Advertisement

2.68 ಕೋ.ರೂ. ದಂಡ ಸಂಗ್ರಹ; ಉಡುಪಿ ಜಿಲ್ಲೆಯಲ್ಲಿ ಉಪಖನಿಜ ಅಕ್ರಮ ಸಾಗಾಟ, ಗಣಿಗಾರಿಕೆ

02:05 AM Feb 10, 2022 | Team Udayavani |

ಉಡುಪಿ: ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಮಾದರಿಯ ಉಪಖನಿಜಗಳ ಅಕ್ರಮ ಸಾಗಾಟ ಮತ್ತು ಗಣಿಗಾರಿಕೆಗೆ ಸಂಬಂಧಿಸಿ ಎರಡು ವರ್ಷಗಳಲ್ಲಿ 2.68 ಕೋ.ರೂ.ಗೂ ಅಧಿಕ ದಂಡ ಸಂಗ್ರಹಿಸಿದ್ದು, 500ಕ್ಕೂ ಮಿಕ್ಕಿ ಪ್ರಕರಣಗಳು ದಾಖಲಾಗಿವೆ.

Advertisement

ಕಟ್ಟಡ ಕಲ್ಲು, ಸಾಮಾನ್ಯ ಮರಳು, ಕಪ್ಪೆಚಿಪ್ಪು, ಲ್ಯಾಟರೈಟ್‌, ಆಲಂಕಾರಿಕ ಶಿಲೆ, ಸಿಲಿಕಾ ಮರಳು, ಜೇಡಿಮಣ್ಣು ಮತ್ತು ಎಂ-ಸ್ಯಾಂಡ್‌ ಸಾಗಾಟ ಹಾಗೂ ಗಣಿಗಾರಿಕೆಗೆ ಸಂಬಂಧಿಸಿ ಕಾನೂನುಬಾಹಿರವಾಗಿ ನಡೆದಿರುವ ಘಟನೆಗಳಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ.

ದಂಡ ವಿವರ 2020-21ರಲ್ಲಿ
ಕಾನೂನು ಉಲ್ಲಂಘನೆ ಸಂಬಂಧ 218 ಪ್ರಕರಣ ದಾಖಲಾಗಿದ್ದು, 60,48,386 ರೂ. ದಂಡ ಸಂಗ್ರಹಿಸ ಲಾಗಿದೆ. 11 ಪ್ರಕರಣ ಗಳು ನ್ಯಾಯಾಲಯದಲ್ಲಿವೆ. ಇದೇ ವರ್ಷ ಗಣಿಗಾರಿಕೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿ 179 ಪ್ರಕರಣಗಳು ದಾಖಲಾ ಗಿದ್ದು, 84,17,679 ರೂ. ದಂಡ ಸಂಗ್ರ ಹಿಸ ಲಾಗಿದೆ. 38 ಪ್ರಕರಣಗಳು ನ್ಯಾಯಾಲಯದಲ್ಲಿವೆ.

2021-22ರಲ್ಲಿ ಉಪಖನಿಜಗಳ ಅಕ್ರಮ ಸಾಗಾಟಕ್ಕೆ ಸಂಬಂಧಿಸಿ 168 ಪ್ರಕರಣ ದಾಖಲಾಗಿದ್ದು, 48,38,855 ರೂ. ದಂಡ ಸಂಗ್ರಹಿಸಲಾಗಿದೆ. 2 ಪ್ರಕರಣಗಳು ನ್ಯಾಯಾಲಯದಲ್ಲಿವೆ. ಅಕ್ರಮ ಗಣಿಗಾರಿಕೆಗಾಗಿ 156 ಪ್ರಕರಣ ದಾಖಲಿಸಿ 75,55,498 ರೂ. ದಂಡ ಸಂಗ್ರಹಿಸಲಾಗಿದೆ. 5 ಪ್ರಕರಣಗಳು ನ್ಯಾಯಾ ಲಯದಲ್ಲಿವೆ. ಎರಡು ವರ್ಷ ಗಳಲ್ಲಿ ಅಕ್ರಮ ಸಾಗಾಟಕ್ಕೆ ಸಂಬಂಧಿಸಿ 386 ಪ್ರಕರಣ ದಾಖಲಾಗಿದ್ದು 1,08,87,236 ರೂ. ದಂಡ ಹಾಗೂ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ 335 ಪ್ರಕರಣ ದಾಖಲಾಗಿದ್ದು, 1,59,73,177 ರೂ. ದಂಡ ಸಂಗ್ರಹಿಸ ಲಾಗಿದೆ. ಒಟ್ಟು 2,68,60,413 ರೂ. ದಂಡ ಸಂಗ್ರಹಿಸಲಾಗಿದೆ.

