ಮಂಗಳೂರು: ಕುವೈಟ್‌ನಲ್ಲಿ ಸಂಕಷ್ಟಕ್ಕೀಡಾಗಿದ್ದ ಕರಾವಳಿ ಭಾಗದ 34 ಮಂದಿ ಯುವಕರ ಪೈಕಿ 19 ಮಂದಿ ಶುಕ್ರವಾರ ಬೆಳಗ್ಗೆ ತಾಯ್ನಾಡಿಗೆ ಮರಳಿದ್ದಾರೆ.
ಈ ಯುವಕರು ಬುಧವಾರ ರಾತ್ರಿ ಕುವೈಟ್‌ನಿಂದ ಹೊರಟಿದ್ದು, ಗುರುವಾರ ಮಧ್ಯಾಹ್ನ ಮುಂಬಯಿ ವಿಮಾನ ನಿಲ್ದಾಣ ತಲುಪಿದ್ದರು. ಅಲ್ಲಿಂದ ಬಸ್ ಮೂಲಕ ಮಂಗಳೂರಿಗೆ ಆಗಮಿಸಿದ್ದಾರೆ. ಅವರನ್ನು ನಗರದ ಪಂಪ್‌ವೆಲ್ ಬಳಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವಿಶಂಕರ ಮಿಜಾರು ಮತ್ತಿತರರು ಸ್ವಾಗತಿಸಿದರು.
ನಷೂದ್ (ಮಂಜೇಶ್ವರ), ವರುಣ್ (ಆಕಾಶ್ ಭವನ), ಕಲಂದರ್ ಶಫೀಕ್ (ಮೂಡುಬಿದಿರೆ), ನಷೂದ್ (ಕೊಪ್ಪ), ರಫೀಕ್ (ಕೊಪ್ಪ), ಯಕೂಬ್ ಮುಲ್ಲಾ(ಶಿರಸಿ), ಪಾಲಿóìಕ್ ಫೆರ್ನಾಂಡಿಸ್ (ಭಟ್ಕಳ), ಜಗದೀಶ್, ಆಶೀಕ್ (ಉಡುಪಿ), ಪಾರ್ಥಿಕ್ (ಉಡುಪಿ), ಮಹಮ್ಮದ್ ಹಸನ್ (ಕೊಲಾ°ಡು), ಮಹಮ್ಮದ್ ಇಸ್ಮಾಯಿಲ್ (ಕೊಲಾ°ಡು), ಅಬ್ದುಲ್ ಮಸೀದ್ (ಕಾರ್ಕಳ), ಮಹಮ್ಮದ್ ಸುಹೇಲ್ (ಉಳ್ಳಾಲ), ನೌಫಾಲ್ ಹುಸೈನ್ (ಉಳ್ಳಾಲ), ಮಹಮ್ಮದ್ ಶಕೀರ್ (ಉಳ್ಳಾಲ), ಅಬ್ದುಲ್ ಲತೀಫ್ (ತುಂಬೆ) ಫಯಾಝ್ (ಕುತ್ತಾರ್), ಅಬುಬಕ್ಕರ್ ಸಿದ್ದೀಕ್ (ಬಜಾಲ್) ತವರಿಗೆ ಬಂದಿಳಿದವರು.
ಸಂತ್ರಸ್ತರ ವಿಮಾನ ಟಿಕೆಟ್ ವೆಚ್ಚವನ್ನು ಶಾಸಕ ವೇದವ್ಯಾಸ ಕಾಮತ್ ಭರಿಸಿದ್ದರು. ಮುಂಬಯಿಯಿಂದ ಬಸ್ ವ್ಯವಸ್ಥೆಯನ್ನೂ ಮಾಡಿದ್ದರು.
ಈ ಸಂದರ್ಭ ಮಾತನಾಡಿದ ಸಂತ್ರಸ್ತ ಯುವಕರು, ಕುವೈಟ್‌ನಲ್ಲಿರುವ ವಿವಿಧ ಸಂಘಟನೆಗಳ ಮುಖಂಡರಾದ ಮೋಹನ್‌ದಾಸ್ ಕಾಮತ್, ರಾಜ್ ಭಂಡಾರಿ, ವಿಜಯ್ ಫೆರ್ನಾಂಡಿಸ್, ಅಹ್ಮದ್ ಬಾವ, ಮಾಧವ ನಾಯಕ್, ತುಳು ಕೂಟದವರು ಸಹಾಯ ಮಾಡಿದ್ದಾರೆ. ಇನ್ನೂ 11 ಮಂದಿ ಕುವೈಟ್‌ನಲ್ಲೇ ಸಂಕಷ್ಟದಲ್ಲಿದ್ದಾರೆ. ಅವರಲ್ಲಿ ಹಲವರಿಗೆ ಕಂಪೆನಿ ದಂಡ ಶುಲ್ಕ ಹಾಕಿದ್ದು, ಅದನ್ನು ಕಟ್ಟುವ ವ್ಯವಸ್ಥೆ ಆಗಬೇಕಿದೆ ಎಂದರು.