Advertisement

ಪಡಿಕ್ಕಲ್ ಅರ್ಧ ಶತಕದ ಆಟ ; ಕೊನೆಯಲ್ಲಿ ಮಿಂಚಿದ ಎಬಿಡಿ : ಹೈದರಾಬಾದ್ ಗೆ 164 ರ ಗುರಿ

09:26 PM Sep 21, 2020 | Suhan S |

ಆಬುಧಾಬಿ : ಐಪಿಎಲ್ ನ ಮೂರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಸವಾಲಿಗೆ ಇಳಿದ ಆರ್ ಸಿ ಬಿ ಪ್ರಾರಂಭಿಕ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 164 ರ ಗುರಿ ಬಿಟ್ಟು ಕೊಟ್ಟಿದೆ.

Advertisement

ಆರ್ ಸಿ ಬಿ ಪರ ಪ್ರಾರಂಭಿಕ ಜೋಡಿಗಳಾಗಿ ಕ್ರಿಸಿಗೀಳಿದ ದೇವದತ್ ಪಡಿಕ್ಕಲ್ ಹಾಗೂ ಆರೋನ್ ಫಿಂಚ್ ಉತ್ತಮವಾದ ಆರಂಭ ನೀಡಿದರು. ಆರಂಭದಿಂದಲೇ ಬಿರುಸಿನಿಂದ ಬ್ಯಾಟ್ ಬೀಸಿದ ಯುವ ಆಟಗಾರ ಪಡಿಕ್ಕಲ್ 42 ಎಸತೆಗಳನ್ನು ಎದುರಿಸಿ 8 ಬೌಂಡರಿಗಳನ್ನು ಬಾರಿಸಿ   56 ರನ್ ಗಳಿಸುವ ಮೂಲಕ  ತಮ್ಮ ಚೊಚ್ಚಲ ಅರ್ಧ ಶತಕವನ್ನು ದಾಖಲಿಸಿ ವಿಜಯ್ ಶಂಕರ್ ಎಸತೆಕ್ಕೆ ಬೌಲ್ಡ್ ಔಟ್ ಆಗಿ ವಿಕೆಟ್ ಒಪ್ಪಿಸಿದರು.  ತುಸು ನಿಧಾನವಾಗಿಯೇ ಬ್ಯಾಟ್ ಬೀಸಿದ ಆರೋನ್ ಫಿಂಚ್ 27 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಗಳನ್ನು ಬಾರಿಸಿ  29 ರನ್ ಗಳಿಸಿ ಅಭಿಷೇಕ್ ಎಸೆತಕ್ಕೆ ಎಲ್ ಬಿ ಆಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಪ್ರಾರಂಭಿಕ ಜೋಡಿ 89 ರನ್ ಗಳ ಜೊತೆಯಾಟ ನೀಡಿ ತಂಡಕ್ಕೆ ಆಶಾದಾಯಕ ಆರಂಭ ನೀಡಿತ್ತು.

ನಂತರ ಬಂದ ಕಪ್ತಾನ ವಿರಾಟ್ ಕೊಹ್ಲಿ ನಿರೀಕ್ಷೆಯಷ್ಟು ಅಬ್ಬರಿಸದೆ ಬರೀ 14 ರನ್ ಬಾರಿಸಿ ನಟರಾಜನ್ ಎಸೆತೆಕ್ಕೆ ಕ್ಯಾಚ್ ಕೊಟ್ಟು ಸಾಗಿದರು.ಎಬಿ ಡಿವಿಲಿಯರ್ಸ್ 51 ರನ್ ಗಳ ಬಿರುಸಿನ ಆಟ ನೀಡಿ ರನ್ ಔಟ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು. ಶಿವಂ ದುಬೆ ಅಂತಿಮ ಓವರ್ ಗಳಲ್ಲಿ ಬ್ಯಾಟ್ ಬೀಸಿ ನೆರವಾದರು.

ಒಟ್ಟಿನಲ್ಲಿ ಆರ್ ಸಿಬಿ ಮೊದಲ ಇನ್ನಿಂಗ್ಸ್ ನಲ್ಲಿ 5  ವಿಕೆಟ್ ನಷ್ಟಕ್ಕೆ 164 ರ ಗುರಿಯನ್ನು ಬಿಟ್ಟು ಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next