Advertisement

ಅಮೇಠಿ ಪೊಲೀಸರ ಆಲೌಟ್‌ ಅಭಿಯಾನ: 18 ಕ್ರಿಮಿನಲ್‌ಗ‌ಳ ಸೆರೆ

04:26 PM Aug 11, 2018 | Team Udayavani |

ಅಮೇಠಿ, ಉತ್ತರ ಪ್ರದೇಶ : ಅಮೇಠಿ ಪೊಲೀಸರು ಕೈಗೊಂಡಿರುವ ಆಲೌಟ್‌ ಅಭಿಯಾನದಲ್ಲಿ ವಿವಿಧ ಅಪರಾಧಗಳಲ್ಲಿ ಶಾಮೀಲಾಗಿದ್ದ 18 ಮಂದಿ ಕ್ರಿಮಿನಲ್‌ಗ‌ಳನ್ನು ಸೆರೆ ಹಿಡಿಯಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಸುಪರಿಂಟೆಂಡೆಂಟ್‌ ಬಿ ಸಿ ದುಬೆ ತಿಳಿಸಿದ್ದಾರೆ.

Advertisement

ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಈ ರೀತಿಯ ಅಭಿಯಾನಗಳು ಮುಂದುವರಿಯಲಿವೆ ಎಂದವರು ಹೇಳಿದರು. 

ಇನ್ನೊಂದು ಅಭಿಯಾನದಲ್ಲಿ ಪೀಪರ್‌ಪುರ ಎಸ್‌ಎಚ್‌ಓ ದೀಪೇಂದ್ರ ಸಿಂಗ್‌ ನೇತೃತ್ವದ ಪೊಲೀಸ್‌ ತಂಡ ಕಲಬೆರಕೆ ಮದ್ಯ ತಯಾರಿ ಮತ್ತು ಪೂರೈಕೆ ಜಾಲದ ಇಬ್ಬರನ್ನು ಬಂಧಿಸಲಾಗಿದೆ ಎಂದು ದುಬೆ ತಿಳಿಸಿದರು.

ತಲಾ 945 ಬಾಟಲುಗಳಿರುವ 21 ಪ್ಯಾಕೆಟ್‌ ಕಲಬೆರಕೆ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದವರು ತಿಳಿಸಿದರು. ಎಸ್‌ಪಿ ಅನುರಾಗ್‌ ಆರಿ ಅವರು ತಂಡಕ್ಕೆ 5,000 ರೂ. ನಗದು ಇನಾಮು ನೀಡಿದ್ದಾರೆ ಎಂದು ತಿಳಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next