ಬೆಳಗಾವಿ: ಕಾರ್ಮಿಕ ಕುಟುಂಬಗಳನ್ನು ಗುರುತಿಸಿ ಅವರ ಮಕ್ಕಳಿಗೆ ಶಿಕ್ಷಣ, ಆರೋಗ್ಯ ವಿಮೆ ಸೇರಿ ಇತರ ಸೌಲಭ್ಯಗಳನ್ನು ಐತಿಹಾಸಿಕ ಎಂಬಂತೆ ಒದಗಿಸಲಾಗಿದೆ ಎಂದು ಕಾರ್ಮಿಕ ಇಲಾಖೆ ಸಚಿವ ಶಿವರಾಮ್ ಹೆಬ್ಟಾರ್ ತಿಳಿಸಿದರು.
ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ನ ಎಚ್.ಎಂ.ರಮೇಶಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿ, ಕಾರ್ಮಿಕರಲ್ಲಿ ಹಲವು ವಿಭಾಗ ಇವೆ. ಆ ಎಲ್ಲರನ್ನೂ ಸೇರಿಸಿದರೆ 1 ಕೋಟಿ 81 ಸಾವಿರದಷ್ಟಿದ್ದಾರೆ. ಕೋವಿಡ್ ಸಮಯದಲ್ಲಿ ಈ ಶ್ರಮ ಪೋರ್ಟಲ್‌ನಲ್ಲಿ 18 ಲಕ್ಷ ಕಾರ್ಮಿಕರು ನೋಂದಣಿಯಾಗಿದ್ದಾರೆ. ಅಟಲ್‌ಜೀ ಪೆನ್ಶನ್ ಸ್ಕೀಮ್‌ನಲ್ಲಿ 2 ಲಕ್ಷ ರೂ. ವಿಮೆ ಮಾಡಿಸಲಾಗಿದೆ. ಕಾರ್ಮಿಕರಿಗೂ ಕೂಡ ಉಚಿತ ಬಸ್ ಪಾಸ್ ಒದಗಿಸಲಾಗಿದ್ದು, ಬೊಮ್ಮಾಯಿ ನೇತೃತ್ವದ ಸರಕಾರದಲ್ಲಿ ಕಾರ್ಮಿಕರ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟಿದೆ ಎಂದರು.