Advertisement

11 ವಿಧಾನಸಭಾ ಕ್ಷೇತ್ರದಲ್ಲೂ ಕನ್ನಡ ಭವನ ನಿರ್ಮಾಣ

12:50 PM Feb 24, 2021 | Team Udayavani |

ಎಚ್‌.ಡಿ.ಕೋಟೆ (ಬೆಟ್ಟದಬೀಡು ಶ್ರೀಸಿದ್ದಶೆಟ್ಟರ ವೇದಿಕೆ): ಕನ್ನಡದ ಉಳಿವು ಹಾಗೂ ಬೆಳವಣಿಗೆಗೆ ನಾನು ಹಾಗೂ ನಮ್ಮ ಸರ್ಕಾರ ಬದ್ಧವಿದೆ. ಈ ನಿಟ್ಟಿನಲ್ಲಿ ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲೂ ಸಹ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ಗೆ ಸ್ವಂತ ನಿವೇ ಶನ, ಕಟ್ಟಡ ಕೊಡಿಸುವುದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌ ಟಿ ಸೋಮಶೇಖರ್‌ ಭರವಸೆ ನೀಡಿದರು.

Advertisement

ಪಟ್ಟಣದಲ್ಲಿ ನಡೆಯುತ್ತಿರುವ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ 11 ವಿಧಾನಸಭಾ ಕ್ಷೇತ್ರದಲ್ಲೂ ಸ್ವಂತ ಕಟ್ಟಡವನ್ನು ಕೊಡಬೇಕೆಂದು ಪ್ರಸ್ತಾವನೆ ಇಟ್ಟಿದ್ದಾರೆ. ಎಚ್‌.ಡಿ.ಕೋಟೆ ಪಟ್ಟಣದ ಟಿಎಪಿಸಿಎಂಎಸ್‌ ಬಳಿ 30×40 ಅಡಿ ವಿಸ್ತೀರ್ಣದ ನಿವೇಶನ ಗುರುತಿಸಿದ್ದು, ಈ ಜಾಗದಲ್ಲಿ ತಾಲೂಕು ಕೇಂದ್ರ ಸ್ಥಾನದಲ್ಲಿ ಕನ್ನಡ ಸಾಹಿತ್ಯ ಭವನ ಆರಂಭಿಸಲು ಶಾಸಕ ಅನಿಲ್‌ ಚಿಕ್ಕಮಾದು ಚರ್ಚಿಸಿದ್ದು, ಮುಖ್ಯಮಂತ್ರಿ ಜೊತೆ ಸಮಾಲೋಚಿಸಿ ಜಾಗ ಮಂಜೂರು ಮಾಡಲಾಗುವುದು ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಆಗಮಿಸಿರುವುದು ನನಗೆ ಹೆಮ್ಮೆಯ ಹಾಗೂ ಸಂತಸದ ವಿಷಯ. ಕನ್ನಡ ಉಳಿವಿಗೆ ನಾವೆಲ್ಲರೂ ಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದರು. ಸಮ್ಮೇಳನದ ಅಧ್ಯಕ್ಷರಾದ ಪ್ರೊ.ಎನ್‌.ಎಸ್‌.ತಾರಾನಾಥ್‌ ಅವರ ಬಗ್ಗೆ ಹೇಳಬೇಕೆಂದರೆ, ಅವರು ನಾಡಿನ ಹಿರಿಯ ವಿದ್ವಾಂಸರಾಗಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಬೇಕು ಎಂಬ ಕೂಗಿಗೆ ಅವರೂ ದನಿಯಾಗಿದ್ದರು. ಕೊನೆಗೆ ಕನ್ನಡ ಶಾಸ್ತ್ರೀಯ ಭಾಷೆಯಾಗಲು ಇರುವ ಅರ್ಹತೆಯನ್ನು ತಿಳಿಸುವ ಸಮಗ್ರ ವರದಿ ಯನ್ನು ಸಿದ್ಧಪಡಿಸಲು ಆಗ ರಾಜ್ಯ ಸರ್ಕಾರ ರಚಿಸಿದ್ದ ಸಮಿತಿಯಲ್ಲಿ ಇವರೂ ಸಹ ಇದ್ದರು. ಕನ್ನಡದ ಎಲ್ಲ ಸಾಹಿತಿಗಳು, ಕವಿಗಳ ಹೋರಾಟದ ಫ‌ಲ ವಾಗಿ ಕೊನೆಗೂ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆಯಿತು. ಹೀಗೆ ಕನ್ನಡ ಎಂಬ ವಿಷಯ ಬಂದಾಗಎಲ್ಲರೂ ಒಗ್ಗಟ್ಟಾಗುವ ಗುಣ ತಾನಾ ಗಿಯೇ ಬರುತ್ತದೆ ಎಂದು ತಿಳಿಸಿದರು.

