Advertisement

2.81 ಕೋಟಿ ರೂ. ಅಕ್ರಮ ಅಕ್ಕಿ, ವಾಹನಗಳ ವಶ

02:30 PM Jul 06, 2021 | Team Udayavani |

ಬಂಗಾರಪೇಟೆ: ತಿಂಗಳಿನಿಂದ ತಾಲೂಕಿನ ನೇರಳೆಕೆರೆ ಗೇಟ್‌ ಬಳಿ ಇರುವ ಪಿಆರ್‌ಎಸ್‌ ರೈಸ್‌ ಮಿಲ್‌ ಮೇಲೆ ದಾಳಿ ಮಾಡಿರುವ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೆ.ರಾಮೇಶ³ರಪ್ಪ ನೇತೃತ್ವದಲ್ಲಿನ ತಂಡವು 2.81ಕೋಟಿ ರೂ.ನ ಅಕ್ರಮ ವಹಿವಾಟಿನ ಅಕ್ಕಿ, ಸಾಗಾಣಿಕೆಗೆ ಬಳಸಿದ್ದ 7 ವಾಹನ ವಶಪಡಿಸಿಕೊಂಡಿರುವ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ತಾಲೂಕಿನ ನೇರಳೆಕೆರೆ ಗೇಟಿನಲ್ಲಿರುವ ಪಿಆರ್‌ ಎಸ್‌ ರೈಸ್‌ಮಿಲ್‌ ಮೇಲೆ ಮೇ ತಿಂಗಳ ಮೊದಲ ವಾರದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೇ ವೇಳೆ ಪಟ್ಟಣದ ಪಿಆರ್‌ಎಸ್‌ ರೈಸ್‌ ಮಿಲ್‌ನಲ್ಲಿ 4.92ಲಕ್ಷ ಬೆಲೆ ಬಾಳುವ 197 ಕ್ವಿಂಟಲ್‌ ಗ್ರೇಡ್‌ ಎ ದರ್ಜೆಯ ಬೆಣ್ತೆ ಅಕ್ಕಿಯನ್ನು ವಶಕ್ಕೆ ಪಡೆದು ಸ್ಥಳೀಯಪೊಲೀಸ್‌ ಠಾಣೆಯಲ್ಲಿ ತಾಲೂಕು ಆಹಾರ ಇಲಾಖೆಯ ಶಿರಸ್ತೇದಾರ್‌ ಅಭಿಜಿತ್‌ ದೂರು ದಾಖಲಿಸಿದ್ದರು.

ಮಾಲಿಕರ ಸಮಕ್ಷಮದಲ್ಲಿ ಪರಿಶೀಲನೆ: ಅನಂತರ ನೇರಳೆಕೆರೆ ಗೇಟಿನಲ್ಲಿರುವ ಪಿಆರ್‌ಎಸ್‌ ಮಿಲ್‌ನ ಮಾಲಿಕ ಆರ್‌.ರಘುನಾಥಶೆಟ್ಟಿ ಹೈಕೋರ್ಟ್‌ನಲ್ಲಿ ದಾವೆ ಹೂಡಿ ಆಂಧ್ರ, ತಮಿಳುನಾಡು ರಾಜ್ಯಗಳಿಂದ ಭತ್ತ ಖರೀದಿ ಮಾಡಿ, ಅಕ್ಕಿ ತಯಾರಿಕೆ ಮಾಡಿರುವುದನ್ನು ಪರಿಶೀಲಿಸದೆ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೆ.ರಾಮೇಶ್ವರಪ್ಪ ತಪ್ಪು ಮಾಹಿತಿ ಪಡೆದುಕೊಂಡು ದಾಳಿ ನಡೆಸಿ 3 ಕೋಟಿ ರೂ. ಬೆಲೆ ಬಾಳುವ ಅಕ್ಕಿ ಹಾಗೂ ವಾಹನ ಸೀಜ್‌ ಮಾಡಲು ಪ್ರಯತ್ನ ಮಾಡಿದ್ದಾರೆ. ಇದರಲ್ಲಿಅನ್ನಭಾಗ್ಯ ಯೋಜನೆ ಅಕ್ಕಿ ಇಲ್ಲವೆಂದು ಹೇಳಿ ತಡೆಯಾಜ್ಞೆ ತಂದಿದ್ದರು. ಇದರಲ್ಲಿ ಹೈಕೋರ್ಟ್‌ ಆಹಾರ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನನೀಡಿ, ಪಿಆರ್‌ಎಸ್‌ ಮಿಲ್‌ನ ಮಾಲಿಕರಸಮಕ್ಷಮದಲ್ಲಿ ಅಕ್ಕಿ ಪರಿಶೀಲಿಸುವಂತೆ ಆದೇಶಿಸಿತ್ತು.

