Advertisement

ಜಮ್ಮು : ಅನಧಿಕೃತ ಅನಾಥಾಲಯದ ಮೇಲೆ ದಾಳಿ; 19 ಮಕ್ಕಳ ರಕ್ಷಣೆ

04:28 PM Sep 08, 2018 | Team Udayavani |

ಜಮ್ಮು : ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ ಅನಧಿಕೃತ ಅನಾಥಾಲಯದ ಮೇಲೆ ಪೊಲೀಸರು ದಾಳಿ ನಡೆಸಿ ಎಂಟು ಬಾಲಕಿಯರ ಸಹಿತ ಒಟ್ಟು 19 ಮಕ್ಕಳನ್ನು ರಕ್ಷಿಸಲಾಯಿತೆಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಅನಾಥಾಲಯದ ಕೆಲ ಮಕ್ಕಳು “ನಮಗೆ ಇಲ್ಲಿ ಹೊಡೆದು ಬಡಿದು ಚಿತ್ರ ಹಿಂಸೆ ನೀಡಲಾಗುತ್ತಿದೆ’ ಎಂದು ದೂರಿಕೊಂಡದ್ದನ್ನು ಅನುಸರಿಸಿ ಪೊಲೀಸ್‌ ಮತ್ತು ಪೌರಾಡಳಿತೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದರು 19 ಮಕ್ಕಳನ್ನು ಪಾರುಗೊಳಿಸಿದರು. 

ನೋಂದಾವಣೆಗೊಂಡಿರದ ಈ ಅನಾಥಾಲಯವನ್ನು ನಡೆಸುತ್ತಿದ್ದ  ಕೇರಳದ ಪಾಸ್ಟರ್‌ ಅಂತೋನಿ ಥಾಮಸ್‌ ನನ್ನು ಪೊಲೀಸರು ಬಂಧಿಸಿ ಆತನ ವಿರುದ್ಧ ಪೋಕ್‌ಸೋ ಕಾಯಿದೆಯಡಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next