Advertisement
ತುಂಗಭದ್ರಾ ಬೋರ್ಡ್ ಹಾಗೂ ನೀರಾವರಿ ಅಧಿಕಾರಿ ವರ್ಗವು ತಜ್ಞ ಕನ್ನಯ್ಯ ಅವರನ್ನು ಗೇಟ್ ಅಳವಡಿಕೆಗೆ ಸಲಹೆ ಕೇಳಲು ಡ್ಯಾಂಗೆ ಆಹ್ವಾನ ಮಾಡಿದ್ದು ಅವರು ಗೇಟ್ ಮುರಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಹರಿಸದೇ ನೀರನ್ನು ಉಳಿಸಿಕೊಂಡು ಸಹ ತುಂಗಭದ್ರಾ ಡ್ಯಾಮ್‌ಗೆ ಹೊಸ ಗೇಟ್ ಅಳವಡಿಸಬಹುದು ಎಂಬುದಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Related Articles
Advertisement
ಸಿಎಂ ಜೊತೆಗೆ ಮಾತುಕತೆಗೆ ಅವಕಾಶ : ಜಲಾಶಯಕ್ಕೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡ್ಯಾಮ್‌ಗೆ ಭೇಟಿ ನೀಡುತ್ತಿದ್ದು, ತಲಾ 12 ಅಡಿಯ 5 ಸೆಗ್ಮೇಂಟ್‌ಗಳನ್ನು ಕ್ರೇನ್ ಮೂಲಕ ಕೆಳಗಿಳಿಸಿ ನೀರು ತಡೆ ಹಿಡಿಯಬಹುದು ಎನ್ನುವ ಸಲಹೆಯ ಬಗ್ಗೆ ಮುಖ್ಯಮಂತ್ರಿಗಳೊಂಡಿಗೆ ಮಾತುಕತೆ ನಡೆಸಲು ತಮಗೆ ಅವಕಾಶ ಕಲ್ಪಿಸಿಕೊಡುವುದಾಗಿ ಚರ್ಚೆಯ ವೇಳೆ ಕನ್ಹಯ್ಯ ನಾಯ್ಡು ಅವರಿಗೆ ಸಚಿವರು, ಸಂಸದರು, ಶಾಸಕರು ತಿಳಿಸಿದರು. ಈಗ ಹಾಳಾಗಿರುವ ಗೇಟ್ ಒಟ್ಟು 60 ಅಡಿ ಉದ್ದ ಇದೆ. ಇಲ್ಲಿ ತಲಾ 12 ಅಡಿಯ 5 ಸೆಗ್ಮೇಂಟ್‌ಗಳನ್ನು ಕ್ರೇನ್ ಮೂಲಕ ಕೆಳಗಿಳಿಸಿ ನೀರನ್ನು ತಡೆ ಹಿಡಿಯಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಜಿಂದಾಲ್ ಸೇರಿದಂತೆ ನಾನಾ ಕಡೆ ಸೆಗ್ಮೇಂಟ್‌ಗಳ ತಯಾರಿ ನಡೆಯುತ್ತಿದೆ ಎಂದು ನೀರಾವರಿ ನಿಗಮದ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರಿಗೆ ಮಾಹಿತಿ ನೀಡಿದರು.
ಡ್ಯಾಂ ಎಕ್ಸಪರ್ಟ್ ಜೊತೆ ಮಾತುಕಥೆ :
ಆಲಮಟ್ಟಿ, ನಾರಾಯಣಪುರ, ಕೆಆರ್‌ಎಸ್ ಸೇರಿದಂತೆ ಹಲವಾರು ಜಲಾಯಶಯಗಳಿಗೆ ಗೇಟ್ ಅಳವಡಿಸಿದ ನ್ಯಾಷನಲ್ ಡ್ಯಾಮ್ ಗೇಟ್ ಎಕ್ಸ್ ಪರ್ಟ್ ಕನ್ನಯ್ಯ ನಾಯ್ಡು ಅವರ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದರಾದ ರಾಜಶೇಖರ್ ಹಿಟ್ನಾಳ, ಶಾಸಕ ಎಚ್.ಆರ್. ಗವಿಯಪ್ಪ ಮತ್ತು ಹಂಪನಗೌಡ ಬಾದರ್ಲಿ ಅವರು ಸುಧೀರ್ಘ ಸಮಯ ಮಾತುಕತೆ ನಡೆಸಿ ಹೊಸ ಗೇಟ್ ಅಳವಡಿಕೆಯ ಬಗ್ಗೆ ಸಲಹೆ ಪಡೆದುಕೊಂಡರು.
ಕರ್ನೂಲ್ ಸಂಸದರು ಭೇಟಿ: ಕರ್ನೂಲ್ ಸಂಸದರಾದ ಪಂಚಲಿಂಗ ನಾಗರಾಜ, ಆಲೂರು ಮತ್ತು ಮಂತ್ರಾಲಯದ ಮುಖಂಡರಾದ ವೀರಭದ್ರಗೌಡ, ರಾಘವೇಂದ್ರ ರೆಡ್ಡಿ ಅವರು ಟಿ.ಬಿ.ಡ್ಯಾಮ್‌ಗೆ ಭೇಟಿ ನೀಡಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಕೊಪ್ಪಳ ಹಾಗೂ ವಿಜಯನಗರ ಮತ್ತು ಸಿಂಧನೂರ ಶಾಸಕರೊಂದಿಗೆ ಗೇಟ್ ದುರಸ್ತಿಯ ಬಗ್ಗೆ ಚರ್ಚಿಸಿದ್ದಾರೆ.