Advertisement
ಬಳಿಕ ಮಾತನಾಡಿದ ಶಾಸಕರು, ಲೋಕೋಪಯೋಗಿ ಇಲಾಖೆಯ ಅಂದಾಜು 2.5 ಕೋಟಿ ಅನುದಾ ನದಲ್ಲಿ ಬಹುಬೇಡಿಕೆಯ ಈ ಸೇತುವೆ ಹಾಗೂ ಹೊಸಂಗಡಿಯಿಂದ ಯಡಮೊಗೆಗೆ ಸಂಪರ್ಕಿಸುವ ಒಂದೂವರೆ ಕಿಲೋಮೀಟರ್ ರಸ್ತೆ ಕಾಮಗಾರಿಯೂ ನಡೆಯಲಿದೆ. ಕಳೆದ ಬಾರಿ ಚುನಾವಣೆ ಸಂದರ್ಭ ಇಲ್ಲಿಗೆ ಸೇತುವೆ ಹಾಗೂ ರಸ್ತೆ ನಿರ್ಮಾಣದ ಆಶ್ವಾಸನೆ ನೀಡಿದ್ದು, ಅದರಂತೆಯೇ ಆದ್ಯತೆ ಮೇರೆಗೆ ಇಲ್ಲಿನ ಅಭಿವೃದ್ಧಿ ಕಾರ್ಯಕ್ಕೆ ಕಾಯಕಲ್ಪ ಒದಗಿಸಲಾಗಿದೆ. ಯಡಮೊಗೆಯು ಗ್ರಾಮೀಣ ಭಾಗವಾಗಿದ್ದು ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವಂತಾಗಬೇಕು ಈ ಮೂಲಕ ಊರಿನ ಸರ್ವತೋಮುಖ ಬೆಳವಣಿಗೆಗೆ ತಮ್ಮದೇ ಕೊಡುಗೆ ನೀಡಬೇಕು ಎಂದವರು ತಿಳಿಸಿದರು.
ಹೊಸಬಾಳು ಬಳಿ ಕುಬಾj ನದಿಗೆ 40 ವರ್ಷಗಳ ಹಿಂದೆ ನಿರ್ಮಿಸಿದ್ದ ಸೇತುವೆ ಶಿಥಿಲಗೊಂಡು 2 ವರ್ಷಕ್ಕೂ ಹೆಚ್ಚು ಕಾಲವಾಗಿದೆ. ಇದಲ್ಲದೆ ಸೇತುವೆಯಲ್ಲಿ ಸಂಚಾರ ಸ್ಥಗಿತಗೊಳಿಸಿ, 2018 ರಲ್ಲಿ ಪರ್ಯಾಯವಾಗಿ ತಾತ್ಕಲಿಕವಾಗಿ ಮೋರಿ ನಿರ್ಮಿಸಲಾಗಿತ್ತು. ಅದು ಕೂಡ ಮಳೆಗಾಲದಲ್ಲಿ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿತ್ತು. ಯಡಮೊಗೆಯಿಂದ ಹೊಸಂಗಡಿ ಸಂಪರ್ಕಿಸುವ ಈ ಸೇತುವೆಯನ್ನು ಮರು ನಿರ್ಮಾಣ ಮಾಡಬೇಕು ಎನ್ನುವ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿತ್ತು. ಉದಯವಾಣಿ ವರದಿ
ಯಡಮೊಗೆ – ಹೊಸಂಗಡಿ ಸಂಪರ್ಕಿಸುವ ಹೊಸಬಾಳು ಸೇತುವೆ ಶಿಥಿಲಗೊಂಡ ಬಗ್ಗೆ “ಉದಯವಾಣಿ’ಯು 2018 ರ ಜೂ.10 ರಂದು ಮೊದಲ ಬಾರಿಗೆ ವಿಶೇಷ ವರದಿ ಪ್ರಕಟಿಸಿ ಗಮನಸೆಳೆದಿತ್ತು. ಆ ಬಳಿಕವು ಅನೇಕ ಬಾರಿ ಸೇತುವೆ ದುರಸ್ತಿಗೆ ಅನುದಾನ ಬಿಡುಗಡೆಗೊಳ್ಳದ ಕುರಿತು ಕೂಡ ವಿಶೇಷ ಪ್ರಕಟಿಸಿತ್ತು.
Related Articles
Advertisement
ಶೀಘ್ರ ಪೂರ್ಣಯಡಮೊಗೆ ಜನರಿಗೆ ಅತ್ಯಂತ ಅಗತ್ಯವಿರುವ ಹಿನ್ನೆಲೆಯಲ್ಲಿ 2-3 ತಿಂಗಳೊಳಗೆ ಸೇತುವೆ ಹಾಗೂ ರಸ್ತೆ ಕಾಮಗಾರಿ ಪೂರ್ಣಗೊಂಡು ಸುಗಮ ಸಂಚಾರಕ್ಕೆ ಅನುಕೂಲವಾಗಿದೆ. ಯಡಮೊಗೆ ಸೇತುವೆಯಿಂದ ಕಮಲಶಿಲೆ ರಸ್ತೆ ಸಂಪರ್ಕದ ಸುಮಾರು 5 ಕಿ.ಮಿ ರಸ್ತೆ ಅಭಿವೃದ್ಧಿಗೆ ನಮ್ಮ ಗ್ರಾಮ – ನಮ್ಮ ರಸ್ತೆ ಯೋಜನೆಯಡಿ 5 ಕೋ.ರೂ. ಕೂಡ ಈಗಾಗಲೇ ಅನುದಾನ ಮಂಜೂರಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರು ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಸರ್ವ ಸಹಕಾರ ನೀಡುತ್ತಿದ್ದಾರೆ.
– ಬಿ.ಎಂ. ಸುಕುಮಾರ್ ಶೆಟ್ಟಿ,ಬೈಂದೂರು ಶಾಸಕರು