ವಾಷಿಂಗ್ಟನ್: ಮದುವೆಯಾಗಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಾಗ ಅಗ್ನಿ ಅವಘಡದಲ್ಲಿ ವಧು ಮೃತಪಟ್ಟ ಘಟನೆ ಅಮೆರಿಕದ ವಿಸ್ಕಾನ್ಸಿನ್ ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಅಗ್ನಿ ಅವಘಡದಲ್ಲಿ 19 ವರ್ಷದ ಯುವತಿ ಪೈಜ್ ರಡ್ಡಿ ಮೃತ ದುರ್ದೈವಿ.
ಮೇ 23ರಂದು ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ರೀಡ್ಸ್‌ಬರ್ಗ್ ಮನೆಯ ಎರಡನೇ ಮಹಡಿಯಲ್ಲಿ ಯುವತಿ ಪೈಜ್ ರಡ್ಡಿ ನಿದ್ರಿಸುತ್ತಿದ್ದಳು.ಈ ವೇಳೆ ಮನೆಗೆ ಬೆಂಕಿ ಹತ್ತಿಕೊಂಡಿದ್ದು, ಹೊಗೆಯಿಂದಾಗಿ ಉಸಿರುಗಟ್ಟಿ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ವರದಿಗಳು ತಿಳಿಸಿವೆ.
ಮರುದಿನ ಬೆಳಗ್ಗೆಯೇ ಆಪ್ತರು, ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗುವವರಿದ್ದರು. ಘಟನೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ.
Related Articles
ಅಲ್ಲದೇ ಘಟನೆ ನಡೆದ ಸಂದರ್ಭ ಇನ್ನೂ ಮೂವರು ಮನೆಯಲ್ಲಿದ್ದು, ಅಗ್ನಿಶಾಮಕ ದಳ ಬರುವಷ್ಟರಲ್ಲಿ ಬೆಂಕಿಯಿಂದ ಪಾರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.