ಎಚ್‌. ಡಿ.ಕೋಟೆ ತಾಲೂಕು ಶೇ.60ರಷ್ಟು ಅರಣ್ಯ ದಿಂದ ಆವೃತ್ತ ವಾಗಿದೆ. ಕಬಿನಿ ಸೇರಿದಂತೆ ನಾಲ್ಕು ಜಲಾಶಯಗಳಿವೆ. ಅರಣ್ಯ, ಆದಿವಾಸಿಗರ ನೆಲೆಯ ತವರೂರಿದು. ಆನೆಗಳ ಖೆಡ್ಡಕ್ಕೆ ಹೆಸರಾದತಾಲೂಕು ಹಿಂದುಳಿದಿರುವುದು ವಿಷಾದ ನೀಯ. ತಾಲೂಕಿನ ಅಭಿವೃದ್ಧಿಗೆ ಶಾಸಕರೊಡ ಗೂಡಿ ಶ್ರಮಿಸುವ ಭರವಸೆ ನೀಡಿದರು.

ಜಿಪಂ ಅಧ್ಯಕ್ಷೆ ಪರಿಮಳಾ, ತಾಪಂ ಅಧ್ಯಕ್ಷೆ ವಿಜಯ ಲಕ್ಷ್ಮೀ, ಉಪಾಧ್ಯಕ್ಷೆ ಸರೋಜಿನಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ, ಸರಗೂರಿನ ಭಾರತಿ, ತಾಯಮ್ಮ,ಕಸಾಪ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ, ತಾಲೂಕು ಅಧ್ಯಕ್ಷ ಕನ್ನಡ ಪ್ರಮೋದ, ಕರ್ನಾಟಕ ದಲಿತ ಸಾಹಿತ್ಯಅಕಾಡೆಮಿ ಅಧ್ಯಕ್ಷ ಡಾ. ವೆಂಕಟೇಶ್‌, ವಿಠಲ್‌ ಮೂರ್ತಿತಾಯೂರು, ಜಿಪಂ ಸದಸ್ಯರಾದ ಕೃಷ್ಣ, ವೆಂಕಟಸ್ವಾಮಿ,ಎಂ.ಪಿ.ನಾಗರಾಜು, ಮಹದೇವಮ್ಮ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಿಕಪೂರ್ವ ಅಧ್ಯಕ್ಷ ಚಂದ್ರಶೇಖರ್‌, ಕೆ.ಶಿವರಾಮ್‌, ಪುರಸಭಾ ಅಧ್ಯಕ್ಷೆ ಸರೋ ಜಮ್ಮ, ಉಪಾಧ್ಯಕ್ಷೆ ಗೀತಾಗಿರೀಗೌಡ, ಗೋವಿಂದ ರಾಜು, ಸೋಮಶೇಖರ್‌ ಸೇರಿದಂತೆ ತಾಪಂ ಹಾಗೂ ಪುರಸಭಾ ಸದಸ್ಯರು ಉಪಸ್ಥಿತರಿದ್ದರು.

Advertisement

ಹಾದಿಬೀದಿಯಲ್ಲಿ  ಮೀಸಲಾತಿ ಚರ್ಚೆ: ಸಂಸದ :

ರಾಜ್ಯಾದ್ಯಂತ ಮೀಸಲು ವಿವಾದವಿದ್ದು ಭುಗಿಲೆದ್ದಿದ್ದು, ಕನಿಷ್ಠ ಜ್ಞಾನವಿಲ್ಲದೆ ಹಾದಿ ಬೀದಿಯಲ್ಲಿ ಮೀಸಲಾತಿಯ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದು ಸಂಸದ ಶ್ರೀನಿ ವಾಸಪ್ರಸಾದ್‌ ಬೇಸರ ವ್ಯಕ್ತಪಡಿಸಿದರು.

