Advertisement

ನಾಗರಹೊಳೆಯಲ್ಲಿ 1,920 ಕಿ.ಮೀ. ಫೈರ್‌ಲೈನ್‌ ನಿರ್ಮಾಣ

01:10 AM Jan 19, 2019 | Team Udayavani |

ಹುಣಸೂರು: ಮುಂಬರುವ ಬೇಸಿಗೆ-ಬಿರುಗಾಳಿಗೆ ಹರಡಬಹುದಾದ ಬೆಂಕಿ ಅನಾಹುತವನ್ನು ತಡೆ ಯಲು ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಅರಣ್ಯ ಇಲಾಖೆ ಸರ್ವ ಸನ್ನದ್ಧವಾಗಿದ್ದು, ಫೈರ್‌ಲೈನ್‌ ನಿರ್ಮಿಸಿ ಕಟ್ಟೆಚ್ಚರ ವಹಿಸಿದೆ. ಈಗಾಗಲೇ ಉದ್ಯಾನದ ಎಲ್ಲ 8 ವಲಯಗಳಲ್ಲೂ ಬೆಂಕಿ ರೇಖೆ ನಿರ್ಮಿಸಲು ಬಹುತೇಕ ಕಡೆ ಗಿಡಗಂಟಿಗಳನ್ನು ತೆರವುಗೊಳಿಸಲಾಗಿದೆ.

Advertisement

1,920 ಕಿ.ಮೀ. ಬೆಂಕಿ ರೇಖೆ: ನಾಗರಹೊಳೆ, ಕಲ್ಲಹಳ್ಳ, ಆನೆಚೌಕೂರು, ವೀರನಹೊಸಹಳ್ಳಿ, ಮೇಟಿ ಕುಪ್ಪೆ, ಅಂತರಸಂತೆ, ಡಿ.ಬಿ.ಕುಪ್ಪೆ ಹಾಗೂ ಹುಣ ಸೂರು ವಲಯ ಸೇರಿ ಒಟ್ಟಾರೆ 1,920 ಕಿ.ಮೀ. ಬೆಂಕಿರೇಖೆ ನಿರ್ಮಿಸಲಾಗಿದ್ದು, ಮುಖ್ಯರಸ್ತೆಯಲ್ಲಿ 30 ಮೀಟರ್‌, ಇತರೆಡೆಗಳಲ್ಲಿ 10 ಮೀಟರ್‌ ಅಗಲದ ಫೈರ್‌ಲೈನ್‌ ಅಳವಡಿಸಲಾಗಿದೆ. 270 ಫೈರ್‌ ವಾಚರ್‌ ನೇಮಕ: ಇಡೀ ಉದ್ಯಾನಕ್ಕೆ 270 ಮಂದಿ ಫೈರ್‌ವಾಚರ್ಗಳನ್ನಾಗಿ ಅರಣ್ಯದಂಚಿನ ಹಾಡಿಗಳ ಆದಿವಾಸಿಗಳನ್ನು ಮೂರು ತಿಂಗಳ ಕಾಲನೇಮಿಸಿಕೊಳ್ಳಲಾಗಿದೆ. ಇವರಿಗೆ ಇಲಾಖೆ ಮಾರ್ಗಸೂಚಿಯಂತೆ ನಿತ್ಯ ಮಧ್ಯಾಹ್ನದ ಊಟ ಹಾಗೂ 320 ರೂ. ದಿನಗೂಲಿ ನೀಡಲಾಗುತ್ತದೆ.

ಇವರು ಬೆಂಕಿ ಬೀಳದಂತೆ ಎಚ್ಚರಿಕೆ ವಹಿಸುವ ಕಾರ್ಯದಲ್ಲಿ ನಿರತರಾಗುವರು. ಪ್ರತಿ ವಲಯಕ್ಕೂ ತಲಾ ನಾಲ್ಕು ಸ್ಪ್ರೆàಯರ್‌, ಬ್ಲೋವರ್‌, ವೀಡ್‌ಕಟರ್‌, ವಾಟರ್‌ ಟ್ಯಾಂಕ್‌ ಇರುವ ವಾಹನ ನೀಡಲಾಗಿದ್ದು, ವೀರನಹೊಸಹಳ್ಳಿಯಲ್ಲಿ 5 ಸಾವಿರ ಲೀ. ಸಾಮರ್ಥ್ಯದ ನೀರಿನ ಟ್ಯಾಂಕ್‌ ಹಾಗೂ 6 ಮಂದಿ ಸಿಬ್ಬಂದಿ ಹೊಂದಿರುವ ಕ್ಷಿಪ್ರ ಕಾರ್ಯಪಡೆ ವಾಹನವನ್ನು ಸನ್ನದಟಛಿವಾಗಿರಿಸಲಾಗಿದೆ. ಹೆಚ್ಚುವರಿ ವಾಹನ ಸೌಲಭ್ಯ ಕಲ್ಪಿಸಲಾಗಿದೆ.

