Advertisement

ಬಾಕ್ಸಿಂಗ್ ಸ್ಪರ್ಧೆ ನೆಪ; 19 ವರ್ಷದ ಬಾಕ್ಸರ್ ಮೇಲೆ ಅತ್ಯಾಚಾರ- ಕೋಚ್ ಬಂಧನ

09:56 AM Mar 18, 2020 | Nagendra Trasi |

ನವದೆಹಲಿ: 19 ವರ್ಷದ ಬಾಕ್ಸರ್ ಮೇಲೆ ಕೋಚ್ ಅತ್ಯಾಚಾರ ಎಸಗಿ, ಸತತ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕೋಲ್ಕತಾದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಕೋಚ್ ಮೊದಲ ಬಾರಿ ದೆಹಲಿಯಲ್ಲಿ ರೈಲಿನೊಳಗೆ ಹಾಗೂ ಎರಡನೇ ಬಾರಿ ವಸತಿಯಲ್ಲಿದ್ದಾಗ ಬಾಕ್ಸರ್ ಮೇಲೆ ಅತ್ಯಾಚಾರ ಎಸಗಿದ್ದ ಎಂದು ವರದಿ ತಿಳಿಸಿದೆ.

ಕೋಚ್ ಬಾಕ್ಸಿಂಗ್ ಅಕಾಡೆಮಿ ನಡೆಸುತ್ತಿದ್ದು, ಖಾಸಗಿ ಅಂತಾರಾಷ್ಟ್ರೀಯ ಬಾಕ್ಸಿಂಗ್ ಟೂರ್ನಮೆಂಟ್ ನಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಂದರ್ಭದಲ್ಲಿ ಈ ಕೃತ್ಯ ಎಸಗಿದ್ದು, ಕೋಚ್ ಇದೀಗ ಕಂಬಿ ಎಣಿಸುತ್ತಿರುವುದಾಗಿ ವರದಿ ವಿವರಿಸಿದೆ.

28 ವರ್ಷದ ಕೋಚ್ ಸಂದೀಪ್ ಮಲಿಕ್ ನನ್ನು ಬಂಧಿಸಲಾಗಿದೆ ಎಂದು ಡೆಪ್ಯುಟಿ ಪೊಲೀಸ್ ಕಮೀಷನರ್ ಹರೇಂದರ್ ಸಿಂಗ್ ತಿಳಿಸಿದ್ದಾರೆ. ಸೋನೆಪತ್ ನಲ್ಲಿ ಈತ ಸಂದೀಪ್ ಮಲಿಕ್ ಬಾಕ್ಸಿಂಗ್ ಕ್ಲಬ್ ನಡೆಸುತ್ತಿದ್ದ ಎಂದು ಸಿಂಗ್ ವಿವರಿಸಿದ್ದಾರೆ.

ಹರ್ಯಾಣದಲ್ಲಿ ನಡೆದ ರಾಷ್ಟ್ರೀಯ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪ್ರತಿನಿಧಿಸಲು ಆಗಮಿಸಿದ್ದ ವೇಳೆ ಮಲಿಕ್ ಫೆ.27ರಂದು ಬಾಕ್ಸರ್ ಮೇಲೆ ಅತ್ಯಾಚಾರ ಎಸಗಿದ್ದ. ನಂತರ ಫೆ.29ರಿಂದ ಮಾರ್ಚ್ 3ರವರೆಗೆ ನಡೆದ ಬೆಂಗಾಲ ಬಾಕ್ಸಿಂಗ್ ಕ್ಲಾಸಿಕ್ 2020ಯಲ್ಲಿ ಭಾಗವಹಿಸಲು ತೆರಳಿದ್ದ ವೇಳೆಯೂ ಕೋಚ್ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದಾಳೆ.

Advertisement

ಸತತವಾಗಿ ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಎಸಗುತ್ತಿದ್ದ ಕೋಚ್ ವಿರುದ್ಧ ಗುರುವಾರ ಬಾಕ್ಸರ್ ಸ್ಥಳೀಯ ಪೊಲೀಸರನ್ನು ಭೇಟಿಯಾಗಿ ದೂರು ನೀಡಿದ್ದಾರೆ. ಕೋಚ್ ವಿರುದ್ಧ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದ ಆರೋಪದಡಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬಂಧಿತ ಮಲಿಕ್ ಅತ್ಯಾಚಾರ ಎಸಗಿರುವುದನ್ನು ಒಪ್ಪಿಕೊಂಡಿರುವುದಾಗಿ ಡಿಸಿಪಿ ತಿಳಿಸಿದ್ದು, ಕೋಚ್ ಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next