Advertisement

JN.1 ಕೇಸು ಕರ್ನಾಟಕದಲ್ಲಿ 199: ಇದು ದೇಶದಲ್ಲಿಯೇ ಅತ್ಯಧಿಕ

01:16 AM Jan 09, 2024 | Team Udayavani |

ಹೊಸದಿಲ್ಲಿ: ಕರ್ನಾಟಕ ಸೇರಿದಂತೆ ದೇಶದ 12 ರಾಜ್ಯಗಳಲ್ಲಿ ದೃಢಪಟ್ಟಿರುವ ಕೋವಿಡ್‌ ಉಪತಳಿ ಜೆಎನ್‌.1 ಪ್ರಕರಣಗಳ ಸಂಖ್ಯೆ 682ಕ್ಕೆ ಏರಿಕೆಯಾಗಿದೆ. ಜ.7ರ ವರೆಗಿನ ಮಾಹಿತಿಯನ್ನು ಕೇಂದ್ರ ಸರಕಾರ ಸೋಮವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 199 ಪ್ರಕರಣಗಳು ದಾಖಲಾಗಿರುವ ಕರ್ನಾಟಕ ಮೊದಲ ಸ್ಥಾನದಲ್ಲಿದೆ. 148 ಪ್ರಕರಣಗಳು ಇರುವ ಕೇರಳ 2ನೇ, 139 ಕೇಸುಗಳಿರುವ ಮಹಾರಾಷ್ಟ್ರ 3ನೇ, 47 ಕೇಸುಗಳಿರುವ ಗೋವಾ ನಾಲ್ಕನೇ ಸ್ಥಾನದಲ್ಲಿದೆ. ಇದೇ ವೇಳೆ ದೇಶದಲ್ಲಿ ಕೊರೊನಾದಿಂದಾಗಿ ನಾಲ್ವರು ಅಸುನೀಗಿದ್ದಾರೆ. ರವಿವಾರದಿಂದ ಸೋಮವಾರದ ಅವಧಿಯಲ್ಲಿ 605 ಕೇಸುಗಳು ದೃಢಪಟ್ಟಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next