18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇ ಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೀಸಲು ವಿಷಯ ದೊಡ್ಡ ಸಮಸ್ಯೆಆಗಿದೆ. ರಾಜಕಾರಣಿಗಳು ಯಾರು ಬಂದು ಕೇಳಿದರು ಮೀಸಲು ನೀಡುವ ಭರವಸೆ ನೀಡುತ್ತಿದ್ದಾರೆ. ಸುಪ್ರೀಂ ಕೋರ್ಟ್‌ ಏನು ನಿರ್ಧಾರ ತೆಗೆದುಕೊಂಡಿದೆ? ಕೇಂದ್ರದ ಅಧಿಕಾರವೇನು? ರಾಜ್ಯ ಸರ್ಕಾರ ಏನು ಮಾಡಬೇಕೆಂದು ಯಾರು ಯೋಚಿಸುತ್ತಿಲ್ಲ ಎಂದು ಹೇಳಿದರು.

ನಮ್ಮ ದೇಶದಲ್ಲಿ ಸಂವಿಧಾನ ಇದೆ. ಮೀಸಲಾತಿ ವಿಚಾರದಲ್ಲಿ ಕೇಂದ್ರ ಸರ್ಕಾ ರಕ್ಕೆ ಪರಮಾಧಿಕಾರ ಇದೆ. ಎಲ್ಲೋ ಕೂತು ಶಕ್ತಿ ಪ್ರದರ್ಶನ ಮಾಡುವುದರಿಂದ ಮೀಸಲು ಪಡೆಯಲು ಸಾಧ್ಯವಿಲ್ಲ. ಮೀಸಲು ಕೊಡಬೇಕಾದರೆ ರಾಜ್ಯ ಸರ್ಕಾರ ಸಮಿತಿ ರಚಿಸಿ ವರದಿ ನೀಡ ಬೇಕು. ಕೇಂದ್ರಸರ್ಕಾರ ಅದನ್ನು ಅಧ್ಯ ಯನ ಮಾಡಬೇಕು. ನಂತರ ಸಂಸತ್‌ನಲ್ಲಿ ಚರ್ಚೆಯಾಗಿ ಅನುಮೋದನೆ ಪಡೆಯ ಬೇಕು. ಸಿಕ್ಕಸಿಕ್ಕವರೆಲ್ಲಾ ಮೀಸಲು ಕೇಳಿದರೆ ಕೊಡಲು ಬರುವುದಿಲ್ಲ ಎಂದರು.

ಸ್ವಾಭಿಮಾನಿಗಳಾಗಬೇಕು: ಎರಡು ಮೂರು ಸಾವಿರ ವರ್ಷಗಳ ಹಿಂದೆ. ಕನ್ನ ಡಕ್ಕೆ ಭಾಷೆ, ಲಿಪಿಇತ್ತು. ಅದು ಆಡು ಭಾಷೆಯಾಗಿತ್ತು. ಅದಕ್ಕಾಗಿಶಾಸ್ತ್ರೀಯ ಸ್ಥಾನಮಾನ ನೀಡಬೇಕು ಎಂಬ ಹೋರಾಟ ಬಹಳ ಹಿಂದಿನಿಂದಲೂ ನಡೆಯುತ್ತಿತ್ತು. ಆದರೆ, ತಮಿಳಿಗರು ದುರಾಭಿಮಾನಿಗಳು ಒಂದು ಭಾಷೆಗೆ ಸ್ಥಾನಮಾನ ಕೊಟ್ಟ ನಂತರ 5 ವರ್ಷ ಮತ್ತೂಂದು ಭಾಷೆಗೆ ಸ್ಥಾನಮಾನ ನೀಡುವಂತಿಲ್ಲ ಎಂಬ ಷರತ್ತನ್ನು ವಿಧಿಸಿದರು. ಆದರೂ ಸತತ ಹೋರಾಟಗಳಿಂದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆಯಿತು. ನಮ್ಮ ಕನ್ನಡಿಗರು ನಿರಾಭಿಮಾನಿ ಅಥವಾ ದುರಾಭಿಮಾನಿಗಳಾಗದೆ ಸ್ವಾಭಿಮಾನಿ ಗಳಾಗಬೇಕು ಎಂದರು.

