ಹೈದರಾಬಾದ್: ಆಘಾತಕಾರಿ ವಿದ್ಯಮಾನವೊಂದರಲ್ಲಿ ಹೈದರಾಬಾದ್‌ನ ಚಿತ್ರಮಂದಿರವೊಂದರಲ್ಲಿ 19 ರ ಹರೆಯದ ತರುಣಿಯ ಮೇಲೆ ಅತ್ಯಾಚಾರ ನಡೆಸಿದ ಹೇಯ ಘಟನೆ ಸೋಮವಾರ ರಾತ್ರಿ ನಡೆದಿರುವುದು ಬೆಳಕಿಗೆ ಬಂದಿದ್ದು, ಈಗಾಗಲೇ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿ 23 ರ ಹರೆಯದ ಕೆ.ಭಿಕ್ಷಾಪತಿ ಎಂದು ತಿಳಿದು ಬಂದಿದೆ. ಆರೋಪಿ ಮತ್ತು ಸಂತ್ರಸ್ಥೆ ಫೇಸ್‌ಬುಕ್ ಮೂಲಕ ಪರಿಚಿತರಾಗಿ ಸ್ನೇಹ ಬೆಳೆದು ಇಬ್ಬರೂ ಭೇಟಿಯಾಗಲು ಮುಂದಾಗಿ ಮಾಲ್‌ವೊಂದರಲ್ಲಿ ಸುತ್ತಾಡಿ ಬಳಿಕ ಚಿತ್ರ ಮಂದಿರಕ್ಕೆ ಬಂದಿದ್ದು ಈ ವೇಳೆ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಸಿಕಂದರಾಬಾದ್ ಮಾರ್ಕೆಟ್ ಪೊಲೀಸರು ಈ ಸಂಬಂಧ ತನಿಖೆ ಮುಂದುವರಿಸಿದ್ದು ಚಿತ್ರಮಂದಿರದ ಮಾಲೀಕನನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಸಿಬಂದಿಗಳನ್ನು ವಿಚಾರಣೆ ನಡೆಸಿದ್ದಾರೆ.
ಪದ್ಮಾವತ್ ಚಿತ್ರ ವೀಕ್ಷಣೆಗೆಂದು ತೆರಳಿದ್ದು, ಬಾಲ್ಕನಿಯಲ್ಲಿ ಪ್ರೇಕ್ಷಕರ ಕೊರತೆ ಇದ್ದ ಸಮಯವನ್ನು ದುರುಪಯೋಗ ಪಡಿಸಿಕೊಂಡು ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿದೆ.
2 ತಿಂಗಳ ಹಿಂದೆ ಮೀರತ್‌ನಲ್ಲೂ ಇದೇ ರೀತಿಯ ಘಟನೆ ನಡೆದಿದ್ದು 16 ವರ್ಷದ ಬಾಲಕಿಯನ್ನು ಚಿತ್ರಮಂದಿರದಲ್ಲಿ ಅತ್ಯಾಚಾರ ಗೈಯಲಾಗಿತ್ತು.