Advertisement

ಆರ್‌ಬಿಐಯಲ್ಲಿ 199 ಹುದ್ದೆ

12:39 AM Sep 21, 2019 | Sriram |

ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ 199 ಬಿ ಗ್ರೇಡ್‌ ಹುದ್ದೆಗಳು ಖಾಲಿ ಇದ್ದು, ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 21ರಿಂದ 30 ವರ್ಷ ವಯೋಮಿತಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅ. 11. ಬೆಂಗಳೂರು, ಮಂಗಳೂರು , ಹುಬ್ಬಳಿ,ಉಡುಪಿ, ಗುಲ್ಬರ್ಗಾ, ಮೈಸೂರು ಮತ್ತು ಶಿವಮೊಗ್ಗದಲ್ಲಿ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ www.rbi.org.in. ಸಂಪರ್ಕಿಸಿ.

Advertisement

ರೈಲ್ವೇ ನೇಮಕಾತಿ ಸೆಲ್‌ನಲ್ಲಿ ಹುದ್ದೆಗಳು
ಪಶ್ವಿ‌ಮ ರೈಲ್ವೇಯ ನೇಮಕಾತಿ ಸೆಲ್‌ನಲ್ಲಿ 149 ಜೂನಿಯರ್‌ ಎಂಜಿನಿಯರ್‌ ಹುದ್ದೆಗಳು ಖಾಲಿ ಇದ್ದು, ಎಂಜಿನಿಯರಿಂಗ್‌ ಅಥವಾ ಡಿಪ್ಲೊಮಾ ಶಿಕ್ಷಣ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 18ರಿಂದ 42 ವರ್ಷ ವಯೋಮಿತಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅ. 15. ಹೆಚ್ಚಿನ ಮಾಹಿತಿಗಾಗಿ www.rrc-wr.com ಸಂಪರ್ಕಿಸಬೇಕು.

ಸಿಬಂದಿ ಆಯ್ಕೆ ಸಮಿತಿ: ಅನುವಾದಕ ಹುದ್ದೆ
ಸಿಬಂದಿ ಆಯ್ಕೆ ಸಮಿತಿ ದೇಶಾದ್ಯಂತ ಹಿಂದಿ ಅನುವಾದಕ ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸೆ.26 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಹೆಚ್ಚಿ ಮಾಹಿತಿಗಾಗಿ ssc.nic.in ಸಂಪರ್ಕಿಸಿ.

Advertisement

Udayavani is now on Telegram. Click here to join our channel and stay updated with the latest news.

Next