17 ಜನರ ಮೇಲೆ ದೂರು: ಅದರಂತೆ ಅಕ್ಕಿ ಪರಿಶೀಲನೆ ಮಾಡಿದ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೆ.ರಾಮೇಶ್ವರಪ್ಪ, ಭಾನುವಾರ ಸಂಜೆಸ್ಥಳೀಯ ಪೊಲೀಸ್‌ ಠಾಣೆಯಲ್ಲಿ 17 ಜನರ ಮೇಲೆ ದೂರು ದಾಖಲಿಸಿದ್ದಾರೆ.

ರೈಸ್‌ಮಿಲ್‌ನ ಮಾಲಿಕ ಆರ್‌.ರಘುನಾಥ್‌ಶೆಟ್ಟಿ, ಮ್ಯಾನೇಜರ್‌ ಪಿ.ಸಿ.ಮಂಜುನಾಥ, ಲೆಕ್ಕ ಗುಮಾಸ್ತ ಬಿ.ಎಂ.ರಾಮು, ಗುಮಾಸ್ತ ಚಿನ್ನಪ್ಪ, ಎಸ್‌.ಮಹೇಶ್‌ಕುಮಾರ್‌, ಎಂ.ಆರ್‌.ವೆಂಕಟೇಶ್‌, ಆರ್‌.ಪಾರ್ಥಸಾರಥಿ, ಎಸ್‌. ಲೀಲಾವತಿ, ರವಿಕುಮಾರ್‌, ಟೆಂಪೋ, ಲಾರಿಚಾಲಕರು ಸೇರಿ 17 ಜನರ ವಿರುದ್ಧ ದೂರು ದಾಖಲಿಸಿದ್ದಾರೆ.

Advertisement

ಕಾಳಸಂತೆಯಲ್ಲಿ ಮಾರಾಟ: ರೈಸ್‌ಮಿಲ್‌, ವಾಹನಗಳ ಮಾಲಿಕರು ಮತ್ತು ಚಾಲಕರು ಇತರರುಕಾಳಸಂತೆಕೋರರ ಜೊತೆ ಸೇರಿ ಕರ್ನಾಟಕ,ತಮಿಳುನಾಡು,ಆಂಧ್ರಪ್ರದೇಶ ಸರ್ಕಾರ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಬಿಡುಗಡೆ ಮಾಡಿರುವಅಕ್ಕಿಯನ್ನು ವಿವಿಧ ಮೂಲಗಳಿಂದ ಅಕ್ರಮವಾಗಿಖರೀದಿ ಮಾಡಿ, ತಮ್ಮ ಅಕ್ಕಿಗಿರಣಿಯಲ್ಲಿ ಪಾಲಿಶ್‌ಮಾಡಿ, ವಿವಿಧ ಬ್ರಾಂಡ್‌ನ‌ ಹೆಸರಿನಲ್ಲಿ ಹೆಚ್ಚಿನ ಬೆಲೆಗೆಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಪಿಆರ್‌ಎಸ್‌ಅಕ್ಕಿ ಗಿರಣಿಯಲ್ಲಿದಾಸ್ತಾನು ಮಾಡಿದ್ದ 8,497 ಕ್ವಿಂಟಲ್‌ ಅಕ್ಕಿ ಮತ್ತು 1213.70 ಕ್ವಿಂಟಲ್‌ ಅಕ್ಕಿನುಚ್ಚು ಹಾಗೂ ಅಕ್ರಮ ವಹಿವಾಟಿಗೆ ಬಳಸುತ್ತಿದ್ದ 7 ವಾಹನ ವಶಪಡಿಸಿಕೊಂಡಿದ್ದು, ಈ ಅಗತ್ಯ ವಸ್ತುಗಳಮಾರುಕಟ್ಟೆ ಮೌಲ್ಯ ಅಂದಾಜು 2.31 ಕೋಟಿ ರೂ. ಆಗಿದ್ದು, 7 ವಾಹನಗಳ ಮೌಲ್ಯ 49.50 ಲಕ್ಷ ರೂ.ಆಗಿದೆ. ಆರ್‌. ರಘುನಾಥ್‌ ಶೆಟ್ಟಿ ಮತ್ತು ಅವರ ಜೊತೆಇತರೆವ್ಯಾಪಾರಿಗಳು,ಮಧ್ಯವರ್ತಿಗಳು ಸೇರಿಕೊಂಡು ಅಗತ್ಯವಸ್ತುಗಳಅಕ್ರಮವಹಿವಾಟುಮತ್ತುಕಾಳಸಂತೆ ವ್ಯಾಪಾರ ಮಾಡಿ ಸರ್ಕಾರ ಮತ್ತು ಸಾರ್ವಜನಿಕರಿಗೆ ಮೋಸ ಮಾಡಿರುತ್ತಾರೆಂದು ದೂರಿನಲ್ಲಿ ವಿವರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next