Advertisement

2.5 ಲಕ್ಷ ಸರಕಾರಿ ಉದ್ಯೋಗ ಭರ್ತಿ: ಪ್ರಿಯಾಂಕಾ ಗಾಂಧಿ ಘೋಷಣೆ

10:45 PM May 03, 2023 | Team Udayavani |

ಇಂಡಿ: ರಾಜ್ಯದಲ್ಲಿ ಬಿಜೆಪಿ ಸರಕಾರ 2.5 ಲಕ್ಷ ಸರಕಾರಿ ಉದ್ಯೋಗವನ್ನು ಖಾಲಿ ಇರಿಸಿಕೊಂಡಿದ್ದು, ಕಾಂಗ್ರೆಸ್‌ ಅಧಿ ಕಾರಕ್ಕೆ ಬಂದ ಕೂಡಲೇ ಅವುಗಳನ್ನು ಭರ್ತಿ ಮಾಡಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.

Advertisement

ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಮತ್ತು ರೈತರಿಗಾಗಿ ಬಿಜೆಪಿ ಸರಕಾರ ಏನು ಮಾಡಿದೆ ಎಂಬುದೇ ಈ ಬಾರಿ ಚುನಾವಣೆಯ ಪ್ರಶ್ನೆಯಾಗಿದೆ. ಬೆಲೆ ಏರಿಕೆ ಜತೆಗೆ ತೆರಿಗೆ ಹೆಸರಿನಲ್ಲಿ ಬಡವರ ಜೇಬಿನಿಂದ ಬಿಜೆಪಿ ಸರಕಾರ ಹಣ ಲೂಟಿ ಮಾಡುತ್ತಿದೆ. ದೊಡ್ಡ ದೊಡ್ಡ ನಾಯಕರು ಬಂದು ಭಾಷಣ ಮಾಡುತ್ತಿದ್ದಾರೆ. ಆದರೆ ಬೆಲೆ ಏರಿಕೆ, ರಾಜ್ಯದ ಜನರ ಅಭಿವೃದ್ಧಿ ಹಾಗೂ ಇಲ್ಲಿನ ಸಮಸ್ಯೆಗಳ ಬಗ್ಗೆ ಇವತ್ತಿನವರೆಗೂ ಯಾರೂ ಮಾತನಾಡುತ್ತಿಲ್ಲ. ಬಿಜೆಪಿ ಸರಕಾರ ರೈತರ ಅಭಿವೃದ್ಧಿಗೆ ಏನೂ ಕೊಟ್ಟಿಲ್ಲ. ಪ್ರಧಾನಿಗಳು 91 ಬೈಗುಳಗಳ ಬಗ್ಗೆ ಮಾತನಾಡುತ್ತಾರೆ. ರಾಜ್ಯದ ಜನರಿಗೆ ಏನು ಮಾಡಿದ್ದೇವೆ ಎಂಬುದನ್ನು ಎಲ್ಲೂ ಹೇಳುತ್ತಿಲ್ಲ ಎಂದರು.

ಬಿಜೆಪಿ ಸರಕಾರ ಮನೆ, ಅಂಗಡಿ ಹಾಗೂ ಜನರ ಜೇಬಿನಿಂದ ನೇರವಾಗಿ ಕಳ್ಳತನ ಮಾಡುತ್ತಿದೆ. ಇದರ ಜತೆಗೆ ಪ್ರಜಾಪ್ರಭುತ್ವದ ಲೂಟಿ, ಯುವ ಶಕ್ತಿ ಲೂಟಿ, ನಿಮ್ಮ ಆಸ್ತಿ ಲೂಟಿ ಮಾಡುತ್ತಿದೆ. ಅವರು ಕಳ್ಳರಲ್ಲಿ ಅತಿ ದೊಡ್ಡ ಕಳ್ಳರು. ನಾನು ಇಲ್ಲಿಗೆ ಮತಯಾಚಿಸಲು ಬಂದಿಲ್ಲ, ಬಿಜೆಪಿ ಬಗ್ಗೆ ನಿಮ್ಮನ್ನು ಎಚ್ಚರಿಸಲು ಬಂದಿದ್ದೇನೆ. ಕರ್ನಾಟಕದ ಜನರಿಗೆ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ನೀಡಿದೆ. ಕಳೆದ ಬಾರಿಯ ಕಾಂಗ್ರೆಸ್‌ ಸರಕಾರದಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟಿನ್‌ನಂತಹ ಜನಪರ ಯೋಜನೆಗಳ ಮೂಲಕ ಬಡತನ ನಿರ್ಮೂಲಕ್ಕೆ ಯೋಜನೆ ಜಾರಿ ಮಾಡಿತ್ತು. ಆದರೆ ಬಳಿಕ ಅಧಿ ಕಾರಕ್ಕೆ ಬಂದ ಬಿಜೆಪಿ ಸರಕಾರ ರಾಜ್ಯದಲ್ಲಿ ಲೂಟಿಗಿಳಿಯಿತು ಎಂದು ಆರೋಪಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next