ಪ್ರಸ್ತುತ ಸಮ್ಮೇಳನದಲ್ಲಿ ಹಲವು ನಿರ್ಧಾರ ಗಳನ್ನು ಕೈಗೊಳ್ಳುತ್ತೇವೆ. ಪುಂಕಾ ನುಪುಂಕವಾಗಿಮಾತನಾಡುತ್ತೇವೆ. ಆದರೆ ಸಮ್ಮೇಳನ ಮುಗಿದ ನಂತರ ಅವೆಲ್ಲವೂ ಅಲ್ಲಿಗೇ ಕೈಬಿಡುತ್ತಿದ್ದೇವೆ. ಇನ್ನು ಮುಂದೆ ಹಾಗೆ ಆಗಬಾರದು. ಸಮ್ಮೇಳನಗಳಲ್ಲಿಕೈಗೊಂಡ ನಿರ್ಧಾರಗಳು ಕಾರ್ಯ ರೂಪಕ್ಕೆ ಬರಬೇಕು ಎಂದರು.

ಶಾಸ್ತ್ರೀಯ ಅಧ್ಯಯನ ಕೇಂದ್ರಕ್ಕೆಸ್ವಾಯತ್ತತೆ ಅಗತ್ಯ: ಸಮ್ಮೇಳನಾಧ್ಯಕ್ಷ

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ವಿದ್ವತ್ತಿನ ಚಟುವಟಿಕೆಗಳಿಗಾಗಿ ಮೈಸೂರಿನಲ್ಲಿರುವಕೇಂದ್ರವಾಗಿದ್ದು, ಈ ವಿಷಯದಲ್ಲಿ ರಾಜ್ಯ ಸರ್ಕಾರಮತ್ತು ಅದರ ಸಚಿವರು ಸಂಬಂಧಿಸಿದವರೊಡನೆ ವ್ಯವಹರಿಸಿ ಕೇಂದ್ರಕ್ಕೆ ಸ್ವಾಯತ್ತತೆ, ಸ್ವತಂತ್ರತೆ, ಪ್ರತ್ಯೇಕಅಸ್ತಿತ್ವಗಳನ್ನು ಉಳಿಸಿಕೊಡಬೇಕು ಎಂದು 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಪ್ರೊ. ಎನ್‌.ಎಸ್‌.ತಾರಾನಾಥ ಒತ್ತಾಯಿಸಿದ್ದಾರೆ.

ಈ ವಿಷಯದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು

ಕೂಡ ತನ್ನ ಬೆಂಬಲ ದನಿ ನೀಡಬೇಕು. ಸಾಹಿತಿಗಳಾದ ಪ್ರೊ.ದೇಜಗೌ, ಪ್ರೊ.ಎಂ.ಚಿದಾನಂದಮೂರ್ತಿ ಮುಂತಾದ ಹಿರಿಯರ ಹೋರಾಟ, ಉಪವಾಸಸತ್ಯಾಗ್ರಹ, ನಿರಂತರ ಪ್ರಯತ್ನಗಳಿಂದಾಗಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆಯಿತು. ಮೈಸೂರಿನಲ್ಲಿ ಅದರ ಅತ್ಯುನ್ನತ ಅಧ್ಯಯನ ಕೇಂದ್ರ ಆರಂಭವಾಗಿ ಹಳಗನ್ನಡ, ಶಾಸನವಿಚಾರ,ಸಂಶೋಧನೆ ಕುರಿತಂತೆ ಕೆಲಸಗಳು ಆಗುತ್ತಿವೆ. ಅದರಸ್ವಾಯತ್ತತೆಗಾಗಿ ಸಕಲ ಸಿದ್ಧತೆಗಳೂ ಜರುಗಿವೆ. ಆದರೆ,ಈಚೆಗ ಕೇಂದ್ರ ಶಿಕ್ಷಣ ಇಲಾಖೆ ಭಾರತೀಯ ಭಾಷಾಸಂಸ್ಥಾನವನ್ನು ಭಾರತೀಯ ಭಾಷಾ ವಿಶ್ವವಿದ್ಯಾಲಯ ವಾಗಿ ಪರಿವರ್ತಿಸಿ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಅದರಲ್ಲಿ ವಿಲೀನಗೊಳಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾ ದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಧ್ಯಯನ ಕೇಂದ್ರದ ಸ್ವಾಯತ್ತತೆ, ಹಳಗನ್ನಡ ಅಧ್ಯಯನ ಹಾಗೂ ಅದರ ಸಂಶೋಧನ ಚಟುವಟಿಕೆಗಳಿಗೆ ಧಕ್ಕೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಮೈಸೂರು ಕೊಡಗೆ: ಕನ್ನಡ ಭಾಷೆ- ಸಾಹಿತ್ಯಗಳಿಗೆ ಮೈಸೂರು ಕೊಡಗೆ ಅಪಾರ. ನಮ್ಮ ಸಾಹಿತ್ಯ ಚರಿತ್ರೆಯಲ್ಲಿ ಒಡೆಯರ ಕಾಲದ ಸಾಹಿತ್ಯ ಎಂಬೊಂದು ಘಟ್ಟವೇ ಇದೆ. ಚಿಕ್ಕದೇವರಾಜ, ಮುಮ್ಮಡಿ ಕೃಷ್ಣರಾಜ, ಅಳಿಯಲಿಂಗರಾಜ, ದೇವಲಾಪುರದ ನಂಜುಂಡ ತಮ್ಮ ಕೃತಿ ಸಂಖ್ಯೆಗಳಿಂದ ಕೆಂಪುನಾರಾಯಣ ಹೊಸಗನ್ನಡ ಗದ್ಯದ ಪ್ರಾರಂಭದಿಂದ, ಸಂಚಿಹೊನ್ನಮ್ಮತನ್ನಸರಳ ಸಾಂಗತ್ಯದಿಂದ ಇಲ್ಲಿ ಸ್ಮರಣೀಯರಾಗಿದ್ದಾರೆ ಎಂದರು.

