Advertisement

Bantwal ಆರೋಪಿ ಸಹಿತ 2.96 ಲಕ್ಷ ರೂ. ಮೌಲ್ಯದ ಗಾಂಜಾ ವಶ

09:30 PM Sep 16, 2023 | Team Udayavani |

ಬಂಟ್ವಾಳ: ಕೇಪು ಗ್ರಾಮದ ಮರಕ್ಕಿಣಿಯಲ್ಲಿ ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟವನ್ನು ಪತ್ತೆ ಹಚ್ಚಿದ ವಿಟ್ಲ ಪೊಲೀಸರು ಆರೋಪಿ ಹಾಗೂ 2.96 ಲಕ್ಷ ರೂ.ಗಳ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಆಟೋ ಚಾಲಕ ಸುಳ್ಯ ನಿವಾಸಿ ಎನ್‌. ಎಂ. ಮಹಮ್ಮದ್‌ ಕಲಂದರ್‌ ಶಾ ಬಂಧಿತ ಆರೋಪಿ. ಈತ ಶನಿವಾರ ಆಟೋದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಗಾಂಜಾ ಸಾಗಿಸುತ್ತಿರುವ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಆರೋಪಿಯಿಂದ ರಿಕ್ಷಾದಲ್ಲಿದ್ದ 1.35 ಲಕ್ಷ ರೂ. ಮೌಲ್ಯದ 6.110 ಕೆಜಿ ತೂಕದ ಗಾಂಜಾ, 1 ಸಾವಿರ ರೂ. ಮೌಲ್ಯದ 2 ಮೊಬೈಲ್‌, 900 ರೂ. ನಗದು, ಆರೋಪಿಯ ಚಾಲನಾ ಪರವಾನಿಗೆ, 1.60 ಲಕ್ಷ ರೂ. ಮೌಲ್ಯದ ಆಟೋವನ್ನು ವಶಪಡಿಸಿಕೊಳ್ಳಲಾಗಿದೆ.

ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next