Advertisement

ಫ‌ುಟ್‌ಬಾಲ್‌: ಭಾರತಕ್ಕಿಲ್ಲ ಏಶ್ಯಾಡ್‌ ಅವಕಾಶ

06:00 AM Jul 03, 2018 | Team Udayavani |

ಹೊಸದಿಲ್ಲಿ: ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ (ಐಒಎ) ವಿಚಿತ್ರ ನಿರ್ಧಾರದಿಂದಾಗಿ ಭಾರತ ಫ‌ುಟ್‌ಬಾಲ್‌ ತಂಡ ಮುಂಬರುವ ಏಶ್ಯನ್‌ ಗೇಮ್ಸ್‌ ನಲ್ಲಿ ಆಡುವ ಅವಕಾಶ ತಪ್ಪಿಸಿಕೊಳ್ಳಲಿದೆ. ತಂಡ ವಿಭಾಗದಲ್ಲಿ ಅಗ್ರ 8 ಶ್ರೇಯಾಂಕ ಹೊಂದಿರುವ ತಂಡಗಳಿಗೆ ಮಾತ್ರ ಏಶ್ಯನ್‌ ಗೇಮ್ಸ್‌ಗೆ ಅರ್ಹತೆ ಎಂದು ಐಒಎ ನಿರ್ಧಾರ ತೆಗೆದುಕೊಂಡಿದೆ. ಈ ನಿಯಮದಿಂದಾಗಿ ಭಾರತ ಫ‌ುಟ್‌ಬಾಲ್‌ ತಂಡಕ್ಕೆ ಭಾಗವಹಿಸಲು ಸಾಧ್ಯವಾಗುವುದಿಲ್ಲ. 

Advertisement

ಭಾರತ ತಂಡ ಇತ್ತೀಚಿನ ದಿನಗಳಲ್ಲಿ ಫಿಫಾ ಶ್ರೇಯಾಂಕದಲ್ಲಿ ಉತ್ತಮ ನಿರ್ವಹಣೆ ತೋರಿದೆ. ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಪ್ರದರ್ಶನ ನೀಡಿದೆ. ಫ‌ುಟ್‌ಬಾಲ್‌ ಬೆಳೆಯಬೇಕಾದ ಹಂತದಲ್ಲಿರುವಾಗ ಐಒಎ ಇಂಥದೊಂದು ನಿರ್ಧಾರ ತೆಗೆದು ಕೊಂಡಿರುವುದು ಟೀಕೆಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next