ಎಲ್ಲ ಸಿಬ್ಬಂದಿಗೂ ವಾಕಿಟಾಕಿ: ಎಲ್ಲಾ ಅರಣ್ಯ ಸಿಬ್ಬಂದಿಗೂ ವಾಕಿಟಾಕಿ ವಿತರಿಸಿದ್ದು, ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಣ್ಣ ಅವಘಡ ಸಂಭವಿಸಿದರೂ ತಕ್ಷಣವೇ ಕೇಂದ್ರಕ್ಕೆ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿ ಸಲಾಗಿದೆ. ಅಲ್ಲದೇ 30 ವಾಚ್‌ ಟವರ್‌ ಗಳ ಮೂಲಕ ನಿಗಾವಹಿಸಲಾಗುತ್ತಿದೆ. ಮುನ್ನೆಚ್ಚರಿಕೆ ಯಾಗಿ ನಾಗರಹೊಳೆ, ವೀರನಹೊಸ ಹಳ್ಳಿ, ಅಂತರಸಂತೆ ವಲಯಗಳಲ್ಲಿ ಅಗ್ನಿಶಾಮಕ ವಾಹನ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಮಾನವನ ಅತಿಕ್ರಮಣ ಪ್ರವೇಶ ತಡೆಯಲು ಪ್ರಥಮ ಬಾರಿಗೆ ಕಾಡಂಚಿನಲ್ಲಿ ಪ್ರತಿ ಮೂರು ಕಿ.ಮೀ.ಗೊಬ್ಬರಂತೆ ಫೈರ್‌ ವಾಚರ್‌ ನೇಮಿಸಲಾಗಿದೆ.

2 ಕೋಟಿ ವೆಚ್ಚ: ಉದ್ಯಾನದ ಬೆಂಕಿ ತಡೆ ನಿರ್ವಹಣೆಗಾಗಿ ಒಟ್ಟಾರೆ ಎರಡು ಕೋಟಿ ರೂ. ವೆಚ್ಚ ತಗುಲಲಿದ್ದು, ಬೆಂಕಿ ರೇಖೆ ನಿರ್ಮಾಣ, ಫೈರ್‌ ವಾಚರ್‌ಗಳ ಸಂಬಳ, ಊಟ, ವಾಹನ ಬಾಡಿಗೆ, ಪರಿಕರಗಳ ಖರೀದಿ ಸೇರಿ ಒಟ್ಟು 2 ಕೋಟಿ ರೂ.
ಖರ್ಚಾಗಲಿದೆ.

Advertisement

ಫೈರ್‌ಲೈನ್‌ ನಿರ್ಮಾಣ ಹೇಗೆ?
ಸುಮಾರು 643 ಚ.ಕಿ.ಮೀ. ವಿಸ್ತೀರ್ಣದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನ ಅರಣ್ಯದೊಳಗೆ ಈ ಹಿಂದೆ ನಿರ್ಮಿಸಿಕೊಂಡಿದ್ದ ಮಾರ್ಗಗಳಲ್ಲಿ ಮೊದಲು ಬೆಳೆದಿರುವ ಲ್ಯಾಂಟಾನಾ, ಗಿಡಗಂಟಿಗಳನ್ನು ತೆರವುಗೊಳಿಸಿ, ಒಂದೆಡೆ ರಾಶಿಹಾಕಿ ಸುಡಲಾಗುತ್ತದೆ. ಬಳಿಕ ಮುಖ್ಯರಸ್ತೆಯಲ್ಲಿ 30 ಮೀಟರ್‌, ಇತರೆಡೆಗಳಲ್ಲಿ 10 ಮೀಟರ್‌ ಅಗಲದ ಫೈರ್‌ಲೈನ್‌ ನಿರ್ಮಿಸಲಾಗುತ್ತದೆ. ಇದರಿಂದ ಬೆಂಕಿ ಬಿದ್ದ ವೇಳೆ ಶೀಘ್ರವಾಗಿ ಸಿಬ್ಬಂದಿ ಹಾಗೂ ನೀರಿನ ಟ್ಯಾಂಕ್‌ಗಳನ್ನು ತೆಗೆದುಕೊಂಡು ಹೋಗಲು ಸಹಕಾರಿಯಾಗಲಿದೆ.

ಅರಣ್ಯಕ್ಕೆ ಬೆಂಕಿ ಬೀಳುವುದನ್ನು ತಡೆಯಲು ಇಲಾಖೆ ವಿಶೇಷ ಶ್ರಮವಹಿಸಿ ಸಾಕಷ್ಟು ಮುನ್ನೆಚ್ಚರಿಕೆ
ವಹಿಸಿದೆ. ಇನ್ನು 3 ತಿಂಗಳು ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಣ್ಗಾವಲಿನಲ್ಲಿ ಕಾರ್ಯನಿರ್ವಹಿಸುತ್ತೇವೆ. ಬೆಂಕಿ ಬೀಳದಂತೆ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಪ್ರಶಸ್ತಿ ನೀಡಿ
ಪ್ರೋತ್ಸಾಹಿಸಲಾಗುತ್ತಿದೆ.

● ನಾರಾಯಣಸ್ವಾಮಿ, ಹುಲಿಯೋಜನೆ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next