Advertisement
ನಗರದ ಬಸವ ಮಹಾಮನೆ ಆವರಣದಲ್ಲಿ ಹಮ್ಮಿಕೊಂಡ 19ನೇ ಕಲ್ಯಾಣ ಪರ್ವ ಉತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಬಸವದಳ ಮತ್ತು ಬಸವ ಧರ್ಮ ಪೀಠ ಎರಡು ನಮಗೆ ಬೇಕು. ಆದರೆ ರಾಷ್ಟ್ರೀಯ ಬಸವ ದಳದಲ್ಲಿ ಇದ್ದುಕೊಂಡು ಗುಂಪುಗಾರಿಕೆ ಮಾಡುತ್ತೆನೆ ಎಂಬ ಭ್ರಮೆಯಲ್ಲಿದ್ದರೆ ಮೊದಲು ಅದನ್ನು ತೆಗೆದು ಹಾಕಿ ಎಂದರು. ನಿಮ್ಮ ನಿಮ್ಮ ವೈಯಕ್ತಿಕ ದ್ವೇಷಗಳು ಸಂಘಟನೆಯಲ್ಲಿ ತರಬಾರದು ಎಂದರು. ಸಂಪ್ರದಾಯ ವಾದಿಗಳು ವಚನ ಸಾಗಿತ್ಯ ಸಹಿಸಿಕೊಳ್ಳಲಿಲ್ಲ. ವಚನ ಸಾಹಿತ್ಯ ಸುಟ್ಟು ಹಾಕಿದ್ದರು ಹೀಗಾಗಿ ಕಲ್ಯಾಣದಲ್ಲಿ ಕ್ರಾಂತಿ ಆಯಿತು. ನಂತರ ಮತ್ತೆ ಶ್ರೀ ಲಿಂಗಾನಂದ ಅಪ್ಪಾಜಿ ಹಾಗೂ ಲಿಂ.ಜಗದ್ಗುರು ಮಾತೆ ಮಹಾದೇವಿ ಅವರ ಸಂಘಟನೆ ಮಾಡಿ ಹೋಗಿದ್ದಾರೆ. ಹೀಗಾಗಿ ನಾವೆಲ್ಲರು ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಜಗತ್ತಿಗೆ ಏನಾದರೂ ಸಂದೇಶ ನೀಡಲು ಸಾಧ್ಯ ಎಂದರು.
Related Articles
Advertisement
ಗೀತಾ ಚಿದ್ರಿ ಹಾಗೂ ಗೌರಮ ಬಿ.ನಾರಾಯಣರಾವ್ ಮಾತನಾಡಿದರು. ಶ್ರೀ ಜಗದ್ಗುರು ಮಾತೆ ಜ್ಞಾನೇಶ್ವರಿ ಮತ್ತು ದಾನೇಶ್ವರಿ ಧರ್ಮಗುರು ಪೂಜೆ ನೆರವೇರಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಶಿವಶರಣಪ್ಪ ಪಾಟೀಲ ಹಾರೂಗೇರಿ ಅಧ್ಯಕ್ಷತೆ ವಹಿಸಿದ್ದರು. ಬಸವಕಲ್ಯಾಣ ಅಲ್ಲಮಪ್ರಭು ಶೂನ್ಯಪೀಠದ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ, ಬಸವ ಮಹಾಮನೆ ಬಸವ ಪ್ರಭು ಸ್ವಾಮೀಜಿ, ಮಾಲಾ ಬಿ.ನಾರಾಯಣರಾವ್, ಶಿವರಾಜ ಪಾಟೀಲ ಅತಿವಾಳ, ಬಸವರಾಜ ಪಾಟೀಲ ಶಿವಪೂರ,
ಶಿವರಾಜ ನರಶೆಟ್ಟಿ, ಶಾಂತಾ ಎಸ್.ಬಿರಾದಾರ್, ಶೀಲಾ ಸೋಮಶೇಕರ ಪಾಟೀಲ, ಮೇನಕಾ ನರೇಂದ್ರ ಪಾಟೀಲ, ಸರಸ್ವತಿ ಖಂಡ್ರೆ ಮತ್ತಿತರರು ಇದ್ದರು.