Advertisement
ನೆದರ್ಲೆಂಡ್ಸ್‌ನಲ್ಲಿ ನಡೆಯುತ್ತಿರುವ “ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್’ನಲ್ಲಿ ವಿಶ್ವ ಚಾಂಪಿಯನ್ ಆಟಗಾರ, ಚೀನದ ಡಿಂಗ್ ಲಿರೆನ್ ಅವರಿಗೆ 4ನೇ ಸುತ್ತಿನಲ್ಲಿ ಆಘಾತವಿಕ್ಕುವ ಮೂಲಕ ಆರ್. ಪ್ರಜ್ಞಾನಂದ ಅಗ್ರಸ್ಥಾನದ ಗೌರವ ಸಂಪಾದಿಸಿದರು. ಇವರ ಒಟ್ಟು ಫಿಡೆ ರೇಟಿಂಗ್ ಅಂಕವೀಗ 2748.3ಕ್ಕೆ ಏರಿದೆ. 5 ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಹೊಂದಿರುವ ಅಂಕ 2748.
ಡಿಂಗ್ ಲಿರೆನ್ ವಿರುದ್ಧ ಕಪ್ಪು ಕಾಯಿಗಳೊಂದಿಗೆ ಆಡಲಿಳಿದ ಆರ್. ಪ್ರಜ್ಞಾನಂದ 62 ನಡೆಗಳಲ್ಲಿ ಗೆಲುವು ಸಾಧಿಸಿದರು. ಇದರೊಂದಿಗೆ ಹಾಲಿ ವಿಶ್ವ ಚಾಂಪಿಯನ್ ಆಟಗಾರ ನನ್ನು ಮಣಿಸಿದ ಭಾರತದ 2ನೇ ಚೆಸ್ ಆಟಗಾರನೆನಿಸಿದರು. ವಿಶ್ವನಾಥನ್ ಆನಂದ್ ಮೊದಲಿಗ. ಪ್ರಜ್ಞಾನಂದ 2023ರ ಟಾಟಾ ಸ್ಟೀಲ್ ಟೂರ್ನಿಯಲ್ಲೂ ಲಿರೆನ್ ವಿರುದ್ಧ ಜಯ ಸಾಧಿಸಿದ್ದರು. 13 ಸುತ್ತುಗಳ ಪಂದ್ಯಾವಳಿ
“ಇದೊಂದು ಸಂತೋಷದ ಸಂಗತಿ. ಆದರೆ ನನ್ನ ವೈಯಕ್ತಿಕ ಗುರಿ ಏನಿದ್ದರೂ ಅತ್ಯುತ್ತಮ ಪ್ರದರ್ಶನ ನೀಡುವುದು. ಇದು ಅತ್ಯಂತ ಕಠಿನ ಪಂದ್ಯಾವಳಿ. ಉಳಿದೆಲ್ಲ ಟೂರ್ನಿಗಳು 9 ಸುತ್ತುಗಳನ್ನು ಹೊಂದಿದ್ದರೆ ಇಲ್ಲಿ 13 ಸುತ್ತುಗಳಿವೆ. ಅಂದರೆ, ಒಂದು ಹೆಚ್ಚುವರಿ ಕೂಟವನ್ನು ಆಡಿದ ಅನುಭವವಾಗು ತ್ತದೆ’ ಎಂಬುದಾಗಿ ಪ್ರಜ್ಞಾನಂದ ಹೇಳಿದರು. ಮಾಸ್ಟರ್ ರೌಂಡ್‌ನಲ್ಲಿ ಪ್ರಜ್ಞಾನಂದ 2.5 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
Related Articles
Advertisement