ ವನ್ಯಜೀವಿಗಳ ನಿಯಂತ್ರಣಕ್ಕೆ ಮತ್ತು ಪೆಟ್ರೋಲಿಂಗ್‌ಗೆ ಬಳಸಿಕೊಳ್ಳುತ್ತಾರೆ. ಮತ್ತಿಗೋಡು ಶಿಬಿರದಲ್ಲಿ ಇನ್ನು 25 ಆನೆಗಳಿವೆ. ಅಲ್ಲದೇ ಹುಣಸೂರು 2, ಹೆಬ್ಬಳ್ಳದಲ್ಲಿ 5, ಗಣಗೂರು.3. ಮತ್ತಿಗೋಡು.17. ವೀರನಹೊಸಹಳ್ಳಿ 11.ಆನೆಗಳಿವೆ ಎಂದು ಹುಲಿಯೋಜನೆ, ನಾಗರಹೊಳೆ ಇದರ ರವಿಶಂಕರ್ ನಿರ್ದೇಶಕರು ತಿಳಿಸಿದ್ದಾರೆ.
* ಸಂಪತ್ ಕುಮಾರ್ ಹುಣಸೂರು