ಸೃಜನಶೀಲ ಸಾಹಿತ್ಯದಂತೆ, ಸೃಜನೇತರವಾದ ವಿದ್ತ್ತಿನ ಕ್ಷೇತ್ರಕ್ಕೂ ಮೈಸೂರು ಪ್ರಸಿದ್ಧವಾಗಿದೆ. ಬಿಎಂಶ್ರೀ, ತೀನಂಶ್ರೀ, ಡಿಎಲ್‌ಎನ್‌, ದೇಜಗೌ, ಎಚ್‌.ದೇವೀರಪ್ಪಮ ಎನ್‌.ಅನಂತರಂಗಾಚಾರ್‌, ಟಿ.ವಿ.ವೆಂಕಟಾಚಲ ಶಾಸ್ತ್ರೀ, ಬಿ.ಎಸ್‌.ಸಣ್ಣಯ್ಯ, ವೈ.ಸಿ.ಭಾನುಮತಿ ಮುಂತಾದ ಹಲವಾರು ವಿದ್ವಾಂಸರ ಸಾಲಿನಿಂದಾಗಿ ಮೈಸೂರು ವಿದ್ವತ್ತಿನ ನಂದನವನವಾಗಿದೆ. ಆದರೆ, ಇಂದಿನ ವಿದ್ವತ್‌ ಕ್ಷೇತ್ರದ ಪರಿಸ್ಥಿತಿಯೇ ಬದಲಾಗಿದ್ದು, ಯುವ ಸಮೂಹಕ್ಕೆ ವ್ಯಾಕರಣ, ಛಂದಸ್ಸು, ಅಲಂಕಾರಶಾಸಗಳು ಕಠಿಣ ಹಾಗೂ ನೀರಸ ಎನಿಸಿವೆ. ಹಳಗನ್ನಡ,ಶಾಸನ, ನಿಘಂಟುಶಾಸ ಭಾಷಾ ವಿಜ್ಞಾನ ಮುಂತಾದ ವಿಷಯಗಳನ್ನು ಕಲಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ವಿದ್ವತ್‌ ಕ್ಷೀಣಿಸಿದಂತೆ, ಆ ಭಾಷೆಯೂ ಕ್ಷೀಣಿಸಿದ ಹಾಗಾಗುತ್ತದೆ ಎಂದು ಹೇಳಿದರು.

