Advertisement

ಹತ್ತು ವರ್ಷದಲ್ಲಿ 2.33 ಲಕ್ಷ ಮನೆ ಪೂರ್ಣ: ಸಚಿವ ಸೋಮಣ್ಣ

08:39 PM Sep 22, 2021 | Team Udayavani |

ಬೆಂಗಳೂರು: ವಿವಿಧ ವಸತಿ ಯೋಜನೆಗಳಡಿ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ 2010-11ರಿಂದ 2021ರ ಆಗಸ್ಟ್‌ ಅಂತ್ಯಕ್ಕೆ 2.33 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

Advertisement

ವಿಧಾನಪರಿಷತ್ತಿನಲ್ಲಿ ಬುಧವಾರ ಬಿಜೆಪಿ ಸದಸ್ಯ ಹಣಮಂತ ನಿರಾಣಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಅವಧಿಯಲ್ಲಿ ಎರಡೂ ಜಿಲ್ಲೆಗಳಲ್ಲಿ 3.45 ಲಕ್ಷ ಮನೆಗಳು ಅನುಮೋದನೆಗೊಂಡಿದ್ದು, ಅದರಲ್ಲಿ 2.33 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದೆ. 39 ಸಾವಿರ ಮನೆಗಳು ಪ್ರಗತಿಯಲ್ಲಿದ್ದು, 6,493 ಮನೆಗಳು ಪ್ರಾರಂಭವಾಗಬೇಕಿದೆ. 65 ಸಾವಿರ ಮನೆಗಳು ರದ್ದು ಅಥವಾ ಬ್ಲಾಕ್‌ ಆಗಿವೆ ಎಂದು ಮಾಹಿತಿ ನೀಡಿದ್ದಾರೆ.

ಬಾಲಕೋಟೆ ಜಿಲ್ಲೆಯಲ್ಲಿ 98,260 ಮನೆಗಳು ಅನುಮೋದನೆಗೊಂಡಿದ್ದು, 54,916 ಮನೆಗಳು ಪೂರ್ಣಗೊಳಿಸಲಾಗಿದೆ. 13,764 ಮನೆಗಳು ಪ್ರಗತಿಯಲ್ಲಿವೆ. 755 ಮನೆಗಳು ಪ್ರಾರಂಭವಾಗಬೇಕಿದ್ದು, 28,825 ಮನೆಗಳನ್ನು ರದ್ದು ಅಥವಾ ಬ್ಲಾಕ್‌ ಮಾಡಲಾಗಿದೆ. ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿ 2.47 ಲಕ್ಷ ಮನೆಗಳು ಅನುಮೋದನೆಗೊಂಡಿದ್ದು, 1.78 ಲಕ್ಷ ಮನೆಗಳು ಪೂರ್ಣಗೊಂಡಿವೆ. 25, 884 ಮನೆಗಳು ಪ್ರಗತಿಯಲ್ಲಿವೆ. 5,738 ಮನೆಗಳು ಪ್ರಾರಂಭವಾಗಬೇಕಿದ್ದು, 36,979 ಮನೆಗಳು ರದ್ದು ಅಥವಾ ಬ್ಲಾಕ್‌ ಆಗಿವೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಬೆಳಗಾವಿ : 28ರಿಂದ ಸವದತ್ತಿ ಶ್ರೀ ಯಲ್ಲಮ್ಮ ದೇವಿ ದರ್ಶನ ಭಾಗ್ಯ

ಅದೇ ರೀತಿ ಬಾಗಲಕೋಟೆ ಜಿಲ್ಲೆಯಲ್ಲಿ 2002-03ರಿಂದ 2021-22ನೇ ಸಾಲಿನವರೆಗೆ ಗ್ರಾಮೀಣ ನಿವೇಶನಕ್ಕೆ 291 ಎಕರೆ ಮತ್ತು ನಗರ ನಿವೇಶನಕ್ಕೆ 261 ಎಕರೆ ಜಮೀನನ್ನು ಖಾಸಗಿಯವರಿಂದ ಖರೀದಿಸಲಾಗಿದ್ದು, ಇದಕ್ಕಾಗಿ ಕ್ರಮವಾಗಿ 3.67 ಕೋಟಿ ರೂ. ಮತ್ತು 19.54 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಗ್ರಾಮೀಣ ನಿವೇಶನಕ್ಕೆ 24 ಎಕರೆ, ನಗರ ನಿವೇಶನಕ್ಕೆ 81 ಎಕರೆ ಜಮೀನು ಖರೀದಿಸಲಾಗಿದ್ದು, ಅದಕ್ಕಾಗಿ 73 ಲಕ್ಷ ಮತ್ತು 9.60 ಕೋಟಿ ರೂ. ಹಣ ಸೇರಿ ಎರಡೂ ಜಿಲ್ಲೆಗಳಲ್ಲಿ ಒಟ್ಟು 658 ಎಕರೆಗೆ 33.55 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Advertisement

3 ಲಕ್ಷ ವಸತಿರಹಿತರು: ಬಾಗಲಕೋಟೆ ಜಿಲ್ಲೆಯಲ್ಲಿ 61,448 ಗ್ರಾಮೀಣ, 22,942 ನಗರ ವಸತಿ ರಹಿತರು ಸೇರಿ ಒಟ್ಟು 84,390 ವಸತಿರಹಿತರು. 32 ಸಾವಿರ ಗ್ರಾಮೀಣ ಮತ್ತು 16 ಸಾವಿರ ನಗರ ನಿವೇಶನ ರಹಿತರು ಸೇರಿ ಒಟ್ಟು 48,210 ನಿವೇಶನ ರಹಿತರು ಇದ್ದಾರೆ. ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿ 2.04 ಲಕ್ಷ ಗ್ರಾಮೀಣ, 55,273 ನಗರ ವಸತಿ ರಹಿತರು ಸೇರಿ 2.37 ಲಕ್ಷ ವಸತಿರಹಿತರು. 19,654 ಗ್ರಾಮೀಣ, 27,643 ನಗರ ನಿವೇಶನರಹಿತರು ಸೇರಿ 47,297 ನಿವೇಶನ ರಹಿತರು ಇದ್ದಾರೆ. ಎರಡೂ ಜಿಲ್ಲೆಗಳಲ್ಲಿ ಒಟ್ಟಾರೆ 3.21 ಲಕ್ಷ ವಸತಿರಹಿತರು ಮತ್ತು 95,507 ನಿವೇಶನ ರಹಿತರು ಇದ್ದಾರೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next