Advertisement

ಪೂರ್ವ ಚೀನ: ಮಂಜಿನಿಂದಾಗಿ 30 ವಾಹನಗಳ ಢಿಕ್ಕಿ; 18 ಸಾವು

07:31 PM Nov 15, 2017 | Team Udayavani |

ಬೀಜಿಂಗ್‌ : ಪೂರ್ವ ಚೀನದಲ್ಲಿ ದಟ್ಟನೆಯ ಮಂಜು ಮುಸುಕಿದ ಕಾರಣ ಗೋಚರತೆ ನಿಕೃಷ್ಟವಾಗಿದ್ದಾಗ ಹೈವೇ ಒಂದರಲ್ಲಿ  ಸಾಲು ಗಟ್ಟಿ ನಿಂತ ವಾಹನಗಳು ಪರಸ್ಪರ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತಗಳಲ್ಲಿ 18 ಮಂದಿ ಮಡಿದು ಇತರ 19 ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯಾಧಿಕಾರಿಗಳು ತಿಳಿಸಿದ್ದಾರೆ.

Advertisement

ಸುಮಾರು 30 ವಾಹನಗಳು ರಸ್ತೆ ಕಾಣದ ಸ್ಥಿತಿಯಲ್ಲಿ  ಢಿಕ್ಕಿ ಹೊಡೆದುಕೊಂಡ ಘಟನೆ ಪೂರ್ವ ಚೀನದ ಆನ್‌ಹೂಯಿ ಪ್ರಾಂತ್ಯದ ಫ‌ುಯಾಂಗ್‌ ನಗರದಲ್ಲಿ ಸಂಭವಿಸಿತೆಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next