Advertisement

ಬಿಜೆಪಿ ಇಂಡಿ ಮಂಡಲದಿಂದ 18 ಕಿ.ಮೀ. ಪಾದಯಾತ್ರೆ

12:47 PM Jan 19, 2018 | |

ಇಂಡಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿ ಇಂಡಿ ಮಂಡಲ ವತಿಯಿಂದ ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿಕಾಂತ ಬಗಲಿ ನೇತೃತ್ವದಲ್ಲಿ ಕಾರ್ಯಕರ್ತರು ತಾಲೂಕಿನ ತಡವಲಗಾ ಗ್ರಾಮದಿಂದ ಇಂಡಿ ನಗರದವರೆಗೆ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಿ, ಕಂದಾಯ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ತಡವಲಗಾ ಗ್ರಾಮದ ಮರುಳಸಿದ್ಧೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಕಾರ್ಯಕರ್ತರು, ನಂತರ ಸುಮಾರು 18 ಕಿ.ಮೀ. ಪಾದಯಾತ್ರೆ ಕೈಗೊಂಡರು. ಈ ವೇಳೆ ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ನಿದ್ರಾವ್ಯವಸ್ಥೆಯಲ್ಲಿ ಆಡಳಿತ ನಡೆಸುತ್ತಿದೆ. ರೈತ ವಿರೋಧಿ ಯಾಗಿ, ಹಿಂದೂ ವಿರೋಧಿಯಾಗಿ ಕಾರ್ಯ ಮಾಡುತ್ತಿದೆ.

ಈ ಭಾಗದಲ್ಲಿ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿಸಿಲ್ಲ. ರಾಜ್ಯಾದ್ಯಂತ ಇಂತಹ ಅನೇಕ ಕಾಮಗಾರಿಗಳನ್ನು ಪೂರ್ಣಗೊಳಿಸಿಲ್ಲ. ಅಗತ್ಯವಾದ ಪರಿಹಾರ ನೀಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ಶೀಘ್ರವೇ ನೀರು ಹರಿಸಬೇಕು, ಏತ ನೀರಾವರಿಗೆ ಸ್ವಾ 
ಧೀನಪಡಿಸಿಕೊಂಡ ಜಮೀನಿಗೆ ಸೂಕ್ತ ಪರಿಹಾರ ನೀಡಬೇಕು, ಇಂಡಿ ಶಾಖಾ ಕಾಲುವೆಯ ಉಪ ಕಾಲುವೆ ಸಂಖ್ಯೆ 18ಎ, 19ಬಿ ಮತ್ತು 24 ಇವುಗಳಿಗೆ ಸರಿಯಾಗಿ ನೀರು ಪೂರೈಸಬೇಕು, ನಿಂಬೆ ಅಭಿವೃದ್ಧಿ ಮಂಡಳಿ ಪೂರ್ಣ ಪ್ರಮಾಣದಲ್ಲಿ ಕಾರ್ಯಪ್ರಾರಂಭಿಸಿ ನಿಂಬೆ ಬೆಳೆಯುವ ರೈತರಿಗೆ ನ್ಯಾಯ ಒದಗಿಸಬೇಕು, ತಾಲೂಕಿನ ಎಲ್ಲ ಕೆರೆಗಳನ್ನು ಪೂರ್ಣ ಪ್ರಮಾಣದಲ್ಲಿ ತುಂಬಿಸಬೇಕು, ತೊಗರಿ ಖರೀದಿ ಕೇಂದ್ರಗಳಲ್ಲಿ ಸ್ಥಗಿತಗೊಳಿಸಿದ ನೋಂದಣಿ ಕಾರ್ಯ ಶೀಘ್ರವೇ ಪ್ರಾರಂಭಿಸಬೇಕು, ತೊಗರಿ ಖರೀದಿ ಕೇಂದ್ರಗಳನ್ನು ಹೆಚ್ಚಿಸಬೇಕು ಮತ್ತು ಪ್ರತೀ ರೈತರಿಗೆ 20 ಕ್ವಿಂಟಲ್‌ ಬದಲು 50 ಕ್ವಿಂಟಲ್‌ ವರೆಗೂ ಖರೀದಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ, ದಯಾಸಾಗರ ಪಾಟೀಲ, ಶ್ರೀಶೈಲಗೌಡ ಬಿರಾದಾರ, ರವಿಕಾಂತ ಬಗಲಿ, ವಿರಾಜ ಪಾಟೀಲ, ಶೀಲವಂತ ಉಮರಾಣಿ, ಶಂಕರಗೌಡ ಪಾಟೀಲ, ಅನಿಲ ಜಮಾದಾರ, ಮುತ್ತಿ ದೇಸಾಯಿ, ಪಾಪು ಕಿತ್ತಲಿ, ಸಿದ್ದಲಿಂಗ ಹಂಜಗಿ, ಅಪ್ಪುಗೌಡ ಪಾಟೀಲ, ಮಂಜುನಾಥ ವಂದಾಲ, ಶಿವಯೋಗಿ ರೂಗಿಮಠ, ರವಿ ಖಾನಾಪುರ, ಅನಿಲಗೌಡ ಬಿರಾದಾರ, ಸಂಜು ದಶವಂತ, ಭೀಮ ಪ್ರಚಂಡಿ, ಬುದ್ದುಗೌಡ
ಪಾಟೀಲ, ರಾಮಸಿಂಗ ಕನ್ನೊಳ್ಳಿ, ಪುಟ್ಟಣಗೌಡ ಪಾಟೀಲ, ಸುನೀಲ ರಬಶೆಟ್ಟಿ, ಸತೀಶ ಕುಂಬಾರ, ಸುನಂದಾ ವಾಲೀಕಾರ, ಅನಸೂಯಾ ಮದರಿ, ಗುರುಬಾಯಿ ಬಂಡಿ, ಅದೃಶ್ಯಪಪ ವಾಲಿ, ಭೀಮಸಿಂಗ ರಾಠೊಡ, ಮಲ್ಲಿಕಾರ್ಜುನ ಕಿವುಡೆ, ಸೋಮು ಕುಂಬಾರ, ಗಣಪತಿ ಬಾಣಿಕೋಲ, ದೇವೇಂದ್ರ ಕುಂಬಾರ, ಶಾಂತು ಕಂಬಾರ, ಮಚೇಂದ್ರ ಕದಮ್‌, ಧರ್ಮು ಮದರಖಂಡಿ, ಪ್ರಕಾಶ ಗವಳಿ ಸೇರಿದಂತೆ 500 ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next