Advertisement
ಹುಂಡಿ ಎಣಿಕೆ ಪ್ರಕ್ರಿಯೆಯು ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಶ್ರೀಗಳ ದಿವ್ಯಸಾನ್ನಿಧ್ಯದಲ್ಲಿ ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿ ಸಮ್ಮುಖದಲ್ಲಿ ಸಿಸಿ ಟಿವಿ ಕಣ್ಗಾವಲಿನಲ್ಲಿ ಜರುಗಿತು. ಈ ಬಾರಿಯ ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ 45 ದಿನಗಳ ಅವಧಿಯಲ್ಲಿ 2,33,57,028 (ಎರಡು ಕೋಟಿ ಮೂವತ್ತಮೂರು ಲಕ್ಷದ ಐವತ್ತೇಳು ಸಾವಿರದ ಇಪ್ಪತ್ತೆಂಟು) ರೂ. ನಗದು, 155ಗ್ರಾಂ ಚಿನ್ನ ಮತ್ತು 2 ಕೆ.ಜಿ 200 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
Related Articles
Advertisement
ಬೆಟ್ಟದಲ್ಲಿ ದಾಸೋಹ ಸೇವೆ ಆರಂಭಮಲೆ ಮಹದೇಶ್ವರ ಬೆಟ್ಟದಲ್ಲಿ2ನೇ ಅಲೆ ಹಿನ್ನೆಲೆ ಭಕ್ತಾದಿಗಳಿಗೆ ನಿರ್ಬಂಧಿಸಲಾಗಿದ್ದ ದಾಸೋಹ ಸೇವೆ ಹಾಗೂ ಡಾರ್ಮಿಟರಿ ಕಟ್ಟಡಗಳ ಬಳಕೆಗೆ ಅನುಮತಿ ನೀಡಲಾಗಿದೆ. ಮಾದಪ್ಪನ ಬೆಟ್ಟದಲ್ಲಿ ಶುಕ್ರವಾರದಿಂದಲೇ ದಾಸೋಹ ಸೇವೆ ಆರಂಭವಾಗಿದ್ದು, ಶ್ರೀಕ್ಷೇತ್ರದಲ್ಲಿ ತಂಗುವ ಭಕ್ತಾದಿಗಳಿಗೆ ಡಾರ್ಮಿಟರಿ ಕಟ್ಟಡವನ್ನೂ ಬಾಡಿಗೆಗೆ ನೀಡಲು ಅವಕಾಶಕಲ್ಪಿಸಲಾಗಿದೆ. ಅಲ್ಲದೆ ಡಾರ್ಮಿಟರಿಯಲ್ಲಿ10 ಜನಕ್ಕೆ ಮಾತ್ರ ಅವಕಾಶಕಲ್ಪಿಸಲಾಗಿದೆ. ಅಲ್ಲದೆ ಪ್ರಾಧಿಕಾರದ5 ಬಸ್‌ಗಳ ಸಂಚಾರಕ್ಕೆ ಆಗಸ್ಟ್1ರಿಂದ ಅವಕಾಶಕಲ್ಪಿಸಲಾಗಿದೆ.ಇನ್ನುಳಿದಂತೆ ಲಾಡು ಪ್ರಸಾದ ವಿತರಣೆ, ತೀರ್ಥ ಪ್ರಸಾದ, ಉತ್ಸವ ಮತ್ತು ರಥೋತ್ಸವ ಸೇವೆಗಳಿಗೆ ಇದ್ದ ನಿರ್ಬಂಧವನ್ನು ಮುಂದುವರಿಸಲಾಗಿದೆ.