Advertisement

18 ಕ್ವಿಂಟಲ್‌ ಮಿರ್ಚಿ ಬಜ್ಜಿ!

10:44 PM Jan 13, 2020 | Lakshmi GovindaRaj |

ಕೊಪ್ಪಳ: ಅಜ್ಜನ ಜಾತ್ರೆ ಬಂತೆಂದರೆ ಸಾಕು ಬಿಸಿ ಬಿಸಿ ಮಿರ್ಚಿ ಸವಿಯುವುದೇ ಒಂದು ಭಾಗ್ಯ. ಇಲ್ಲಿಯ ಗೆಳೆಯರ ಬಳಗವು ಕೆಲವು ವರ್ಷಗಳಿಂದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಿರ್ಚಿ ಸೇವೆ ಸಲ್ಲಿಸುತ್ತ ಬಂದಿದ್ದು, ಈ ವರ್ಷ 18 ಕ್ವಿಂಟಲ್‌ನಷ್ಟು ಮಿರ್ಚಿ ವ್ಯವಸ್ಥೆ ಮಾಡಿದೆ.

Advertisement

300 ಬಾಣಸಿಗರು 18 ಕ್ವಿಂಟಲ್‌ ಹಸಿಕಡಲೆ ಹಿಟ್ಟು, 10 ಬ್ಯಾರಲ್‌ ಒಳ್ಳೆಣ್ಣೆ, 15 ಕ್ವಿಂಟಲ್‌ ಹಸಿಮೆಣಸಿನಕಾಯಿ ಬಳಸಿ 18 ಲಕ್ಷ ಮಿರ್ಚಿಗಳನ್ನು ಸಿದ್ಧ ಪಡಿಸಿ ಭಕ್ತರಿಗೆ ಉಣ ಬಡಿಸಿದ್ದಾರೆ. ಮಿರ್ಚಿ ವಿತರಣೆಯ ಕಾರ್ಯ ಕೊಪ್ಪಳದ ಗವಿಮಠದ ವಿಶೇಷ ಖಾದ್ಯ.

Advertisement

Udayavani is now on Telegram. Click here to join our channel and stay updated with the latest news.

Next