Advertisement

19 ಏಜಿನ ಆವೇಗಕ್ಕೆ ಸೆನ್ಸಾರ್ ಮಂಡಳಿಯ ಮೆಚ್ಚುಗೆ!

09:54 AM Nov 10, 2019 | Team Udayavani |

ಕಳೆದ ಒಂದಷ್ಟು ದಿನಗಳಿಂದ ಹೊಸಬರೇ ಸೇರಿ ರೂಪಿಸಿರುವ 19 ಏಜ್ ಈಸ್ ನಾನ್‌ಸೆನ್ಸ್ ಚಿತ್ರ ಭಾರೀ ಸೌಂಡು ಮಾಡುತ್ತಿದೆ. ಹೇಳಿಕೇಳಿ ಇದೀಗ ಕನ್ನಡ ಚಿತ್ರರಂಗ ಹೊಸ ಅಲೆಯ ಚಿತ್ರಗಳಿಂದ ಸಮೃದ್ಧಗೊಂಡಿದೆ. ಈ ಘಳಿಗೆಯಲ್ಲಿ ಹೊಸಾ ತಂಡವೊಂದು ಎಂಟ್ರಿ ಕೊಟ್ಟಿತೆಂದರೆ ಪ್ರೇಕ್ಷಕರ ಚಿತ್ತ ತಾನೇ ತಾನಾಗಿ ಅದರತ್ತ ನೆಟ್ಟುಕೊಳ್ಳುತ್ತದೆ. 19 ಏಜ್ ಈಸ್ ನಾನ್‌ಸೆನ್ಸ್ ಚಿತ್ರದತ್ತ ಪ್ರೇಕ್ಷಕರು ಹೊರಳಿ ನೋಡುತ್ತಿರೋದೂ ಕೂಡಾ ಈ ಕಾರಣದಿಂದಲೇ. ಹೊಸಬರೇ ಸೇರಿ ರೂಪಿಸಿರೋ ಈ ಸಿನಿಮಾ ಸೆನ್ಸಾರ್ ಅನ್ನೂ ಇದೀಗ ಮುಗಿಸಿಕೊಂಡಿದೆ. ವಿಶೇಷವೆಂದರೆ ಈ ಚಿತ್ರ ಖುದ್ದು ಸೆನ್ಸಾರ್ ಅಧಿಕಾರಿಗಳಿಂದಲೇ ಮೆಚ್ಚುಗೆ ಪಡೆದುಕೊಂಡಿದೆ.

Advertisement

ಸೆನ್ಸಾರ್ ಅಧಿಕಾರಿಗಳು ತಿಂಗಳೊಂದಕ್ಕೆ ಹತ್ತಾರು ಚಿತ್ರಗಳನ್ನು ನೋಡುತ್ತಾರೆ. ಆದರೆ ಅವರ ಕಡೆಯಿಂದಲೇ ಮೆಚ್ಚುಗೆ ಪಡೆದುಕೊಳ್ಳೋ ಸಿನಿಮಾಗಳು ವಿರಳ. 19 ಏಜ್ ಈಸ್ ನಾನ್‌ಸೆನ್ಸ್ ಚಿತ್ರ ಅಂಥಾ ವಿರಳ ಸಿನಿಮಾಗಳ ಸಾಲಿನಲ್ಲಿ ಸೇರಿಕೊಂಡಿದೆ. ಈ ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ ಕೊಟ್ಟಿರೋ ಸೆನ್ಸಾರ್ ಮಂಡಳಿ ಅಧಿಕಾರಿಗಳು ಚಿತ್ರತಂಡದ ಶ್ರಮವನ್ನು, ಕ್ರಿಯೇಟಿವಿಟಿಗಳನ್ನು ಮೆಚ್ಚಿಕೊಂಡಿದ್ದಾರೆ. ಈ ಉತ್ತೇಜಕ ಮಾತುಗಳಿಂದ ಇಡೀ ಚಿತ್ರತಂಡ ಖುಷಿಗೊಂಡಿದೆ. ಈ ಮೂಲಕವೇ ಹೊಸಬರ ತಂಡಕ್ಕೆ ಗೆಲುವು ಸಿಗೋದು ಗ್ಯಾರೆಂಟಿ ಎಂಬಂಥಾ ನಂಬಿಕೆಯೂ ಹುಟ್ಟಿಕೊಂಡಿದೆ.

ಇದು ಲೋಕೇಶ್ ನಿರ್ಮಾಣದಲ್ಲಿ ಮೂಡಿ ಬಂದಿರೋ ಚೊಚ್ಚಲ ಚಿತ್ರ. ಇಲ್ಲಿ ಲೋಕೇಶ್ ಅವರ ಪುತ್ರ ಮನುಷ್ ನಾಯಕನಾಗಿ ನಟಿಸಿದ್ದಾನೆ. ಈ ಸಿನಿಮಾದ ಕಥೆ ಹತ್ತೊಂಬತ್ತರ ಹರೆಯದ ಸುತ್ತ ಗಿರಕಿ ಹೊಡೆಯುವಂಥಾದ್ದು. ಆದ್ದರಿಂದಲೇ ಅದೇ ವಯೋಮಾನದ ಮನುಷ್‌ನನ್ನು ನಾಯಕನನ್ನಾಗಿಸಲಾಗಿದೆ. ಹಾಗೆಂದು ಇದೀಗ ತಾನೇ ಬಿಕಾಂ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರೋ ಮನುಷ್ ಏಕಾಏಕಿ ನಾಯಕನಾಗಿಲ್ಲ. ನಿರ್ಮಾಪಕ ಲೋಕೇಶ್ ಆತನಿಗೆ ಸೂಕ್ತವಾದ ತರಬೇತಿ ಕೊಡಿಸಿದ್ದಾರೆ. ಈ ಬಲದಿಂದಲೇ ಮನುಷ್ ಚೆಂದಗೆ ನಟಿಸಿದ್ದಾನಂತೆ. ಇದೆಲ್ಲ ಅಂಶಗಳು ಸೇರಿಕೊಂಡು ಸೆನ್ಸಾರ್ ಮಂಡಳಿಯಿಂದ ಈ ಸಿನಿಮಾಗೆ ಶಹಬ್ಬಾಸ್‌ಗಿರಿ ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next