Advertisement

“18 ದಿನಗಳು’ಡಸ್ಕ್ ಆಫ್‌ ಆನ್‌ ಇರಾ

01:06 AM Aug 28, 2019 | Lakshmi GovindaRaj |

ಬೆಂಗಳೂರು: ವ್ಯಾಸ “ಮಹಾಭಾರತ’ ಮಹಾಕಾವ್ಯದ “18 ದಿನಗಳ’ ಕುರುಕ್ಷೇತ್ರ ಯುದ್ಧ ಸನ್ನಿವೇಶದ ಅಭೂತಪೂರ್ವ ಅನುಭವವನ್ನು ಪ್ರಭಾತ್‌ ಆರ್ಟ್ಸ್ ಇಂಟರ್‌ನ್ಯಾಷನಲ್‌ ಸಂಸ್ಥೆಯ ಕಲಾವಿದರು ನೃತ್ಯರೂಪಕದಲ್ಲಿ ಅ.31ಮತ್ತು ಸೆ.1 ರಂದು ಸಂಜೆ 6.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಸ್ತುತಪಡಿಸಲು ಸಜ್ಜಾಗಿದ್ದಾರೆ.

Advertisement

ಶರತ್‌ ಆರ್‌. ಪ್ರಭಾತ್‌ ಹಾಗೂ ಭರತ್‌ ಆರ್‌. ಪ್ರಭಾತ್‌ ನಿರ್ದೇಶನದ 18 ದಿನಗಳ ಡಸ್ಕ್ ಆಫ್‌ ಆನ್‌ ಇರಾ (ಯುಗದ ಮುಸ್ಸಂಜೆ) ಕ್ಲಾಸಿಕಲ್‌ ನೃತ್ಯ, ನಟನೆ ಮತ್ತು ಸಂಗೀತ ರೂಪಕ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮೂಡಿಬರಲಿದ್ದು, ಇದರಲ್ಲಿ 50 ಮಂದಿ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಮಹಾಭಾರತದ ಪಾತ್ರಗಳಿಗೆ ಗ್ರಾಮೀಣ ಕಲಾವಿದರು, ಚಿತ್ರನಟರು, ನುರಿತ ನೃತ್ಯಗಾರ್ತಿಯರು ಹಾಗೂ ಮಾರ್ಷಲ್‌ ಆರ್ಟ್ಸ್ ಪ್ರವೀಣರು ಜೀವ ತುಂಬಲಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯ ವೇದಿಕೆ ಮೇಲೆ “18 ದಿನಗಳು’ ಮೈಥಾಲಜಿ ವಿತ್‌ ಟೆಕ್ನಾಲಜಿ ಎಂಬ ವಿಶೇಷತೆಯೊಂದಿಗಿನ 90 ನಿಮಿಷಗಳ ಪ್ರದರ್ಶನ ಇದಾಗಿದೆ.

ಶ್ರೇಷ್ಠ ಭಾರತ ಸೃಷ್ಟಿ: ಪ್ರಭಾತ್‌ ಆರ್ಟ್ಸ್ ಇಂಟರ್‌ನ್ಯಾಷನಲ್‌ನ “18 ದಿನಗಳು’ ಅದ್ಭುತ, ಅವಿಸ್ಮರಣೀಯ ಪ್ರಯೋಗವಾಗಿದೆ. ಸೃಜನಶೀಲತೆ, ಜನಾಂಗೀಯತೆ, ಶಾಸ್ತ್ರೀಯ ನೃತ್ಯ, ನಾಟಕ ಮತ್ತು ಸಂಗೀತ ಸಮ್ಮಿಲನದ ಶ್ರೇಷ್ಠ ಭಾರತೀಯ ಇತಿಹಾಸವನ್ನು ಸೃಷ್ಟಿ ಮಾಡುವ ಪ್ರಯತ್ನ ಇದಾಗಲಿದೆ. ಅದಕ್ಕಾಗಿ ಭರತನಾಟ್ಯ, ಕಥಕ್‌, ಸಮರ ಕಲೆ, ಸಮಕಾಲೀನ ಇತರೆ ನೃತ್ಯ ಪ್ರಕಾರಗಳ 60ಕ್ಕೂ ಹೆಚ್ಚು ಕಲಾವಿದರು ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

20ಕ್ಕೂ ಅಧಿಕ ತಾಂತ್ರಿಕ ತಂಡದಿಂದ ಅನಿಮೇಷನ್‌, ಮ್ಯಾಜಿಕ್‌ ಟ್ರಿಕ್ಸ್‌, ವೇಷಭೂಷಣ, ಮೇಕಪ್‌, ಲೈಟಿಂಗ್‌, ಸೌಂಡ್‌ಸಿಸ್ಟಂ ಪರಿಣತ ತಂಡ ಸಾಥ್‌ ನೀಡಲಿದ್ದಾರೆ. ಶರತ್‌ ಆರ್‌. ಪ್ರಭಾತ್‌ ನೃತ್ಯ, ಸಂಗೀತ ಸಂಯೋಜನೆ ಮತ್ತು ವೇಷಭೂಷಣದ ಹೊಣೆಗಾರಿಕೆಯತ್ತ ಗಮನಹರಿಸಿದ್ದಾರೆ. ಆ.31 (ಶನಿವಾರ) ಕನ್ನಡದಲ್ಲಿ ಹಾಗೂ ಸೆ.1 (ಭಾನುವಾರ) ಇಂಗ್ಲಿಷ್‌ನಲ್ಲಿ “18 ದಿನಗಳು’ ಪ್ರದರ್ಶನಗೊಳ್ಳಲಿದೆ ಎಂದು ಭರತ್‌ ಆರ್‌. ಪ್ರಭಾತ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next