ಯಾದಗಿರಿ: ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯದಿಂದ ನದಿಗೆ ನೀರಿನ ಹರಿವು 2.20 ಲಕ್ಷ ಕ್ಯೂಸೆಕ್ ಏರಿಕೆಯಾಗಿದೆ.
ಹುಣಸಗಿ ತಾಲೂಕಿನ ಛಾಯಾಭಗವತಿ ದೇವಸ್ಥಾನದ ಬಳಿಯ ಎಡದನಮಾಳಿ ತಪ್ಪಲು ನಡುಗಡ್ಡೆಯಲ್ಲಿ 165 ಕುರಿಗಳೊಂದಿಗೆ ಕುರಿಗಾಹಿ ಸಿಲುಕಿದ್ದು ಅಧಿಕಾರಿಗಳು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.
ನೀಲಕಂಠರಾಯನಗಡ್ಡಿ ಗ್ರಾಮಕ್ಕೆ ಸೇತುವೆ ನಿರ್ಮಾಣ ಮಾಡಿರುವುದರಿಂದ ಈ ವರ್ಷ ನೀಲಕಂಠರಾಯನಗಡ್ಡಿ ಗ್ರಾಮಸ್ಥರು ನಿರಾತಂಕವಾಗಿದ್ದಾರೆ.
ನದಿ ಪಾತ್ರದ ಯಕ್ಷಿಂತಿ, ಗೌಡೂರ, ಎಂ. ಕೊಳ್ಳೂರು, ಚನ್ನೂರ, ಗೊಂದೆನೂರ, ಶಿವನೂರ ಗ್ರಾಮ ಗಳಲ್ಲಿ ಪ್ರವಾಹ ನೀರು ನುಗ್ಗುವ ಆತಂಕ ಎದುರಾಗಿದೆ.
ಇದನ್ನೂ ಓದಿ: ಪ್ರವಾಹ ಪರಿಸ್ಥಿತಿ: 165 ಕುರಿಗಳೊಂದಿಗೆ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಹಿ ಟೋಪಣ್ಣ!
ಇನ್ನು ಸನ್ನತಿ ಬ್ಯಾರೇಜ್ ನಿಂದ ಭೀಮಾ ನದಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದ್ದು ಜನ ಜಾನುವಾರುಗಳು ನದಿ ಪಾತ್ರಕ್ಕೆ ತೆರಳದಂತೆ ಜಿಲ್ಲಾಧಿಕಾರಿ ಕೂರ್ಮರಾವ್ ಮನವಿ ಮಾಡಿದ್ದಾರೆ.
ಮತ್ತಷ್ಟು ಹರಿವು ಏರಿಕೆಯಾಗುವ ಸಾಧ್ಯತೆಯಿದೆ. ಅಗತ್ಯವಿದ್ದರೆ ಪ್ರವಾಹ ಪರಿಸ್ಥಿತಿ ಎದುರಾಗುವ ಗ್ರಾಮಸ್ಥರನ್ನು ಬೇರೆಡೆ ಸ್ಥಳಾಂತರ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.