Advertisement

47ಗಂಟೆಗಳ ರಕ್ಷಣಾ ಕಾರ್ಯ..ಕೊಳವೆ ಬಾವಿಗೆ ಬಿದ್ದ ಮಗುವಿನ ರಕ್ಷಣೆ

01:36 PM Mar 22, 2019 | Sharanya Alva |

ಹರ್ಯಾಣ; 18 ತಿಂಗಳ ಗಂಡು ಮಗುವೊಂದು ಬರೋಬ್ಬರಿ 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಘಟನೆ ಹರ್ಯಾಣದ ಹಿಸಾರ್ ಜಿಲ್ಲೆಯಲ್ಲಿ ಬುಧವಾರ ನಡೆದಿತ್ತು. ಕೊನೆಗೂ 47 ಗಂಟೆಗಳ ಸತತ ಕಾರ್ಯಾಚರಣೆ ಮೂಲಕ ಮಗುವನ್ನು ರಕ್ಷಿಸಿ ಶುಕ್ರವಾರ ಯಶಸ್ವಿಯಾಗಿ ಹೊರತೆಗೆದಿದ್ದಾರೆ.

Advertisement

ಬೋರ್ ವೆಲ್ ಒಳಗೆ ಬಿದ್ದಿದ್ದ ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದ್ದು, ಮಗು ಆರೋಗ್ಯದಿಂದ ಇದೆ ಎಂದು ಹಿಸಾರ್ ನ ಡೆಪ್ಯುಟಿ ಕಮೀಷನರ್ ಅಶೋಕ್ ಕುಮಾರ್ ಮೀನಾ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.

ಇಂಡಿಯನ್ ಆರ್ಮಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ ಡಿಆರ್ ಎಫ್) ಸಿಬ್ಬಂದಿಗಳು ಹಾಗೂ ಸ್ಥಳೀಯ ಅಧಿಕಾರಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಹಿಸಾರ್ ನ ಬಾಲ್ ಸಮಂದ್ ಗ್ರಾಮದ ಸಮೀಪ ಗ್ರಾಮದಲ್ಲಿ ಈ ಘಟನೆ ನಡೆದಿತ್ತು.

60 ಅಡಿ ಆಳದ ಕೊಳವೆ ಬಾವಿಗೆ ಒಂದೂವರೆ ವರ್ಷದ ನದೀಮ್ ಖಾನ್ ಎಂಬ ಮಗು ಬಿದ್ದಿತ್ತು. ಘಟನೆ ಬಗ್ಗೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ರಕ್ಷಣಾ ತಂಡ ಆಗಮಿಸಿ ಬೋರ್ ವೆಲ್ ಒಳಗೆ ಆಕ್ಸಿಜನ್ ಇಳಿಸಿ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಮೀನಾ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next