ಕಬಿನಿ ಬೃಂದಾವನ ನಿರ್ಮಾಣ: ಬಜೆಟ್‌ನಲ್ಲಿ ಘೋಷಣೆ :

ಕೆಆರ್‌ಎಸ್‌ ನಲ್ಲಿರುವ ಬೃಂದಾವನ ಉದ್ಯಾನದಂತೆ ಕಬಿನಿಯಲ್ಲೂ 48 ಕೋಟಿ ವೆಚ್ಚದಲ್ಲಿ ಉದ್ಯಾನವನನಿರ್ಮಿಸಲು ಬಜೆಟ್‌ನಲ್ಲಿ ಘೋಷಣೆ ಮಾಡಲಾಗುವುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

ಮಂಗಳವಾರ ಎಚ್‌.ಡಿ.ಕೋಟೆ ತಾಲೂಕಿನ ಮೈಸೂರುಗಡಿಭಾಗದಲ್ಲಿರುವ ಕಂಚಮಳ್ಳಿಯ ಹತ್ತಿರ ಸ್ವಾಗತಕಮಾನನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಜನರು ಎಚ್‌.ಡಿ.ಕೋಟೆ ಹೆಸರು ಕೇಳಿರುತ್ತಾರೆ. ಆದರೆ ಇಲ್ಲಿನ ಪ್ರವಾಸೋದ್ಯಮ ವೈಶಿಷ್ಟ್ಯತೆಗಳು ತಿಳಿದಿರುವುದಿಲ್ಲ. ಈ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿರುವ ಪ್ರಕೃತಿ ಸಂಪತ್ತನ್ನುಪರಿಚಯಸಲು ಸ್ವಾಗತ ಕಮಾನು ನೆರವಾಗಲಿದೆ ಎಂದರು.

ಎಚ್‌.ಡಿ.ಕೋಟೆ ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದ್ದು, ಒಂದು ಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ದೊರಕಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೈಗೊಳ್ಳಲಾಗುವುದು. ಈ ಮೂಲಕ ಜಿಲ್ಲೆಯ ಅಭಿವೃದ್ಧಿಯನ್ನು ಮಾಡಲಾಗುವುದು. ಅಲ್ಲದೆ ಜಿಲ್ಲೆಯ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗೂ ಸಹ ನಾನು ಬದ್ಧನಿದ್ದೇನೆ ಎಂದರು.

ಗಡಿ ತಾಲೂಕುಗಳಿಗೆ ವಿಶೇಷ ಪ್ಯಾಕೇಜ್‌ ಘೋಷಿಸಿ :

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅನಿಲ್‌ ಚಿಕ್ಕಮಾದು ಮಾತನಾಡಿ, ಎಚ್‌.ಡಿ.ಕೋಟೆ ಹಿಂದುಳಿದ ತಾಲೂಕು ಎನಿಸಿಕೊಂಡರೂ ಬುಡಕಟ್ಟು ಜನರಿರುವ ತಾಲೂಕಿನಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ತಾಲೂಕಿನ ಜನರ ಪುಣ್ಯ.ಸಾವಿರ ವರ್ಷಗಳಇತಿಹಾಸವಿರುವ ಎಚ್‌.ಡಿ.ಕೋಟೆ ತಾಲೂಕು ಜಗತ್ತಿನಲ್ಲೇ ಪರಿಚಿತವಾಗಿದೆ. ಇಲ್ಲಿನ 4 ಜಲಾಶಯಗಳು, ಇತಿಹಾಸಪ್ರಸಿದ್ಧ ಸ್ಥಳಗಳು, ಪುರಾತತ್ವ ದೇವಾಲಯಗಳಿವೆ. ಜೊತೆಗೆ ಗಡಿಭಾಗದ ತಾಲೂಕಿನಲ್ಲಿ ಕನ್ನಡ, ತಮಿಳು, ಮಲೆಯಾಳಂ, ತೆಲುಗು ಭಾಷಿಗರಿದ್ದು, ಗಡಿ ಭಾಗದಲ್ಲಿ ಕನ್ನಡ ಕ್ಷೀಣಿಸುತ್ತಿದೆ. ಗಡಿಭಾಗದ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಪ್ಯಾಕೇಜ್‌ಘೋಷಿಸಬೇಕು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರುಸಹಕರಿಸಬೇಕು ಎಂದು ಕೋರಿದರು. ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಭವನಕ್ಕೆ ನಿವೇಶನ ಮಂಜೂರು ಮಾಡಬೇಕು. ತಾಲೂಕು ಅಷ್ಟೇ ಅಲ್ಲದೆ ರಾಜ್ಯದ ಯಾವುದೇ ಸರ್ಕಾರಿ ಶಾಲೆಗಳನ್ನು ಮುಚ್ಚಿಸಬಾರದೆಂದು ಮನವಿ ಮಾಡಿದರು.

 

-ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next