ಇಡೀ ಮಹಾಭಾರತವೇ ಒಂದು ಸೊಗಸು. ಅದರಲ್ಲೂ ಆ ಯುದ್ಧದ ಚಿತ್ರಣ ನೀಡುವ 18 ದಿನಗಳು, ಅತ್ಯಂತ ಕುತೂಹಲದ ಪರ್ವ. ಮಹಾಭಾರತದ ಆ ಕುತೂಹಲದ ಘಟ್ಟವನ್ನು ನೃತ್ಯದ ಫ್ರೆàಮ್‌ನಲ್ಲಿ ತೋರಿಸಲು, ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್ ಕಲಾವಿದರು ಸಜ್ಜಾಗಿದ್ದಾರೆ. “18 ದಿನಗಳು- ಯುಗಾಂತ್ಯದ ಆರಂಭ’ ಎಂಬ ಈ ನೃತ್ಯನಾಟಕ ಹಲವು ವೈಶಿಷ್ಟಗಳ ಸಮಾಗಮ.
ವ್ಯಾಸ ವಿರಚಿತ ಮಹಾಭಾರತದ ಕಥೆಯಲ್ಲಿ ಆ ಹದಿನೆಂಟು ದಿನಗಳೇ ರೋಚಕ ಸನ್ನಿವೇಶ. ಒಬ್ಬೊಬ್ಬರ ಸಾಮರ್ಥ್ಯ, ಸಮರಕಲೆ, ಬುದ್ಧಿವಂತಿಕೆ, ಯುದ್ಧತಂತ್ರ ಇತ್ಯಾದಿಯನ್ನು ಆಳವಾಗಿ ಚಿಂತಿಸಿ, ಯುಕ್ತಾಯುಕ್ತವಾಗಿ ನಿರ್ಮಿಸಲಾಗಿದೆ. ಶ್ರೀಕೃಷ್ಣನ ಧರ್ಮದ ನಡೆಯನ್ನು ಸಾಕ್ಷತ್ಕರಿಸುವ ದರ್ಶನ ಇಲ್ಲಾಗಲಿದೆ.
ಈ ನೃತ್ಯನಾಟಕವನ್ನು ರಂಗಭೂಮಿ, ಶಾಸ್ತ್ರೀಯ ನೃತ್ಯ ಮತ್ತು ಆಧುನಿಕ ತಂತ್ರಜ್ಞಾನದ ಕೈಚಳಕಗಳನ್ನು ಬಳಸಿ ಸಂಯೋಜಿಸಲಾಗಿದೆ. ಆ್ಯನಿಮೇಷನ್ ತಂತ್ರಗಳ ಮೂಲಕ, ಕುರುಕ್ಷೇತ್ರ ಯುದ್ಧದ ಚಿತ್ರಣವನ್ನು ತೋರಿಸಲಾಗುವುದು. ಸಂಸ್ಕೃತದ ಶ್ಲೋಕಗಳು ಹೃದಯಕ್ಕೆ ಇಳಿಯಲಿವೆ. ಯುವ ಕಲಾ ಪ್ರತಿಭೆಗಳಾದ ಶರತ್ ಆರ್. ಪ್ರಭಾತ್, ಭರತ್ ಆರ್. ಪ್ರಭಾತ್ ನೇತೃತ್ವದಲ್ಲಿ 60 ಕಲಾವಿದರ ತಂಡವು ಪ್ರದರ್ಶನಕ್ಕೆ ಸಿದ್ಧವಾಗಿದ್ದು, ನೃತ್ಯನಾಟಕದ ಅವಧಿ 90 ನಿಮಿಷ. ಟಿಕೆಟ್‌ಗಳು ಬುಕ್ ಮೈ ಶೋನಲ್ಲಿ ಲಭ್ಯ.
ಎಲ್ಲಿ?: ರವೀಂದ್ರ ಕಲಾಕ್ಷೇತ್ರ
ಯಾವಾಗ?: ಜ.18, ಶನಿವಾರ, ಸಂಜೆ 6.15
ಹೆಚ್ಚಿನ ಮಾಹಿತಿ: 9886576659