Advertisement

Jammu -Kashmir; 185 ಮಂದಿಯಿಂದ ಜಮೀನು ಖರೀದಿ

08:54 PM Apr 05, 2023 | Team Udayavani |

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ದು ಮಾಡಿ 2019ರಲ್ಲಿ ಕೇಂದ್ರ ಸರ್ಕಾರ ಆದೇಶ ರದ್ದು ಮಾಡಿತ್ತು. ಜತೆಗೆ ದೇಶದ ಇತರ ಭಾಗದವರೂ ಜಮೀನು ಖರೀದಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಸದ್ಯ ಬಿಡುಗಡೆಯಾಗಿರುವ ಮಾಹಿತಿ ಪ್ರಕಾರ ಒಟ್ಟು 185 ಮಂದಿ ಜಮೀನು ಖರೀದಿ ಮಾಡಿದ್ದಾರೆ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್‌ ರಾಜ್ಯಸಭೆಗೆ ತಿಳಿಸಿದ್ದಾರೆ.

Advertisement

2020, 2021 ಮತ್ತು 2022ರಲ್ಲಿ ಈ ಖರೀದಿ ಮಾಡಲಾಗಿದೆ. ವಿಶೇಷವೆಂದರೆ ಲಡಾಖ್‌ನಲ್ಲಿ ಮಾತ್ರ ಹೊರಗಿನವರು ಯಾರೂ ಜಾಗ ಖರೀದಿಸಿಲ್ಲ! 2020ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಒಬ್ಬ ವ್ಯಕ್ತಿ ಜಾಗ ಖರೀದಿಸಿದ್ದರು. 2021ರಲ್ಲಿ 57 ಮಂದಿ, 2022ರಲ್ಲಿ 127 ಮಂದಿ ಖರೀದಿ ಮಾಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಆದರೆ, ದೇಶಿಯ ಅಥವಾ ವಿದೇಶಿ ಕಂಪನಿಗಳು ಕೇಂದ್ರಾಡಳಿತ ಪ್ರದೇಶದಲ್ಲಿ ಹೂಡಿಕೆ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next