Advertisement

ವಿಷ್ಣುವರ್ಧನ್‌ ಯಶಸ್ವಿ ಚಿತ್ರಕ್ಕೀಗ 19 ವರ್ಷ

09:46 AM Dec 04, 2019 | Suhan S |

ಯಜಮಾನ…’ ಕನ್ನಡ ಚಿತ್ರರಂಗದಲ್ಲಿ ಈ ಹೆಸರು ಕೇಳಿದಾಕ್ಷಣ, ನೆನಪಾಗೋದೇ ಡಾ.ವಿಷ್ಣುವರ್ಧನ್‌. ಹೌದು, “ಯಜಮಾನಕನ್ನಡ ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿ ಕಂಡ ಸಿನಿಮಾ. ಎಲ್ಲಾಸರಿ, ಈಗ ಯಾಕೆ ಈ ಚಿತ್ರದ ಸುದ್ದಿ ಎಂಬ ಪ್ರಶ್ನೆ ಎದುರಾಗಬಹುದು. ಚಿತ್ರ ಬಿಡುಗಡೆಯಾಗಿ 19 ವರ್ಷಗಳು ಕಳೆದಿವೆ.

Advertisement

ಇವತ್ತಿಗೂ ಈ ಚಿತ್ರ ಜನಮಾನಸದಲ್ಲಿದೆ ಅಂದರೆ, ಅದಕ್ಕೆ ಕಾರಣ,ಚಿತ್ರದ ಕಥೆ ಮತ್ತು ಹಾಡುಗಳು. ಡಿಸೆಂಬರ್‌ 1, 2000 ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಎಲ್ಲೆಡೆಯಿಂದಲೂ ಭರ್ಜರಿ ಮೆಚ್ಚುಗೆ ಸಿಕ್ಕಿತ್ತು. ಈ ಚಿತ್ರದಲ್ಲಿ ವಿಷ್ಣುವರ್ಧನ್‌ ಅವರುದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು.ಆರ್‌. ಶೇಷಾದ್ರಿ ನಿರ್ದೇಶನದಲ್ಲಿ ಮೂಡಿಬಂದಿದ್ದ ಚಿತ್ರದಲ್ಲಿ ವಿಷ್ಣುವರ್ಧನ್‌ ಅವರ ಸಹೋದರರಾಗಿ ಶಶಿಕುಮಾರ್‌, ಅಭಿಜಿತ್‌ ಕಾಣಿಸಿಕೊಂಡಿದ್ದರು. ಪ್ರೇಮಾ ನಾಯಕಿಯಾಗಿ ದ್ದರು. ಈ ಚಿತ್ರ ನೋಡಿದ ಅದೆಷ್ಟೋ ಜನ, ಸಹೋ ದರರ ಜೊತೆ ಪ್ರೀತಿಯಿಂದ ಬದುಕಬೇಕು ಎಂಬ ಬಗ್ಗೆ ಹೇಳಿಕೊಂಡಿದ್ದರು.

ಪಕ್ಕಾ ಕೌಟುಂಬಿಕ ಸಿನಿಮಾ ಆಗಿದ್ದ ಯಜಮಾನಆ ದಿನಗಳಲ್ಲೇ ಎಲ್ಲರ ಮನಸ್ಸನ್ನು ಗೆದ್ದಿತ್ತು. ಚಿತ್ರಕ್ಕೆ ಸಂಗೀತ ನೀಡಿದ್ದ ರಾಜೇಶ್‌ ರಾಮನಾಥ್‌ ಅವರ ಹಾಡುಗಳು ಇಂದಿಗೂ ಜನಪ್ರಿಯತೆ ಪಡೆದುಕೊಂಡಿವೆ. ಇದೇ ಯಜಮಾನಚಿತ್ರದ ಶೀರ್ಷಿಕೆಯ ಚಿತ್ರದಲ್ಲಿ ದರ್ಶನ್‌ ಕೂಡ ನಟಿಸಿದ್ದರು. ಆ ಚಿತ್ರ ಕೂಡ ಹೆಸರಿಗೆ ತಕ್ಕಂತೆಯೇ ಹೆಸರು ಮಾಡಿದ್ದಲ್ಲದೆ, ಅದೂ ಕೂಡ ಸಂದೇಶ ಇರುವಂತಹ ಚಿತ್ರವಾಗಿ ಬಿಡುಗಡೆಯಾಗಿತ್ತು. ಇಷ್ಟಾದರೂ, ದರ್ಶನ್‌ ಅವರು, ಕನ್ನಡ ಚಿತ್ರರಂಗಕ್ಕೆ ಒಬ್ಬರೇ ಯಜಮಾನರು. ಅದು ವಿಷ್ಣುವರ್ಧನ್‌ ಅವರು ಎಂದು ಹೇಳಿದ್ದರು. ವಿಷ್ಣುವರ್ಧನ್‌ ಅವರು ಇಂದುನಮ್ಮೊಂದಿಗಿಲ್ಲವಾದರೂ, ಅವರ ಚಿತ್ರಗಳ ಮೂಲಕ ಅಭಿಮಾನಿಗಳನ್ನು ಖುಷಿಪಡಿಸುತ್ತಿದ್ದಾರೆ. ಆ ಮೂಲಕ ಅವರು ಜೀವಂತವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next