Advertisement

ಕೊಡಗು: 18 ಪಾಸಿಟಿವ್‌, 2 ಸಾವು

01:37 AM Jul 13, 2020 | Hari Prasad |

ಮಡಿಕೇರಿ: ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ  ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪದ 86 ವರ್ಷದ ವೃದ್ಧೆ ಮತ್ತು ಚೇರಂಬಾಣೆಯ ನಿವಾಸಿ 77 ವರ್ಷದ ವೃದ್ಧರೊಬ್ಬರು ರವಿವಾರ ಮೃತಪಟ್ಟಿದ್ದಾರೆ.

Advertisement

ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿಗೆ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ವೃದ್ಧೆಯು ಅಧಿಕ ರಕ್ತದೊತ್ತಡದ ಹಿನ್ನೆಲೆಯಲ್ಲಿ ಜು. 6ರಂದು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಜು. 7ರಂದು ಸೋಂಕು ದೃಢಪಟ್ಟಿತ್ತು.

ವೆಂಟಿಲೇಟರ್‌ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಶನಿವಾರ ತಡರಾತ್ರಿ ಅಸುನೀಗಿದ್ದಾರೆ.

ಕಿಡ್ನಿ ಸಮಸ್ಯೆ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಕೋವಿಡ್‌ ಆಸ್ಪತ್ರೆಗೆ ಜು. 9ರಂದು ಪುನರ್‌ ದಾಖಲಾಗಿದ್ದ ಚೇರಂಬಾಣೆಯ 77 ವರ್ಷದ ವೃದ್ಧ ರವಿವಾರ ಸಂಜೆ ಮೃತಪಟ್ಟರು.

Advertisement

ಒಂದೇ ದಿನ 18 ಪ್ರಕರಣ
ಕೊಡಗು ಜಿಲ್ಲೆಯಲ್ಲಿ ರವಿವಾರ ಮೂವರು ಆರೋಗ್ಯ ಕಾರ್ಯಕರ್ತರು ಸೇರಿದಂತೆ 18 ಮಂದಿಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 169ಕ್ಕೆ ಏರಿಕೆಯಾಗಿದೆ.

ಕುಶಾಲನಗರದಲ್ಲಿ ಇತ್ತೀಚೆಗೆ ಕೋವಿಡ್ 19 ಸೋಂಕಿನಿಂದ ಸಾವಿಗೀಡಾದ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ 7 ಮಂದಿ, ಮಹಾರಾಷ್ಟ್ರದಿಂದ ಮರಳಿದ ಕೊಡ್ಲಿಪೇಟೆ ಊರುಗುತ್ತಿಯ ಮಹಿಳೆ, ಸುಂಟಿಕೊಪ್ಪದ 11 ವರ್ಷದ ಬಾಲಕಿ, ಮಡಿಕೇರಿ ಪುಟಾಣಿ ನಗರದ ಆ್ಯಂಬುಲೆನ್ಸ್‌ ಚಾಲಕ ಬಾಧಿತರಲ್ಲಿದ್ದಾರೆ. ಅವರಲ್ಲಿ 60 ವರ್ಷ ದಾಟಿದ ಇಬ್ಬರು ಇದ್ದಾರೆ.

ಸ್ವಯಂ ಸೇವಕರಿಂದ ವೃದ್ಧೆಯ ಶವ ಸಂಸ್ಕಾರ
ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ರಾತ್ರಿ ಮೃತರಾದ ಗೋಣಿಕೊಪ್ಪದ ಮಹಿಳೆಯ ಶವ ಸಂಸ್ಕಾರವನ್ನು ಕೋವಿಡ್‌-19 ಮಾರ್ಗಸೂಚಿ ಪ್ರಕಾರ ಮಡಿಕೇರಿ ನಗರ ಶಾಂತಿನಿಕೇತನ ಘಟಕದ ಬಜರಂಗದಳದ ಕೋವಿಡ್‌ ವಾರಿಯರ್ಸ್‌ ಮಡಿಕೇರಿಯ ಹಿಂದೂ ರುದ್ರಭೂಮಿಯಲ್ಲಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next