ಕಲಬುರಗಿ: ಇಲ್ಲಿನ ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ( ಡಿಸಿಸಿ) ಬ್ಯಾಂಕ್ 2021-22 ಆರ್ಥಿಕ ವರ್ಷದಲ್ಲಿ 19. 17 ಕೋ.ರೂ ಲಾಭ ಗಳಿಸಿದೆ ಎಂದು ಬ್ಯಾಂಕ್ ನ ಅಧ್ಯಕ್ಷರಾಗಿರುವ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ನ ಇತಿಹಾಸದಲ್ಲಿ ಮೊದಲ ಬಾರಿಗೆ 328 ಕೋ ರೂ ಠೇವಣಿ, 107 ಕೋ ರೂ ಷೇರು ಸಂಗ್ರಹ ಹೊಂದಿ ಒಟ್ಟಾರೆ 998 ಕೋ ರೂ ವ್ಯವಹಾರ ನಡೆಸಿದೆ ಎಂದರು.
1.48 ಲಕ್ಷ ರೈತರಿಗೆ 701 ಕೋ.ರೂ ಬಡ್ಡಿ ರಹಿತ ಬೆಳೆ ಸಾಲದೊಂದಿಗೆ ಒಟ್ಟಾರೆ 769 ಕೋ.ರೂ ಸಾಲ ನೀಡಲಾಗಿದೆ. ಹಿಂದಿನ. 52 ಕೋ. ರೂ ಹಾನಿಯನ್ನು ಸರಿದೂಗಿಸಿ ರೈತ ಸ್ನೇಹಿ, ಜನಸ್ನೇಹಿ ವ್ಯವಹಾರದೊಂದಿಗರ 19 ಕೋ.ರೂ ಲಾಭ ಹೊಂದಿದೆ ಎಂದು ತೇಲ್ಕೂರ ವಿವರಣೆ ನೀಡಿದರು.
ಸಾಲ ವಸೂಲಾತಿಗೆ ಕಠಿಣ ಕ್ರಮ: ಬ್ಯಾಂಕ್ ಸುಸ್ತಿ ಸಾಲ, ಮಧ್ಯಾಮವಧಿ ಸೇರಿ ಇತರ ವಿಧದ ಸಾಲ ವಸೂಲಾತಿಗೆ ಕಠಿಣ ಕ್ರಮ ಕೈಗೊಂಡಿದೆ. ವಸೂಲಾತಿ ಆಗದೇ ಇದ್ದ 260 ಕೋ.ರೂ ದಲ್ಲಿ 240 ಕೋ ರೂ. ಸಾಲ ವಸೂಲಿ ಮಾಡಲಾಗಿದೆ. ಆದರೆ ಇನ್ನೂ ವಸೂಲಾತಿಯಾಗದಿರುವ 40 ಕೋ.ರೂ ಮಧ್ಯಾಮವಧಿ ಸಾಲ, ಸ್ವ ಸಹಾಯ ಸಂಘಗಳ 3.75 ಕೋ.ರೂ, ಸರ್ಕಾರಿ ನೌಕರಿಂದ 1 ಕೋ ರೂ ಹಾಗೂ ಇತರೆ ರೂಪದ 21 ಕೋ.ರೂ ಸೇರಿ 64 ಕೋ.ರೂ ಸಾಲ ಬಡ್ಡಿ ಸಮೇತ ವಸೂಲಿ ಮಾಡಲಾಗುವುದು.ಇದರಲ್ಲಿ ಯಾರ ಮುಲಾಜು ಕಾಯುವುದಿಲ್ಲ. ಈ ಎಲ್ಲ ಸಾಲ ವಸೂಲಾತಿಯಾದರೆ ಮತ್ತೆ ಹೊಸ ರೈತರಿಗೆ ಸಾಲ ನೀಡಲು ಸುಲಭವಾಗುತ್ತದೆ. ಸಾಲ ಬಯಸಿ ಬರುವ ಎಲ್ಲ ಹೊಸ ರೈತರಿಗೆ ಬೆಳೆ ಸಾಲ ನೀಡಲಾಗುತ್ತಿದೆ. ಒಟ್ಟಾರೆ 2022-23ನೇ ಸಾಲಿನಲ್ಲಿ 2000 ಕೋ.ರೂ ವ್ಯವಹಾರ ನಡೆಸಲು ಉದ್ದೇಶಿಸಲಾಗಿದೆ ಎಂದು ಪ್ರಕಟಿಸಿದರು.
700 ರೈತರು ಹಾಗೂ ಇತರ ಮೇಲೆ ಸಾಲ ವಸೂಲಾತಿಗೆ ಮೊಕದ್ದಮೆ ಹೂಡಲಾಗಿದೆ.ಸಾಲ ವಸೂಲಾತಿ ಯಾದಲ್ಲಿ ಮಾತ್ರ ನಬಾಡಾ್೯ , ಅಫೆಕ್ಸ್ ಬ್ಯಾಂಕ್ ಸಾಲ ನೀಡಲು ಮುಂದೆ ಬರುತ್ತದೆ. ಪ್ರಸಕ್ತವಾಗಿ ನಬಾರ್ಡ 500 ಕೋ.ರೂ ಹಾಗೂ ಅಪೆಕ್ಸ್ ಬ್ಯಾಂಕ್ 600 ಕೋ.ರೂ ಸಾಲ ನೀಡಬಹುದೆಂಬ ನಿರೀಕ್ಷೆ ಹೊಂದಲಾಗಿದೆ. ಒಟ್ಟಾರೆ ಬ್ಯಾಂಕ್ ಉತ್ತಮ ವ್ಯವಹಾರದಿಂದ c- ಇದ್ದ ಬ್ಯಾಂಕ್ c + ಗೆ ಬಂದಿದೆ ಎಂದರು.
ಬ್ಯಾಂಕ್ ನ ಉಪಾಧ್ಯಕ್ಷ ಸುರೇಶ ಸಜ್ಜನ್, ನಿರ್ದೇಶಕರುಗಳಾದ ಶರಣ ಬಸಪ್ಪ ಪಾಟೀಲ್ ಅಷ್ಢಗಾ, ಅಶೋಕ ಸಾವಳೇಶ್ವರ, ಕಲ್ಯಾಣ ರಾವ ಪಾಟೀಲ್ ಮಳಖೇಡ, ಚಂದ್ರಶೇಖರ್ ತಳ್ಳಳ್ಳಿ, ಉತ್ತಮ ಬಜಾಜ ಸೇರಿದಂತೆ ಮುಂತಾದವರಿದ್ದರು.