ಚಾಲ್ತಿಯಲ್ಲಿರುವ
ಕಲ್ಲುಗಣಿ ಗುತ್ತಿಗೆಗಳು
ಕಟ್ಟಡ ಕಲ್ಲು ಸಹಿತ ಜೇಡಿಮಣ್ಣು ಮತ್ತು ಮುರಕಲ್ಲು ಗಣಿಗಾರಿಕೆಯು ಒಂದೇ ವಿಭಾಗದಲ್ಲಿದ್ದರೆ, ಸಿಲಿಕಾ ಮರಳು ಮತ್ತು ಆಲಂಕಾರಿಕ ಶಿಲೆ ಗಣಿಗಾರಿಕೆ ಪ್ರತ್ಯೇಕ ವಿಭಾಗದಲ್ಲಿದೆ. ಬೈಂದೂರು ತಾಲೂಕಿನಲ್ಲಿ ಜೇಡಿಮಣ್ಣು ಗಣಿಗಾರಿಕೆಯ ಒಂದು ಘಟಕ ಇದೆ. ಮುರಕಲ್ಲು ಗಣಿಗಾರಿಕೆ ಉಡುಪಿ ತಾಲೂ ಕಿನಲ್ಲಿ ಒಂದೆಡೆ ನಡೆಯುತ್ತದೆ. ಸಿಲಿಕಾ ಮರಳು ಗಣಿಗಾರಿಕೆ ಉಡುಪಿಯಲ್ಲಿ 1, ಕಾಪುವಿನಲ್ಲಿ 2, ಕುಂದಾಪುರದಲ್ಲಿ 4 ಕಡೆ ಇದೆ. ಆಲಂಕಾರಿಕ ಶಿಲೆ ಗಣಿಗಾ ರಿಕೆ ಕಾಪುವಿನಲ್ಲಿ 4, ಕಾರ್ಕಳದಲ್ಲಿ 2, ಕುಂದಾಪುರ ದಲ್ಲಿ 1 ಇವೆ. 7 ತಾಲೂಕು ಗಳಲ್ಲಿ 118 ಕಡೆ ಕಟ್ಟಡ ಕಲ್ಲು ಗಣಿಗಾರಿಕೆ ನಡೆಯುತ್ತಿದೆ.

Advertisement

ಜಲ್ಲಿ ಕ್ರಷರ್‌
ಹೊಸ ತಿದ್ದುಪಡಿ ನಿಯಮ 2013ರಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಜಲ್ಲಿ ಕ್ರಷರ್‌ ಸ್ಥಾಪಿಸಲು 79 ಅರ್ಜಿಗಳು ಸಲ್ಲಿಕೆಯಾಗಿವೆ. ಉಡುಪಿಯಿಂದ ಬಂದಿರುವ ಐದು ಅರ್ಜಿಗಳಲ್ಲಿ 2ಕ್ಕೆ ಬಿ1-ಫಾರಂ, 1ಕ್ಕೆ ಸಿ-ಫಾರಂ ನೀಡಲಾಗಿದೆ. ಬ್ರಹ್ಮಾವರದಿಂದ ಬಂದ 41 ಅರ್ಜಿಗಳಲ್ಲಿ 12ಕ್ಕೆ ಬಿ1-ಫಾರಂ, 21ಕ್ಕೆ ಸಿ-ಫಾರಂ, 2 ಡಿ-ಫಾರಂ, ಕಾಪು ತಾಲೂಕಿನ 7 ಅರ್ಜಿಗಳಲ್ಲಿ 3ಕ್ಕೆ ಬಿ1-ಫಾರಂ, 2ಕ್ಕೆ ಸಿ-ಫಾರಂ, ಕಾರ್ಕಳದ 7 ಅರ್ಜಿಗಳಲ್ಲಿ 5ಕ್ಕೆ ಸಿ-ಫಾರಂ, ಹೆಬ್ರಿಯ 12 ಅರ್ಜಿಗಳಲ್ಲಿ 3ಕ್ಕೆ ಬಿ1-ಫಾರಂ, 5ಕ್ಕೆ ಸಿ-ಫಾರಂ, ಕುಂದಾಪುರದ 6ರಲ್ಲಿ 5ಕ್ಕೆ ಸಿ-ಫಾರಂ ಮತ್ತು ಬೈಂದೂರಿನ ಒಂದು ಅರ್ಜಿಗೆ ಸಿ-ಫಾರಂ ನೀಡಲಾಗಿದೆ. 79 ಅರ್ಜಿಗಳಲ್ಲಿ 17 ವಿಲೇವಾರಿಗೆ ಬಾಕಿಯಿವೆ.

ಅಕ್ರಮ ಘಟಕವೂ ಇವೆ
ಜಿಲ್ಲೆಯಲ್ಲಿ 118 ಕಲ್ಲು ಗಣಿಗಾರಿಕೆ (ಬಿಳಿ ಮತ್ತು ಕೆಂಪು ಕಲ್ಲು) ಘಟಕಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಗುತ್ತಿಗೆ ನೀಡಲಾಗಿದೆ. ಜಲ್ಲಿ ಕ್ರಷರ್‌ ಸಂಬಂಧ 20ಕ್ಕೆ ಬಿ1-ಫಾರಂ, 40ಕ್ಕೆ ಸಿ-ಫಾರಂ ಹಾಗೂ 2 ಘಟಕಕ್ಕೆ ಡಿ-ಫಾರಂ ನೀಡಲಾಗಿದೆ. ಇದರ ನಡುವೆಯೂ ಅಕ್ರಮವಾಗಿ ಉಪಖನಿಜಗಳ ಗಣಿ ಗಾರಿಕೆ ನಡೆಯುತ್ತಿದೆ. ಇಲಾಖೆಯ ಅಧಿಕಾರಿಗಳು ಪೊಲೀಸ್‌ ಮತ್ತು ಸ್ಥಳೀಯಾಡಳಿತಗಳ ಮೂಲಕ ಅಕ್ರಮ ಘಟಕಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸುವ ಕಾರ್ಯವೂ ಆಗುತ್ತಿದೆ.

ಅಕ್ರಮ ಗಣಿಗಾರಿಕೆ ಮತ್ತು ಸಾಗಾಟ ತಡೆಯಲು ಪ್ರತ್ಯೇಕ ನಿಯಂತ್ರಣ ಕೊಠಡಿ ರಚಿಸಿದ್ದೇವೆ. ತಾಲೂಕು ಮಟ್ಟದಲ್ಲಿ ಕಾರ್ಯಪಡೆ ಕೆಲಸ ಮಾಡುತ್ತಿದೆ. ದೂರು ಬಂದ ತತ್‌ಕ್ಷಣ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
– ಕೂರ್ಮಾರಾವ್‌ ಎಂ.,
ಉಡುಪಿ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next