Advertisement

ಮೈಸೂರು-ಕುಶಾಲನಗರ ರೈಲು ಮಾರ್ಗಕ್ಕೆ 1,855 ಕೋಟಿ ಮೀಸಲು

12:17 PM Jul 12, 2019 | Suhan S |

ಮೈಸೂರು: ಮೈಸೂರು-ಕುಶಾಲನಗರ ನಡುವೆ ನೂತನ ರೈಲು ಮಾರ್ಗ ನಿರ್ಮಾ ಣಕ್ಕಾಗಿ ಕೇಂದ್ರ ಸರ್ಕಾರ 2019-20ನೇ ಸಾಲಿನ ಆಯವ್ಯಯದಲ್ಲಿ 1855 ಕೋಟಿ ರೂ. ಮೀಸಲಿರಿಸಿದೆ.

Advertisement

ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಮೈಸೂರು (ಬೆಳಗೊಳ)-ಕುಶಾಲ ನಗರ ನಡುವಿನ 87 ಕಿ.ಮೀ. ರೈಲು ಮಾರ್ಗ ನಿರ್ಮಾಣವಾದಲ್ಲಿ ಹುಣಸೂರು, ಪಿರಿಯಾಪಟ್ಟಣ, ಟಿಬೆಟಿಯನ್ನರ ಪುನರ್‌ವಸತಿ ಕೇಂದ್ರ ಬೈಲಕುಪ್ಪೆ, ಕುಶಾಲ ನಗರದ ಜನತೆಗೆ ಅನುಕೂಲವಾಗಲಿದ್ದು, ಇದರೊಂದಿಗೆ ಪ್ರವಾಸೋದ್ಯಮ ಅಭಿವೃದ್ಧಿ ಜೊತೆಗೆ ವಾಣಿಜ್ಯೋದ್ಯಮವು ಬೆಳವಣಿಗೆಯಾಗಲಿದೆ.

ಹಲವು ಅಡೆತಡೆಗಳ ನಡುವೆಯೂ ಕೇಂದ್ರ ಸರ್ಕಾರ ನೂತನ ರೈಲು ಮಾರ್ಗಕ್ಕೆ ಒಪ್ಪಿಗೆ ನೀಡಿ ಹಣ ಕಾದಿರಿಸಿದ್ದು, ರಾಜ್ಯ ಸರ್ಕಾರ ತನ್ನ ಪಾಲಿನ ಶೇ.50 ಸಹಭಾಗಿತ್ವದ ಭೂಮಿಯನ್ನು ಸ್ವಾಧೀನಪಡಿಸಿಕೊಡಬೇಕಿದೆ.

ಇದರೊಂದಿಗೆ ನೈಋತ್ಯ ರೈಲ್ವೆ ವಲಯದಲ್ಲಿ ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಡಲು ಬಜೆಟ್‌ನಲ್ಲಿ ಒಟ್ಟಾರೆ 3,516 ಕೋಟಿ ಹಣ ನೀಡಲಾಗಿದ್ದು, ಕಳೆದ ಬಜೆಟ್‌ನಲ್ಲಿ ನೀಡಲಾಗಿದ್ದ 2,990 ಕೋಟಿಗಿಂತ ಶೇ.18ರಷ್ಟು ಹೆಚ್ಚು ಹಣ ನೀಡಲಾಗಿದೆ.

ಕೇಂದ್ರ ಸರ್ಕಾರ ಈ ಹಣವನ್ನು ಮೈಸೂರು (ಬೆಳಗೊಳ)-ಕುಶಾಲ ನಗರ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ 1855 ಕೋಟಿ, ಮೈಸೂರು ನಗರ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ 50 ಕೋಟಿ, ನಿಲ್ದಾಣದಲ್ಲಿನ ಶೌಚಾಲಯ, ಪ್ಲಾಟ್ಫಾರಂ, ಲಿಫ್ಟ್ ವ್ಯವಸ್ಥೆ ಕಲ್ಪಿಸಲು, ಅಶೋಕ±‌ುರಂ ಮತ್ತು ಕಡಕೊಳ ರೈಲು ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ 50 ಕೋಟಿ.

Advertisement

ಚಾಮರಾಜ ಪುರಂ, ನಂಜನಗೂಡು ಟೌನ್‌, ಕೆ.ಆರ್‌.ನಗರ, ಬದನಗುಪ್ಪೆ, ಕೊಣನೂರು, ಅರ್ಜುನಹಳ್ಳಿ, ಬೀರಹಳ್ಳಿ, ಕವಲಂದೆ, ಚಿನ್ನದಗುಡಿ ಹುಂಡಿ ಹಾಲ್r, ಅಕ್ಕಿ ಹೆಬ್ಟಾಳ್‌, ಸುಜಾತಪುರಂ ಹಾಲ್r, ತಾಂಡವಪುರ ಹಾಲ್r, ಕೆಆರ್‌ಎಸ್‌, ಬೆಳಗೊಳ, ಸಾಗರಕಟ್ಟೆ, ಹೊಸ ಅಗ್ರಹಾರ ನಿಲ್ದಾಣಗಳಲ್ಲಿ ಹೈಲೆವಲ್ ಪ್ಲಾಟ್ಫಾರಂಗಳ ನಿರ್ಮಾಣ.

ಅಶೋಕಪುರಂ – ಕಡಕೊಳ, ನಂಜನಗೂಡು ಟೌನ್‌- ಚಾಮರಾಜ ನಗರ ನಡುವೆ ಸಬ್‌ವೇಗಳ ನಿರ್ಮಾಣಕ್ಕಾಗಿ 5.70 ಕೋಟಿ. ಬೆಳಗೊಳ- ಸಾಗರಕಟ್ಟೆ, ಹೊಸ ಅಗ್ರಹಾರ- ಅಕ್ಕಿ ಹೆಬ್ಟಾಳು, ಅಕ್ಕಿ ಹೆಬ್ಟಾಳು- ಮಂದಗೆರೆ ನಡುವೆ ಸಬ್‌ವೇ ನಿರ್ಮಾಣಕ್ಕಾಗಿ 9.5 ಕೋಟಿ ಹಣ ಮೀಸಲಿಡಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next