Advertisement

ಕೋಟ: ಕಾಶೀ ಮಠಾಧೀಶರ ಚಾತುರ್ಮಾಸ್ಯ ವ್ರತ

01:15 AM Jul 11, 2019 | Sriram |

ಮಂಗಳೂರು: ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮತ್‌ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರು ಕೋಟ ಶ್ರೀ ಕಾಶೀಮಠದ ಶ್ರೀ ಮುರಲೀಧರ ಕೃಷ್ಣ ಮುಖ್ಯಪ್ರಾಣ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತವನ್ನು ಜು. 22 ರಿಂದ ಆಚರಿಸಲಿದ್ದಾರೆ.

Advertisement

ಗುರುವಾರ ಮುನಿಯಾಲು ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ಕಾಂನಿಂದ ಆಗಮಿಸಲಿರುವ ಸ್ವಾಮೀಜಿಯವರನ್ನು ಕೋಟದ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದ ಸಮೀಪದಿಂದ ಮೆರವಣಿಗೆಯಲ್ಲಿ ಸ್ವಾಗತಿಸಲಾಗುವುದು.

ಚಾತುರ್ಮಾಸ್ಯದ ಅಂಗವಾಗಿ ಹೊರೆಕಾಣಿಕೆ ಸಮರ್ಪಣೆ ಆಯೋಜಿಸಿದ್ದು, ರವಿವಾರ ಸಂಜೆ 4 ಗಂಟೆಗೆ ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ. ಜು. 19ರಿಂದ ಜು. 21ರ ವರೆಗೆ ಸಾನಿಧ್ಯ ಹವನಾದಿಗಳು ಜರಗಲಿದ್ದು, ಜು. 22ರ ಸೋಮವಾರ ಶ್ರೀ ವ್ಯಾಸ ರಘುಪತಿ ದೇವರಿಗೆ ಶತ ಕಲಶಾಭಿಶೇಕ, ಲಘುವಿಷ್ಣು ಕಲಶಾಭಿಶೇಕ, ಕನಕಾಭಿಶೇಕ, ಮುದ್ರಾಧಾರಣೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆಯ ಬಳಿಕ ಮೃತ್ತಿಕಾ ಪೂಜನೆಯೊಂದಿಗೆ ಚಾತುರ್ಮಾಸ ವ್ರತ ಆರಂಭ ವಾಗಲಿದೆ.

ಚಾತುರ್ಮಾಸ್ಯ ಅವಧಿಯಲ್ಲಿ ಭಜನೆ, ಭಾಗವತ ಹವನ, ಭಜನ ಸಪ್ತಾಹ, ಋಕ್‌ಸಂಹಿತಾ ಯಾಗ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ ಇಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next