Advertisement
ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ 2.60 ಕೋಟಿ ಅನುದಾನ ನೀಡಲಾಗಿದ್ದು, ಇನ್ನೂ ಹೆಚ್ಚಿನ ಅನುದಾನ ಕಲ್ಪಿಸಲು ಸಿದ್ಧನಿದ್ದೇನೆ. ಪಸ್ತುತ ಗ್ರಂಥಾಲಯದಲ್ಲಿ 36 ಸಾವಿರ ಪುಸ್ತಕಗಳಿದ್ದು, ಡಿಜಿಟಲ್ ಗ್ರಂಥಾಲಯ ಮತ್ತು ಸುಸಜ್ಜಿತ ಆಡಿಟೋರಿಯಂ ನಿರ್ಮಾಣಕ್ಕೆ ಎಲ್ಲಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಶೈಕ್ಷಣಿಕ ಫಲಿತಾಂಶದಲ್ಲಿ ವಿದ್ಯಾರ್ಥಿ ನಿಯರೇ ಮುಂದಿದ್ದು, ಮಹಿಳೆಯರು ಎಲ್ಲಾ ರಂಗದಲ್ಲೂ ಪುರುಷರಿಗೆ ಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಸಜ್ಜಿತ ಗ್ರಂಥಾ ಲಯದ ಅನುಕೂಲ ಪಡೆದು ಉತ್ತಮ ಫಲಿತಾಂಶ ಪಡೆದು ಕಾಲೇಜಿಗೂ ಹಾಗೂ ಪೋಷಕರಿಗೆ ಹೆಸರು ತರಬೇಕು. ತಾಲೂಕಿನ ವಿದ್ಯಾರ್ಥಿನಿಯರು ಐಎಎಸ್, ಐಪಿಎಸ್ ಪರೀಕ್ಷೆ ಗಳಲ್ಲಿ ಉತ್ತೀರ್ಣರಾದರೆ ವೈಯಕ್ತಿಕವಾಗಿ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದರು. ತಹಶೀಲ್ದಾರ್ ರಾಜು, ಪ್ರಾಂಶುಪಾಲ ಡಾ. ಬಾಲಪ್ಪ, ಗುತ್ತಿಗೆದಾರ ರಂಗನಾಥ್, ಎ.ಡಿ. ಬಲರಾಮಯ್ಯ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವತ್ಥ ನಾರಾಯಣ್, ಜಿ.ಡಿ. ನಾಗಭೂಷಣ್ ಇತರರಿದ್ದರು. Advertisement
ಕೊಠಡಿ ನಿರ್ಮಾಣಕ್ಕೆ 2.30 ಕೋಟಿ ರೂ. ಅನುದಾನ
12:41 PM Sep 08, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.